ವಿಜಯಪುರದ ಹಲೋ ಕಿಡ್ಸ್ ಶಾಲಾ ವಾರ್ಷಿಕೋತ್ಸವ

ವಿಜಯಪುರ,ಫೆ.15:ಪೂರ್ವ ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರ, ಸಮಯ ಪಾಲನೆ ಮತ್ತು ಶಿಸ್ತು ಇದ್ದರೆ ಮಕ್ಕಳು ಮುಂದೆ ಭಾರತ ದೇಶದ ಒಳ್ಳೆಯ ಪ್ರಜೆಗಳಾಗುತ್ತಾರೆ ಎಂದು ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಅರುಂಧತಿ. ಡಿ ಅವರು ಹೇಳಿದರು.
ನಗರದ ಅಥಣಿ ರಸ್ತೆ, ನಿಂಬರಗಿ ಬಡಾವಣೆಯಲ್ಲಿ ಇರುವ ಹಲೋ ಕಿಡ್ಸ್ ಶಾಲೆಯ 2 ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು, ದೇಶಭಕ್ತಿ, ಸನ್ನಡತೆ, ಸಮಯದ ಸದುಪಯೋಗ ಸರಿಯಾದ ವಯಸ್ಸಿನಲ್ಲಿ ಮಕ್ಕಳು ಅಳವಡಿಸಿದರೆ ಮುಂದೆ ಅವರು ಉತ್ತಮ ಪ್ರಜೆಗಳಾಗಿ ಭಾರತದ ಹೆಸರು ಬೆಳಗಿಸುತ್ತಾರೆಂದು ಹೇಳಿದರು.
ವರ್ಣರಂಜಿತ ಸಮಾರಂಭದಲ್ಲಿ, ಮಕ್ಕಳ ನೃತ್ಯ, ಸಂಗೀತ, ಭಾಷಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.
ವೇದಿಕೆ ಮೇಲೆ ಮಹಾನಗರ ಪಾಲಿಕೆಯ ಸದಸ್ಯ ರಾಜು ಕುರಿಯವರ, ಶಿವರುದ್ರ ಬಾಗಲಕೋಟ, ಸಿದ್ದಲಿಂಗಪ್ಪ ಹಂಚಿನಾಳ, ನಿವೃತ ಯೋಧ ಸಿ. ಎನ್. ಇಂಗಳೇಶ್ವರ ಮತ್ತು ಎಸ್.ಜಿ. ಹೂಗಾರ ಸೇರಿದಂತೆ ಶಾಲೆಯ ಶಿಕ್ಷಕ ವೃಂದ, ಆಡಳಿತ ಮಂಡಳಿ ಸದಸ್ಯರು ಇದ್ದರು.