ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅಂಬೇಡ್ಕರವರ ಜಯಂತಿ ಆಚರಣೆ

ವಿಜಯಪುರ,ಏ.15:ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರವರ 133ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವುದರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಮಾತನಾಡಿ, ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಮಾನವ ಕುಲದ ಶ್ರೇಷ್ಠ ಚಿಂತಕ, ದೀನ ದಲಿತರ ಹಾಗೂ ದುರ್ಬಲ ವರ್ಗದವರ ವಿಮೋಚನೆಗಾಗಿ ಜನಿಸಿದ ಮಹಾನಾಯಕ. ಇಂತಹ ಮಹಾನ್ ಚೇತನ ಈ ಜಗತ್ತಿನಲ್ಲಿ, ಅದರಲ್ಲೂ ಜಾತಿ ವ್ಯವಸ್ಥೆ ತುಂಬಿ ತುಳುಕುತ್ತಿದ್ದ ಭಾರತದಲ್ಲಿ ಹುಟ್ಟಿದ್ದೇ ಒಂದು ಮಹಾ ವಿಷ್ಮಯ. ಡಾ. ಬಾಬಾಸಾಹೇಬ ಅಂಬೇಡ್ಕರÀವರು ಕೇವಲ ದಲಿತರಿಗಾಗಿ ಮಾತ್ರ ಕೆಲಸ ಮಾಡಿದ್ದಾರೆ ಎನ್ನುವುದು ತಪ್ಪು. ಡಾ.ಅಂಬೇಡ್ಕರ್ ಅವರು ಈ ದೇಶದ ಪ್ರತಿಯೊಬ್ಬರಿಗಾಗಿಯೂ ಕೆಲಸ ಮಾಡಿದ್ದಾರೆ. ಇಂದು ದೇಶದ ಎಲ್ಲ ಜಾತಿಗಳ ಪ್ರತಿಯೊಬ್ಬರೂ ಕೂಡ ಡಾ.ಬಾಬಾಸಾಹೇಬ ಅಂಬೇಡ್ಕರÀವರು ಮಾಡಿದ ಕೆಲಸದ ಫಲಾನುಭವಿಗಳಾಗಿದ್ದಾರೆ, ಅಷ್ಟೇ ಅಲ್ಲ ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲಿದ್ದ ಮಹಿಳೆಯರಿಗೆ ಹಕ್ಕುಗಳನ್ನು ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಣರಾದವರೇ ಅಂಬೇಡ್ಕರ್ ಅವರು. ಈ ದೇಶದ ರಿಸರ್ವ ಬ್ಯಾಂಕ್, ಕೃಷಿ, ಕಾರ್ಮಿಕ, ನೀರಾವರಿ, ಅರ್ಥವ್ಯವಸ್ಥೆಯಂತಹ ಅನೇಕ ಕ್ಷೇತ್ರಗಳಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರÀವರ ಕೊಡುಗೆ ಅಪಾರವಾದುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಅಧ್ಯಕ್ಷೆ ಕಾಂತಾ ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರುಕ್ಸಾನಾ ಉಸ್ತಾದ, ಕಾಂಗ್ರೆಸ್ ಮುಖಂಡ ಡಿ.ಎಚ್. ಕಲಾಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಸುಭಾಷ ಕಾಲೇಬಾಗ, ಪೀರಪ್ಪ ನಡುವಿನಮನಿ, ಅಫ್ಜಲ್ ಜಾನವೆಕರ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಜಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರತಿ ಶಹಾಪೂರ, ಜಿಲ್ಲಾ ಕಾಂಗ್ರೆಸ್ ಅಂಗ ಘಟಕಗಳ ಅಧ್ಯಕ್ಷರುಗಳಾದ ಶಬ್ಬೀರ ಜಾಗೀರದಾರ, ನಿಂಗಪ್ಪಾ ಸಂಗಾಪೂರ, ದೇವಾನಂದ ಲಚ್ಯಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಹಾಜಿಲಾಲ ದಳವಾಯಿ, ಚನಬಸಪ್ಪಾ ನಂದರಗಿ, ಶರಣಪ್ಪ ಯಕ್ಕುಂಡಿ, ಅಸ್ಫಾಕ ಮನಗೂಳಿ, ಹಾಜಿಲಾಲ ದಳವಾಯಿ, ಸಂತೋಷ ಬಾಲಗಾಂವಿ, ಲಕ್ಷ್ಮಿ ಕ್ಷೀರಸಾಗರ, ಸತೀಶ ಅಡವಿ, ತಾಜುದ್ದೀನ ಖಲೀಫಾ, ಬಾಬು ಯಾಳವಾರ, ಅಕ್ಬರ ನಾಯಕ, ಬಿ.ಎಸ್. ಬ್ಯಾಳಿ, ಕಾಶಿಬಾಯಿ ಹಡಪದ, ಲಾಲಸಾಬ ಕೊರಬು, ಎಮ್.ಎಮ್. ಮುಲ್ಲಾ, ಕೃಷ್ಣಾ ಲಮಾಣಿ, ಸಂಜಯ ಚವ್ಹಾಣ, ನಾಗೇಶ ತಾಳಿಕೋಟಿ, ಭಾರತಿ ಹೊಸಮನಿ, ಶಮಿಮಾ ಅಕ್ಕಲಕೋಟ, ಇಲಿಯಾಸಅಹ್ಮದ ಸಿದ್ದಿಕಿ, ಲಕ್ಷ್ಮಣ ಇಲಕಲ್, ಅಯುಬಖಾನ ನದಾಫ್, ನಿಸಾರ ಮುಜಾವರ, ಗಂಗಾಬಾಯಿ ಕಣಮುಚನಾಳ, ಅನ್ನಪೂರ್ಣ ಬೀಳಗಿಕರ ಮುಂತಾದವರು ಉಪಸ್ಥಿತರಿದ್ದರು.