ವಿಜಯಪುರ ಜಿಲ್ಲೆಯವರು ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ:ಶಾಸಕ ಪಾಟೀಲ

ಇಂಡಿ:ಅ.9: ಅಮೇರಿಕದ ನಾಸಾ ಸಂಸ್ಥೆ ಮೀರಿ ಭಾರತದ ಇಸ್ರೋ ಸಂಸ್ಥೆ ಬೆಳೆಯುತ್ತಿರುವುದು ಅಭಿಮಾನದ ಸಂಗತಿ.ನಮ್ಮ ಜಿಲ್ಲೆಯವರು ಹಲವು ಜನ ವಿಜ್ಞಾನಿಗಳು ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಭಾನುವಾರ ಪಟ್ಟಣದ ಗುರುಭವನದಲ್ಲಿ ಬಂಜಾರ ನೌಕರರ ಪತ್ತಿನ ಸಹಕಾರಿ ಸಂಘ ಇಂಡಿ ಹಾಗೂ ಬಂಜಾರ ನೌಕರರ ಕ್ಷೇಮಾಭಿವೃದ್ದಿ ಸಂಘ ಇಂಡಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಶಾಸಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಂಜಾರ ಸಮುದಾಯಕ್ಕೆ ಆಚಾರ,ವಿಚಾರ ,ಸಂಸ್ಕಾರ ನೀಡುವ ಕಾರ್ಯಕ್ಕೆ ಸೋಮನಿಂಗ ಮಹಾರಾಜರು ತೊಡಗಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ,ಅಂತಹ ಸ್ವಾಮೀಜಿ ಅವರನ್ನುಪಡೆದಿರುವುದು ಬಂಜಾರ ಸಮುದಾಯ ಸುದೈವ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಸಾಗೋಣ.

ಹಿಂದಿನ ಬಿಜೆಪಿ ಸರ್ಕಾರ ಈ ಸಮುದಾಯಕ್ಕೆ ನೋವಿನ ನಿರ್ಣಯ ಮಾಡಿತ್ತು.ಕಾಂಗ್ರೆಸ್ ಸರ್ಕಾರ ಬದ್ದತೆಯಿಂದ ಅಂತಹ ಅಚಾತುರ್ಯದ ನಿರ್ಣಯವನ್ನು ಕೆಲವು ಸಮುದಾಯಕ್ಕೆ ಸಲಭ್ಯ ಕೊಟ್ಟಿದ್ದು,ಮತ್ತೇ ಅವರಿಗೆ ವಂಚಿತರನ್ನಾಗಿ ಮಾಡಬಾರದು ಎಂಬ ಚಿಂತನೆಯಿಂದ ಸರ್ಕಾರದ ಕರ್ತವ್ಯ ಎಂದು ಬಾವಿಸಿದೆ,ಅದನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದರು.ಭವಿಷ್ಯದಲ್ಲಿ ರಾಜಕೀಯ,ಶೈಕ್ಷಣಿಕ,ಸಾಮಾಜಿಕ ಎಲ್ಲ ರಂಗದಲ್ಲಿ ನಿಮ್ಮ ಜೊತೆ ನಾವಿರುತ್ತೇವೆ.ನನ್ನ ಚುನಾವಣೆಯಲ್ಲಿ ನನಗೆ ಶಕ್ತಿ ನೀಡಲು ಬಂಜಾರ ಸಮುದಾಯ ಮತ ಹಾಕಿದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ.ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಸೇವಾಲಾಲ ಅವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಎಷ್ಟು ಜನ ತಾಲೂಕು ಅಧಿಕಾರಿಗಳನ್ನು ತಂದಿದ್ದೇನೆ ಅವರಿಂದ ಒಂದು ಕಪ್ ಚಾಹ ಸ್ವೀಕರಿಸದೆ ತಂದಿದ್ದೇನೆ ,ಒಂದು ಕಪ್ ಚಾಹ ಕುಡಿದಿದ್ದೇನೆ ಎಂದರೆ ರಾಜಕೀಯ ನಿವೃತ್ತಿಯಾಗುತ್ತೇನೆ.ಅವರು ಖರೀದಿ ಮಾಡಿದರೆ ಇಲ್ಲಿ ಅಭಿವೃಯಾಗಲು ಸಾಧ್ಯವಿಲ್ಲ.ನೈತಿಕತೆ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ.

ರಸ್ತೆಗಳ ಸ್ಥಿತಿ ನೋಡಿದರೆ ನಮಗೆ ಕೆಟ್ಟ ಅನಿಸುತ್ತದೆ. ಆತಳಿತ ಪಕ್ಷದ ಶಾಸಕನಾಗಿ ನಾಗರಿಕ ಸಮಾಜದ ಅವಶ್ಯಕ ಕೆಲಗಳನ್ನು ಮಾಡಬೆಕಾಗಿದೆ.ಮುಖ್ಯಮಂತ್ರಿಗಳಿಗೆ ರಸ್ತೆ,ನೀರು,ಶಾಲಾ ಕಟ್ಟಡ,ಆರೋಗ್ಯ ಮುಖ್ಯ ಕೆಲಸಗಳು ಮಾಡಬೇಕಾಗುತ್ತದೆ.ಇಲ್ಲವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿದ್ದೇನೆ.ಮುಚ್ಚಿ ರಾಜಕಾರಣ ಮಾಡುವವನಲ್ಲ.ಯಾವ ಸರ್ಕಾರ ತಪ್ಪ ಮಾಡಿದರೂ ನಿರ್ಭಯವಾಗಿ ಹೇಳಬೇಕಾಗುತ್ತದೆ. ಸರ್ಕಾರ ಮಾರ್ಚ ವರೆಗೆ ಕಾಲಾವಕಾಶ ನಿಡಿದ್ದಾರೆ.ಮೊದಲು ಜನರ ಕಲ್ಯಾಣ, ಬಡವರ ಪರ ಕಲ್ಯಾಣ ಕೆಲಸಗಳು ಆಗಬೇಕು.ಯಾವ ಸರ್ಕಾರ ಬರುತ್ತದೆ,ಯಾರು ಶಾಸಕರಾಗುತ್ತಾರೆ ಮುಖ್ಯವಲ್ಲ.ಯಾರು ಸಮಾಜಕ್ಕಾಗಿ ಜನಪರ ಚಿಂತನೆಗಳನ್ನು ಮಾಡುತ್ತಾರೆ ಅದು ಮುಖ್ಯ ಎಂದು ಹೇಳಿದರು.ಭೀಮಾ ನಾಯ್ಕ ಅವರು ಗೆಲ್ಲುತ್ತಿದ್ದರು,ಕಾಂಗ್ರೆಸ್ಸಿನರೇ ಅವರನ್ನು ಸೋಲಿಸಿದರು.

ಕಾಂಗ್ರೆಸ್‍ನವರು ದೇಶದಲ್ಲಿ ಇನ್ನೂ ಹೆಚ್ಚು ಜನ ಗೆದ್ದು ಅಧಿಕಾರದಲ್ಲಿ ಇರುತ್ತಿದ್ದರು, ಈ ಸ್ಥಿತಿ ಬರಲು ಕಾಂಗ್ರೆಸ್ಸಿನವರೇ ಕಾಂಗ್ರೆಸ್ಸಿನವರಿಗೆ ಸೋಲಿಸುತ್ತಾರೆ.ಭೀಮಾನಾಯ್ಕ ಅವರಿಗೆ ಆಗಿರುವ ಅನ್ಯಾಯವನ್ನು ಸರಿದೂಗಿಸಲು ಮುಖ್ಯಮಂತ್ರಿ ಸಿದ್ದರಾಯ್ಯನವರು ದೊಡ್ಡ ಅವಕಾಶ ನೀಡಿ ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಿ,ನ್ಯಾಯ ನೀಡಿರುವ ಜನನಾಯಕ ಸಿದ್ದರಾಮಯ್ಯ ಎಂದು ಹೇಳಿದರು.ಪ್ರಕಾಶ ರಾಠೋಡ ಅವರು ಹಲವು ಬಾರಿ ಸೋತಿದ್ದರು,ಅವರಿಗೆ ಎಂಎಲ್ಸಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ಬಂಜಾರ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಸ್ವಾವಲಂಭಿಯಾಗಲು ಶಿಕ್ಷಣ ಮುಖ್ಯ.ಶಿಕ್ಷಣದಿಂದ ಅಧಿಕಾರ ಪಡೆದು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಸ್ರೋ ವಿಜ್ಞಾನಿ ವಿಲಾಸ ರಾಠೋಡ, ಡಾ.ಬಾಬು ನಾಯಕ,ಕಾಂತಾ ನಾಯಕ ,ಶಂಕರ ಚವ್ಹಾಣ, ರಾಜು ಜಾಧವ ಇತರರು ಮಾತನಾಡಿದರು. ಸೋಮಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಂಕರ ರಾಠೋಡ,ರಾಮು ರಾಠೋಡ, ಗೋವಿಂದ ರಾಠೋಡ, ಅರ್ಜುನ ಲಮಾಣಿ, ಶೇಖರ ನಾಯಕ, ಪಂಡಿತ ರಾಠೋಡ, ಸುಭಾಷ ರಾಠೋಡ, ಭೀಮು ರಾಠೋಡ, ಡಿ.ಜಿ.ರಾಠೋಡ, ಜಾವೀದ ಮೋಮಿನ, ಡಿ.ಎ.ಮುಜಗೊಂಡ, ಹರಿಶ್ಚಂದ್ರ ಪವಾರ, ಬಂಜಾರ ನೌಕರರ ಸಂಘದ ಅಧ್ಯಕ್ಷ ಜಯರಾಮ ಚವ್ಹಾಣ,ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಜಯಕುಮಾರ ನಾಯಕ, ಶ್ರೀಶೈಲ ಲಮಾಣಿ, ಶ್ರೀಕಾಂತ ಚವ್ಹಾಣ, ಸುರೇಶ ಚವ್ಹಾಣ,ಅರ್ಜುನ ಚವ್ಹಾಣ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು. ಈ ಸಂಧರ್ಬದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳಿಗೆ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸನ್ಮಾನಿಸಿದರು.