
(ಸಂಜೆವಾಣಿ ವಾರ್ತೆ)
ವಿಜಯಪುರ :ಸೆ.12:ಜಿಲ್ಲೆಯಲ್ಲಿ ಮಳೆ ಸರಿಯಾಗಿ ಆಗದ ಕಾರಣ, ಮುಂಗಾರು ಬೆಳೆ ಕೈಕೊಟ್ಟಿದ್ದರಿಂದ ಭೀಕರ ಬರಗಾಲ ಬಿದ್ದಿರುವ ಹಿನ್ನೆಲೆ ಜನ, ಜಾನುವಾರುಗಳು ಪರಿಸ್ಥೀತಿ ತುಂಬಾ ಹದಗೆಟ್ಟಿವೆ. ತಕ್ಷಣ ಇದನ್ನು ಅರಿತುಕೊಂಡು ಸರ್ಕಾರ ಬರಗಾಲವೆಂದು ಘೋೀಷಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್) ವಿಜಯಪುರ ಜಿಲ್ಲಾ ಸಮಿತಿ ಪದಾಧಿಕಾರಿಗಳು ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ನಗರದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಉಪಾಧ್ಯಕ್ಷ, ಗೌರವ ಅಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ಬಗರ್ ಹುಕುಂ ಸರ್ಕಾರದ ಅರಣ್ಯ ಭೂಮಿ ಹಾಗೂ ಇನ್ನಿತರರ ಭೂಮಿಯನ್ನು ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಹಣ ತುಂಬುತ್ತಿದ್ದಾರೆ. ಫಾರ್ಮ್ ನಂ. 57 ತುಂಬಿರುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸರ್ಕಾರ ನಿರೀಕ್ಷಕರು ವರದಿ ಸಲ್ಲಿಸಿರುತ್ತಾರೆ. ಜಿಲ್ಲಾಧಿಕಾರಿಗಳು 57 ಫಾರ್ಮ್ ನಂ. ರಿಜೆಕ್ಟ್ ಮಾಡಿದ ಆದೇಶವನ್ನು ರದ್ದುಗೊಳಿಸಬೇಕು. ಕಂದಾಯ ಸಚಿವರು ಹೇಳಿದ್ದಾರೆ 5 ವರ್ಷದಲ್ಲಿರುವವರಿಗೆ ಹಕ್ಕು ಪತ್ರ ಕೊಡುತ್ತೇನೆಂದು ತಿಳಿಸಿರುತ್ತಾರೆ. ಅಕ್ರಮ ಸಕ್ರಮ ಕಮಿಟಿ ರಚಿಸಬೇಕು. ಅವರಿಗೆ ಹಕ್ಕು ಪತ್ರ ವಿತರಿಸಿ ಅನುಕೂಲ ಕಲ್ಪಿಸಬೇಕು ಎಂದರು.
ವಿಜಯಪುರ ನಾಲ್ಕು ನದಿ ಒಂದು ಡೋಣಿ ಹರಿದರು ರೈತರ ಭೂಮಿಗೆ ಹಾಗೂ ಕುಡಿಯಲು ನೀರು ಸಿಗದ ಕಾರಣ ಕಂಗಾಲಾಗಿದ್ದಾರೆ. ಬ್ರೀಟಿಷ್ ಆಳ್ವಿಕೆಯಲ್ಲಿ ವಿಜಯಪುರ ಜಿಲ್ಲೆ ಬರಗಾಲ ಪ್ರದೇಶವೆಂದು ಘೊಷಣೆ ಮಾಡಿದ್ದಾರೆ. ಇದರ ಸಲುವಾಗಿ ವಿಜಯಪುರ ನಗರದ ಅಂಬೇಡ್ಕರ್ ವೃತ್ತದ ಹತ್ತಿರ 1927ರಲ್ಲಿ ಬರಗಾಲ ನಿವಾರಣ ಮಂಡಳಿ ಉದ್ಘಾಟನೆ ಮಾಡಿದ್ದರು. ಇದ್ದರಿಂದಲೂ ಸಹಿತೆ ಯಾವುದೇ ಪ್ರಯೋಜನೆಯಾಗಿರುವುದಿಲ್ಲ. ಶಾಶ್ವತ ಬರಗಾಲದಿಂದ ಗುಳೆ ಹೋಗುವುದು, ಸಾಲದಿಂದ ರೈತರು ಆತ್ಮಹತ್ಯೆಗೆ ಶರಣಾಗುವುದು ಇದನ್ನು ಹೋಗಲಾಡಿಸುವುದಿಕ್ಕೆ ಕರ್ನಾಟಕ ಪ್ರಾಂತ ರೈತ ಸಂಘ ಸಮರ ಶೀಲ ಹೋರಾಟ ಹಮ್ಮಿಕೋಂಡಿರುವ ಹಿನ್ನಲೆ 1995 ರಲ್ಲಿ ನೀರಾವರಿಗಾಗಿ ಮಟ್ಟಿಹಾಳ ಕ್ರಾಸ್‍ನಲ್ಲಿ ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಸಚಿವರು ಬಂದು 17 ಕೋಟಿ ವೆಚ್ಚದ ಯೋಜನೆ ನೀರಾವರಿಗಾಗಿ ಜಾರಿ ಮಾಡುತ್ತೇವೆಂದು ಭರವಸೆ ನೀಡಿದ ಮೇಲೆ ಕಾಮಗಾರಿ ಪ್ರಾರಂಭಗೊಂಡವು. 1992 ರಲ್ಲಿ ನಿಲಗುಂದಿ ಸ್ವಾಮಿ ನೇತೃತ್ವದಲ್ಲಿ ಹಾಗೂ ಮಠಾಧಿಶರ ಹಲವು ಹೋರಾಟಗಾರ ಸಮ್ಮುಖದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಶಾಶ್ವತ ಬರಗಾಲ ನಿವಾರಣೆಗೆ ಗುಳೆ ಹೋಗಲು ತಪ್ಪಿಸಲು ಶಾಶ್ವತ ಬರಗಾಲ ನಿವಾರಣೆ ಯೋಜನೆ ರೂಪಿಸಬೇಕು. ನಮ್ಮ ಪಾಲಿನ 130 ಟಿಎಂಸಿ ಮತ್ತು 519 ಇದ್ದದ್ದು 574 ಎತ್ತರಕ್ಕೆ ಹೆಚ್ಚಿಸಿ ಸಂಪೂರ್ಣ ನೀರಾವರಿಗೆ ಒಳಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಅಣ್ಣಾರಾಯ ಈಳಗೇರ ಮಾತನಾಡಿ, ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಬೇಕು. ಬರಗಾಲ ಘೋಷಣೆಗೆ ಸಂಬಂಧಿಸಿ, ಕೇಂದ್ರ ಸರ್ಕಾರವು ತನ್ನ ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸಬೇಕು. ರಾಜ್ಯದಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು. ತಕ್ಷಣವೇ ಬಿಪಿಎಲ್ – ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲ ಪರಿಹಾರ ರೇಷನ್ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ಒದಗಿಸಬೇಕು. ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೆ ಕಡಿವಾಣ ವಿಧಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಮೇವು ಕುಂದು ಕೊರತೆ ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಕೂಡಲೇ ಕೇಂದ್ರ ಸರ್ಕಾರವು, ಎಲ್ಲಾ ರೈತರ,ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಬೇಕು. ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು. ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕು. ಬರಗಾಲದ ಕೂಲಿಯಾಗಿ 600 ರೂ ಪಾವತಿಸಬೇಕು. ರೈತರ ,ಕೃಷಿ ಕೂಲಿಕಾರರ, ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮ ಸಭೆ ನಡೆಸಬೇಕು . ಗ್ರಾಮದಿಂದ ನಡೆಯುವ ಸಂಕಷ್ಟ ವಲಸೆಗೆ ಗ್ರಾಮ ಪಂಚಾಯತಿ ಹಾಗೂ ತಾಲ್ಲೂಕು, ಜಿಲ್ಲಾಧಿಕಾರಿ ಗಳನ್ನು ಹೊಣೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಜಿ.ಪ್ರ. ಕಾರ್ಯದರ್ಶಿ ಭೀಮರಾಯ ಪೂಜಾರಿ, ಬಾಗೇವಾಡಿ ಅಧ್ಯಕ್ಷ ಖಾಜೇಸಾಬ ಕೋಲಾರ, ಸಲಿಂ ನಾಯಕೋಡಿ, ಅನುಸೂಯಾ ಹಜೇರಿ, ಮಹಿಬೂಬ ಮುಲ್ಲಾ, ಗಂಗಾರಾ ಪವಾರ, ಶಿವು ಹಿರೇಕುರಬರ, ಮಲ್ಲು ಬಗಲಿ, ಚಾಂದಸಾಬ ಗೌಂಡಿ, ಸುಮಿತ್ರಾ ಘೋಣಸಗಿ, ಕುಸುಮಾ ಹಜೇರಿ, ಮಹಿಬೀಬ ವಾಲೀಕಾರ, ರಾಜಮಾ ನಧಾಫ, ಮಹಿಬೂಬ ಪಾಂಡುಗೋಳ,ಹುಸೇನಸಾಬ ದೊಡ್ಡಮನಿ,ಸೋಮಲಿಂಗ ತಳಕಡೆ, ಅಮೋಘಸಿದ್ಧ ಕೆಂಪೆವಾಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.