ವಿಜಯಪುರ ಜಿಲ್ಲಾದ್ಯಂತ 137 ಪಾಸಿಟಿವ್ ಕೇಸ್ ದೃಢ: ಜಿಲ್ಲೆಯಲ್ಲಿ ಕೊರೋನಾ ಇಳಿಮುಖ

ವಿಜಯಪುರ, ಜೂ.2-ಜಿಲ್ಲಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಮತ್ತೆ ಇಂದು 137 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನು ತಾಲೂಕಾವಾರು ವಿವಿರ ಹೀಗದೆ.
ವಿಜಯಪುರ ಗ್ರಾಮೀಣ 8 ನಗರ 7 ಬಬಲೇಶ್ವರ 3, ತಿಕೋಟಾ 3 ಬಸವನಬಾಗೇವಾಡಿ 25 ಕೊಲ್ಹಾರ 11 ನಿಡಗುಂಡಿ 11 ಇಂಡಿ 8 ಚಡಚಣ 2 ಮುದ್ದೇಬಿಹಾಳ 23 ತಾಳಿಕೋಟೆ 2 ಸಿಂದಗಿ 31 ದೇವರಹಿಪ್ಪರಗಿ 2 ಸೇರಿದಂತೆ ಜಿಲ್ಲೆಯ ಅದರ್ 3 ಸೇರಿದಂತೆ 137 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ಲಭ್ಯವಾಗಿದೆ. ಇದೀಗ ಜಿಲ್ಲಾದ್ಯಂತ 33,390ಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲೂ ದಿನದಿಂದ ದಿನಕ್ಕೆ ಕೊರೋನಾ ರಣಕೇಕೆ ಇಳಿಕೆ ಆಗುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಗಳು 20ಕ್ಕಿಂತ ಕಡಿಮೆ ಪ್ರಕರಣಗಳು ದೃಢವಾಗುತ್ತಿವೆ. ಇಂದು ವಿಜಯಪುರ ನಗರದಲ್ಲಿ 7 ಹಾಗೂ ವಿಜಯಪುರ ಗ್ರಾಮೀಣ ಭಾಗದಲ್ಲಿ 8 ಕೊರೋನಾ ವೈರಸ್ ಪತ್ತೆಯಾಗಿವೆ ಎಂದು ವಿಜಯಪುರ ಜಿಲ್ಲಾಡಳಿತದ ಹೆಲ್ತ್ ಬುಲೆಟಿನ್ ನಲ್ಲಿ ಮಾಹಿತಿ ಲಭ್ಯವಾಗಿದೆ. ಇನ್ನು ವಿಜಯಪುರ ನಗರ ಹಾಗೂ ಗ್ರಾಮೀಣ ಭಾಗದಲ್ಲೇ 15 ಕೇಸ್ ದೃಢವಾಗಿವೆ. ಅದಕ್ಕಾಗಿ ಜನತೆ ಸಾಮಾಜಿಕ ಅಂತರ್ ಹಾಗೂ ಮಾಸ್ಕ್ ಬಳಿಸಿ ಕೊರೋನಾ ತಡೆಗಟ್ಟುವ ಕೈಜೋಡಿಸಬೇಕಿದೆ