ವಿಜಯಪುರ ನಗರದ ಐತಿಹಾಸಿಕ ಸ್ಮಾರಕ ತಾಜಬಾವಡಿಗೆ ಜಿಲ್ಲಾಧಿಕಾರಿಗಳ ಭೇಟಿ, ಪರಿಶೀಲನೆ

ವಿಜಯಪುರ,ಫೆ.21: ನಗರದಲ್ಲಿರುವ ಐತಿಹಾಸಿಕ ಬಾವಿ ತಾಜಬಾವಡಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ರಾಜ್ಯದ ಸ್ಮಾರಕ ಸಂರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ಮಾರಕಗಳನ್ನು ಅಭಿವೃದ್ಧಿ ಪಡಿಸಿ ಕಾರ್ಫರೇಟ್ ಸಾಮಾಜಿಕ ಹೊಣೆಗಾರಿಕೆ(CSR) ಅಡಿಯಲ್ಲಿ ಸ್ಮಾರಕಗಳ ದತ್ತು ಪಡೆಯಲು ಅವಕಾಶವನ್ನು ಕಲ್ಪಿಸಿ ದತ್ತು ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ.
Adopt A monument ಯೋಜನೆಯಡಿ ತಾಜಬಾವಡಿ ಸ್ಮಾರಕವನ್ನುWorld Monument Fund India Associations Mumbai ಸಂಸ್ಥೆಯು ದತ್ತು ಪಡೆದಿದ್ದು, ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಿಲು ವಿವಿಧ ಯೋಜನೆ ಹಮ್ಮಿಕೊಂಡಿರುತ್ತಾರೆ. ಈ ಸಂಬಂಧ ಜಿಲ್ಲಾಧಿಕಾರಿಗಳು ತಾಜಬಾವಡಿ ಸ್ಮಾರಕದ ಸುತ್ತ-ಮುತ್ತಲಿರುವ ಪ್ರದೇಶಗಳಿಗೆ ಭೇಟಿ ನೀಡಿ ನಿವಾಸಿಗಳ ಜೊತೆ ಸಮಾಲೋಚನೆ ಮಾಡಿದರು ಹಾಗೂ ತಾಜಬಾವಡಿ ಸ್ಮಾರಕದ ಸುತ್ತಮುತ್ತಲಿರುವ ಶಿಥಿಲಾವಸ್ಥೆಯಲ್ಲಿರುವ ಗೋಡೆಗಳನ್ನು ಸಂರಕ್ಷಿಸಲು, ಸ್ಮಾರಕ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪೆÇ್ರಬೇಷನರಿ ಐಪಿಎಸ್ ಅಧಿಕಾರಿ ಶಾಲೂ, ಪಾಲಿಕೆ ಆಯುಕ್ತ ಬದ್ರುದ್ದಿನ್ ಸೌದಾಗರ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ, ಜಿಲ್ಲಾ ವಕ್ಪ್ ಅಧಿಕಾರಿ ತಬಸುಮ್.ಎಮ್., ನಿರೀಕ್ಷಕ ಮೋಹಸಿನ ಜಮಖಂಡಿ, ಪಾಲಿಕೆ ಅಧೀಕ್ಷಕ ಅಭಿಯಂತರ ಹಿರೇಮಠ, ಅಭಿಯಂತರ ಪ್ರಕಾಶ ಪಾಟೀಲ, ಅನಿಲಕುಮಾರ ಬಣಜಿಗೇರ ಮತ್ತಿತರರು ಇದ್ದರು.