ವಿಜಯಪುರ ಕೃಷಿ ಮಹಾವಿದ್ಯಾಲಯಕ್ಕೆ ವಿದೇಶಿ ವಿಜ್ಞಾನಿಗಳ ಭೇಟಿ

ವಿಜಯಪುರ,ಜ.28:ನಗರ ಹೊರವಲಯದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯಕ್ಕೆ ಶನಿವಾರ ಅಮೆರಿಕದ ಟೆನ್ನಿಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ಡಾ. ಜಾನ್ ರಿಕೆಟ್ಸ ಮತ್ತು ದಿಲೀಪ್ ನಂದವಾಣಿ ಭÉೀಟಿ ನೀಡಿದರು.
ಇದೇ ವರ್ಷದ ನವ್ಹೆಂಬರ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಟೆನ್ನಿಸ್ ವಿಶ್ವವಿದ್ಯಾಲಯದಿಂದ ಅಧ್ಯಯನ ವಿನಿಮಯ ಕಾರ್ಯಕ್ರಮದಡಿಯಲ್ಲಿ ಆ ದೇಶದ ವಿದ್ಯಾರ್ಥಿಗಳು ವಿಜಯಪುರ ಆವರಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿರುವ ಸೌಲಭ್ಯಗಳ ಕುರಿತು ಮತ್ತು ವಿದ್ಯಾರ್ಥಿಗಳಿಗೆ ಯಾವ ವಿಷಯದಲ್ಲಿ ಕೌಶಲ್ಯ ಆಧಾರಿತ ತರಬೇತಿ ನೀಡುವ ಕುರಿತು ಅವರು ಚರ್ಚಿಸಿದರು.
ಕೃಷಿ ಮಹಾವಿದ್ಯಾಲಯದಲ್ಲಿರುವ ಪ್ರಯೋಗಾಲಯಗಳು, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ವಿವಿಧ ಸಂಶೋಧನೆ ಚಟುವಟಿಕೆಗಳು ಮತ್ತು ಪ್ರಗತಿಪರ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ವಿದೇಶಿ ವಿಜ್ಞಾನಿಗಳೊಂದಿಗೆ ವಿದ್ಯಾಧಿಕಾರಿ ಡಾ. ಭೀಮಪ್ಪ, ಎ, ಕೃಷಿ ವಿವಿ ಸಂಪರ್ಕಾಧಿಕಾರಿ ಡಾ. ಬಸವರಾಜ ಬಾಗೇವಾಡಿ, ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಹಿರಿಯ ಕ್ಷೇತ್ರ ಅಧೀüಕ್ಷಕ ಡಾ. ಆರ್. ಬಿ, ಜೊಳ್ಳಿ ಮತ್ತು ಪ್ರ್ರಾಧ್ಯಾಪಕರುಗಳಾದ ಡಾ. ಎ. ಪಿ. ಬಿರಾದಾರ, ಡಾ. ಶ್ರಿಕಾಂತ ಚವ್ಹಾಣ, ಡಾ. ಸುದೀಪಕುಮಾರ, ಸಿದ್ದು ಇಂಗಳೇಶ್ವರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.