ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 31 ಅಭ್ಯರ್ಥಿಗಳಿಂದ 37.ನಾಮಪತ್ರ

ವಿಜಯಪುರ:ಎ.20: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಐದನೇ ದಿನವಾದ ಏಪ್ರಿಲ್ 19ರ ಬುಧವಾರÀÀದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 31 ಅಭ್ಯರ್ಥಿಗಳಿಂದ ಒಟ್ಟು 37 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 05, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 05, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 04, 29-ಬಬಲೇಶ್ವರ ಮತಕ್ಷೇತ್ರದಿಂದ 03, 30-ಬಿಜಾಪುರ ನಗರ ಮತಕ್ಷೇತ್ರದಿಂದ 06, 31-ನಾಗಠಾಣ (ಎಸ್‍ಸಿ) ಮತಕ್ಷೇತ್ರದಿಂದ 04, 32-ಇಂಡಿ ಮತಕ್ಷೇತ್ರದಿಂದ 05 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 05 ನಾಮಪತ್ರಗಳು ಸೇರಿದಂತೆ ಒಟ್ಟು 37 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.
ಮುದ್ದೇಬಿಹಾಳ ಮತಕ್ಷೇತ್ರದಿಂದ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ -2 ನಾಮಪತ್ರಗಳು)., ಅಮೀನಪ್ಪಗೌಡ ಪಾಟೀಲ (ಭಾರತೀಯ ಜನತಾ ಪಾರ್ಟಿ-3 ನಾಮಪತ್ರಗಳು) ಅವರು ನಾಮಪತ್ರ ಸಲ್ಲಿಸಿದ್ದಾರೆ.
ದೇವರಹಿಪ್ಪರಗಿ ಮತಕ್ಷೇತ್ರದಿಂದ ಸೋಮನಗೌಡ.ಬ ಪಾಟೀಲ (ಸಾಸನೂರ) ಭಾರತೀಯ ಜನತಾ ಪಕ್ಷ (ಬಿಜೆಪಿ), ರಾಜು ಮಾದರ (ಗುಬ್ಬೆವಾಡ) (ಬಹುಜನ ಸಮಾಜ ಪಕ್ಷ), ಗುರುಶಾಂತವೀರ ಸ್ವಾಮೀಜಿ ಹಿರೇಮಠ ಇಟಗಿ (ಕರ್ನಾಟಕ ಜನಸೇವಾ ಪಕ್ಷ), ಸುಣಗಾರ ಶರಣಪ್ಪ ತಿಪ್ಪಣ್ಣ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಕೆಂಪೇಗೌಡ ಈರನಗೌಡ ಕೇಶಪ್ಪಗೋಳ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಸವನಬಾಗೇವಾಡಿ ಮತಕ್ಷೇತ್ರದಿಂದ ಸೋಮನಗೌಡ ಪಾಟೀಲ (ಜನತಾದಳ ಜಾತ್ಯಾತೀತ-2 ನಾಮಪತ್ರಗಳು ), ಅಲ್ಲಾಬಕ್ಷ ಬಿಜಾಪುರ (ಎಂಐಎಂ), ರಾಜೇಶ್ವರಿ ಯರನಾಳ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರದಿಂದ ಬಸಪ್ಪ ಹೊನವಾಡ (ಜನತಾ ದಳ ಜಾತ್ಯಾತೀತ), ಜ್ಯೋತಿಬಾ ಸಾಳುಂಕೆ (ಪಕ್ಷೇತರ) ಹಾಗೂ ಮಂಜುಳಾ ಚವ್ಹಾಣ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಿಜಾಪುರ ನಗರ ಮತಕ್ಷೇತ್ರದಿಂದ ರಾಜು ಪವಾರ (ಪಕ್ಷೇತರ), ಹಾಸಿಂಪೀರ ವಾಲೀಕಾರ (ಆಮ್‍ಆದ್ಮಿ ಪಾರ್ಟಿ (ಆಪ್)), ಅಬ್ದುಲಹಮೀದ ಮುಶ್ರೀಫ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‍ಸಿ)- 2 ನಾಮಪತ್ರಗಳು), ಬಸನಗೌಡ ಪಾಟೀಲ ಯತ್ನಾಳ (ಭಾರತೀಯ ಜನತಾ ಪಾರ್ಟಿ (ಬಿಜೆಪಿ)), ಐಜಾಜ್ ಅಹ್ಮದ್ ಜಾಗೀರದಾರ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಗಠಾಣ ಮತಕ್ಷೇತ್ರದಿಂದ ಶ್ರೀಕಾಂತ ಬಂಡಿ (ಕಲ್ಯಾಣ ರಾಜ್ಯ ಪ್ರಗತಿ ಪಕ್ಷ), ಕಲ್ಲಪ್ಪ ತೊರವಿ (ಬಹುಜನ ಸಮಾಜ ಪಕ್ಷ), ಸಂಜೀವ ಐಹೋಳೆ (ಭಾರತೀಯ ಜನತಾ ಪಾರ್ಟಿ), ಸಂಜೀವ ಮಾನೆ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇಂಡಿ ಮತಕ್ಷೇತ್ರದಿಂದ ಅಶೋಕ ಜಾಧವ (ಕರ್ನಾಟಕ ರಾಷ್ಟ್ರ ಸಮಿತಿ), ಗೊಲ್ಲಾಳ ನಿಂಗನಗೌಡ ಪಿ.ಜ್ಯೋತಿಗೊಂಡ (ಪಕ್ಷೇತರ), ಗೋಪಾಲ ಪಾಟೀಲ (ಆಮ್‍ಆದ್ಮಿ ಪಾರ್ಟಿ), ಉಮರಫಾರೂಖ ಸೈಹೀದಸಾಬ ಬಾಗವಾನ (ಪಕ್ಷೇತರ), ಕಾಸುಗೌಡ ಈರಪ್ಪಗೌಡ ಬಿರಾದಾರ (ಭಾರತೀಯ ಜನತಾ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಸಿಂದಗಿ ಮತಕ್ಷೇತ್ರದಿಂದ ಮುರಗೆಪ್ಪಗೌಡ ಎಸ್.ರದ್ದೇವಾಡಗಿ (ಆಮ್ ಆದ್ಮಿ ಪಾರ್ಟಿ), ಭೂಸನೂರ ರಮೇಶ ಬಾಳಪ್ಪ (ಭಾರತೀಯ ಜನತಾ ಪಾರ್ಟಿ), ಅಶೋಕ ಮಲ್ಲಪ್ಪ ಮನಗೂಳಿ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್- 2 ನಾಮಪತ್ರ) ಹಾಗೂ ಅಕ್ಬರ್ ಖಾಜಾಸಾಬ ಮುಲ್ಲಾ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.