ವಿಜಯಪುರ ಜಿಲ್ಲೆಯಲ್ಲಿ ಮೂವರು ಕೋವಿಡ್ ಸೋಂಕಿತರ ಸಾವು

ವಿಜಯಪುರ, ಮೇ.3-ಜಿಲ್ಲೆಯಲ್ಲಿ ಮೂವರು ಕೋವಿಡ್ ಸೋಂಕಿತರ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ಕೋವಿಡ್ ಸೋಂಕಿತ 70 ವರ್ಷ ವಯೋಮಾನದ ಪುರುಷ ರೋಗಿ ಸಂಖ್ಯೆ 1371059 ಅವರು ಮೃತಪಟ್ಟಿದ್ದಾರೆ.ಅವರು ಸಾರಿ, ಕೆಮ್ಮು, ತೀವ್ರ ರಕ್ತದೊತ್ತಡ, ಉಸಿರಾಟ ತೊಂದರೆ, ಸಕ್ಕರೆ ಖಾಯಿಲೆ ಯಿಂದ ಬಳಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅದರಂತೆ 82 ವರ್ಷದ ವೃದ್ದೆ ರೋಗಿ ಸಂಖ್ಯೆ 1473962 ಐ ಎಲ್ ಐ, ಎದೆನೋವು, ತೀವ್ರ ಉಸಿರಾಟ ತೊಂದರೆ, ರಕ್ತದೊತ್ತಡ, ಸಕ್ಕರೆ ಖಾಯಿಲೆಯಿಂದ ಬಳಲಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿದ್ದಾರೆ.
ಅದರಂತೆ 32 ವರ್ಷದ ಪುರುಷ ರೋಗಿ ಸಂಖ್ಯೆ 1437001 ಜಿಲ್ಲಾ ಆಸ್ಪತ್ರೆಗೆ ತೀವ್ರ ಶ್ವಾಸಕೋಶ ತೊಂದರೆಯಿಂದ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತ ಪಟ್ಟಿದ್ದಾರೆ.
ಇವರೆಲ್ಲರ ಅಂತ್ಯ ಸಂಸ್ಕಾರವನ್ನು ಶಿಷ್ಠಾಚಾರದಂತೆ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.