ವಿಜಯಪುರ ಜಿಲ್ಲೆಯ ಆರೋಗ್ಯ ಪರಿಸ್ಥಿತಿ, ಆರೈಕೆ ಕೇಂದ್ರಗಳು, ಬೆಡ್‍ಗಳು ಮತ್ತು ಆಕ್ಸಿಜನ್ ಸ್ಥಿತಿಗತಿ ಹಾಗೂ ಲಸಿಕೆ ಹಾಕುವ ಕುರಿತು ಆರೋಗ್ಯ ಸಚಿವರ ಜೊತೆ ಚರ್ಚೆ

ವಿಜಯಪುರ, ಮೇ.19-ರಾಜ್ಯದ ಆರೋಗ್ಯ ಇಲಾಖೆ ಸಚಿವ ಕೆ. ಸುಧಾಕರರವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಶಶಿಕಲಾ ಜೋಲ್ಲೆರವರ ಜೊತೆ ವಿಜಯಪುರ ಜಿಲ್ಲೆಯ ಆರೋಗ್ಯ ಪರಿಸ್ಥಿತಿ, ಆರೈಕೆ ಕೇಂದ್ರಗಳು, ಬೆಡ್‍ಗಳು ಮತ್ತು ಆಕ್ಸಿಜನ್ ಸ್ಥಿತಿಗತಿ ಹಾಗೂ ಲಸಿಕೆ ಹಾಕುವ ಕುರಿತು ಇತ್ಯಾದಿ ಆರೋಗ್ಯಕ್ಕೆ ಸಂಭಂದಿಸಿದಂತೆ ಮತ್ತು ಅಭಿವೃದ್ದಿಗಳ ಕುರಿತಾಗಿ ನಡೆದ ಸಭೆಯಲ್ಲಿ ವಿಜಯಪುರ ನಗರದ ಶಾಸಕ ಬಸನಗೌಡರಾ. ಪಾಟೀಲ್ (ಯತ್ನಾಳ) ರವರು ಭಾಗವಹಿಸಿ ಚರ್ಚೆಯನ್ನು ಮಾಡಿದರು.
ಜಿಲ್ಲಾ ಆಸ್ಪತ್ರೆಯ ಸುಪರ್ ಸೇಶ್ಪಾಲಿಟಿ ಆಸ್ಪತ್ರೆಯಲ್ಲಿ ಹೆಚ್ಚಿನ ಬೆಡ್ ಕಲ್ಪಿಸುವುದು, ಆಕ್ಸಿಜನ ಪೂರೈಕೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಶಿಲ್ಡ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಕುರಿತು ಚರ್ಚಿಸಿದರು. ಇದಕ್ಕೆ ಆರೋಗ್ಯ ಸಚಿವರು ಹೆಚ್ಚಿನ ಲಸಿಕೆ ಪೂರೈಸಲು ಸೂಚಿಸಿದರು.
ಮತ್ತು ಪ್ರಥಮ ಹಾಗೂ ಎರಡನೆಯ ಡೋಸ್ ಕುರಿತಾಗಿ ಗೊಂದಲಮಯಕ್ಕೆ ತೆರೆ ಎಳೆದು 2ನೇ ಡೋಸ್ 84 ದಿನಕ್ಕೆ ಹೋಗಿರುವುದರಿಂದ ಉಳಿಕೆ ಲಸಿಕೆಯನ್ನು ಪ್ರಥಮಡೋಸ್ ಆಗಿ ನೀಡಲು ಮಾರ್ಗಸೂಚಿಯನ್ನು ತಯಾರಿಸಿ ಕಳುಹಿಸಲು ಸಚಿವರು ತಿಳಿಸಿದರು.
ಇದರಿಂದ ನಗರ ಶಾಸಕರ ಆಶಯದಂತೆ ಹೆಚ್ಚಿನ ಲಸಿಕೆ ಪೂರೈಕೆ ಜೊತೆಗೆ ಪ್ರಥಮ ಡೋಸ್ (45 ವರ್ಷ ಮೇಲ್ಪಟ್ಟ) ಹಾಕಿಸಲು ಅನುಮತಿ ಪಡೆದಂತಾಗಿದೆ ಶೀಘ್ರವೇ ಪ್ರಥಮ ಡೋಸ್ ಅಭಿಯಾನಕ್ಕೆ ಮತ್ತೆ ಶಾಸಕರು ಚಾಲನೆ ನೀಡಲಿದ್ದಾರೆ.
ಸಭೆಯಲ್ಲಿ ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯದ ಆರೋಗ್ಯ ಅಧಿಕಾರಿಗಳು ಇನ್ನಿತರರು ಭಾಗವಹಿಸಿದ್ದರು.