ವಿಜಯಪುರ ಕಡೆ ವಿಶೇಷ ಆಚರಣೆ: ಆಷಾಢದ ಗುಳ್ಳವ್ವನ ಹಬ್ಬ

ಕಲಬುರಗಿ,ಜು,6:ಸಕಲ ಜೀವಿಗಳನ್ನು ಪೆÇೀಷಿಸುವ ಭೂದೇವಿಗೆ ಪೂಜೆ ಸಲ್ಲಿಸುವ ಆಚರಣೆಗಳು ನಮ್ಮ ನಾಡಿನ ನಾನಾ ಕಡೆ ಇವೆ. ಅವುಗಳಲ್ಲೊಂದು ಗುಳ್ಳವ್ವನ ಹಬ್ಬವೂ ಒಂದು.ಈಗ ಶುರು ಆಗಿರುವ ಆಷಾಡ ಮಾಸದಲ್ಲಿ ನಾಲ್ಕು ಮಂಗಳವಾರ ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ವಿಜಯಪುರ,ಬಾಗಿಲುಕೋಟೆ,ಬೆಳಗಾವಿ ಜಿಲ್ಲೆಗಳಲ್ಲಿ ಈ ಹಬ್ಬ ಆಚರಿಸುತ್ತಾರೆ.
ಗುಳ್ಳವ್ವನನ್ನು ಸ್ಥಳೀಯ ಕುಂಬಾರರೇ ಮಣ್ಣಿನಿಂದ ತಯಾರಿಸುತ್ತಾರೆ. ಆಷಾಢದಲ್ಲಿ ಬರುವ ಮಂಗಳವಾರ ದಿನದಂದು ಗುಳ್ಳವ್ವನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.ಪ್ರತಿ ದಿನ ಸಂಜೆ ತುಂಬಿದಾರುತಿ ಹಿಡಿದು ಮನೆ ಮನೆಗೆ ತೆರಳುವ ಬಾಲಕಿಯರು ಗುಳ್ಳವ್ವನ ಕುರಿತಾದ ಜಾನಪದ ಹಾಡುಗಳನ್ನು ಹಾಡಿ ಆರತಿ ಬೆಳಗುವರು.
ಜಾನಪದ ಸಾಹಿತ್ಯದಲ್ಲಿ ಗುಳ್ಳವ್ವನ ಕುರಿತಾದ ಬಹಳಷ್ಟು ಹಾಡುಗಳು ಪ್ರಚಲಿತದಲ್ಲಿವೆ. ಗುಳ್ಳವ್ವನನ್ನು ಅಕ್ಕಿ ಜೋಳ ಗೋದಿಯಿಂದ ಶೃಂಗರಿಸುವ ಮಹಿಳೆಯರು ಹೂಮಾಲೆ ಹಾಕಿ ಆರತಿ ಎತ್ತಿ ಬೆಳಗುವರು..
ಕೊನೆಯ ಮಾರನೆ ದಿನ ಬುಧವಾರ ಮನೆಯಲ್ಲಿ ಸಿಹಿ ಅಡುಗೆ ತಯಾರಿಸಿಕೊಂಡು ತೋಟ,ಭಾವಿ, ಹಳ್ಳ,ಕೆರೆ, ನದಿ ದಂಡೆಗೆ ತೆರಳಿ ಕುಟುಂಬದ ಸದಸ್ಯರು ಮತ್ತು ಗೆಳತಿಯರು ಜೊತೆಯಾಗಿ ಊಟಮಾಡಿ ಆಟವಾಡಿ ಸಂಜೆವರೆಗೆ ಕಾಲಕಳೆಯುವ ಸಂಪ್ರದಾಯ ಈಗಲೂ ಇಲ್ಲಿನ ಪ್ರದೇಶಗಳಲ್ಲಿವೆ.