ವಿಜಯಪುರದ ಸಿದ್ಧಸಿರಿ ದಿನದ 24 ಗಂಟೆ ಸೇವೆ ನೀಡುತ್ತಿರುವ ಏಕೈಕ ಸಹಕಾರಿಯಾಗಿದೆ: ಯತ್ನಾಳ

ವಿಜಯಪುರ, ಎ.5-ಸಿದ್ಧಸಿರಿ ಸೌಹಾರ್ದ ಸಹಕಾರಿಯ ಈಗಿದ್ದ ಒಟ್ಟು ಸದಸ್ಯರು 22464, ಒಟ್ಟು 12 ಕೋಟಿ 27 ಲಕ್ಷ ರೂ ಶೇರು ಬಂಡವಾಳ ಹೊಂದಿದ್ದು 877 ಕೋಟಿ 61 ಲಕ್ಷ ರೂ ಠೇವಣಿಗಳು, 911 ಕೋಟಿ 70 ಲಕ್ಷ ರೂ ದುಡಿಯುವ ಬಂಡವಾಳ ಹೊಂದಿದೆ. ಸನ್ 2019-20ನೇ ಸಾಲಿನಲ್ಲಿ 3 ಕೋಟಿ 33 ಲಕ್ಷ ರೂ. ಲಾಭವಾಗಿದೆ. ಶೇರುದಾರರಿಗೆ ಸನ್ 2019-20ನೇ ಸಾಲಿನಲ್ಲಿ 21% ಶೇರು ಲಾಭಾಂಶ ನೀಡಲಾಗಿದೆ ಎಂದು ವಿಜಯಪುರ ನಗರ ಶಾಸಕರು, ಸಿದ್ಧಸಿರಿ ಸೌಹಾರ್ದ ಸಹಕಾರಿ ಅಧ್ಯಕ್ಷರಾದ ಶ್ರೀ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರ ನಗರದ ವಾರ್ಡ ನಂ 22ರಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಸಾಯಿಪಾರ್ಕ ಹತ್ತಿರ, ಸದಾಶಿವ ನಗರದಲ್ಲಿ 134ನೇ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಿದ್ಧಸಿರಿ ಸೌಹಾರ್ದ ಸಹಕಾರಿಯ ಕಾಯ್ದಿಟ್ಟ ನಿಧಿ 21 ಕೋಟಿ 82 ಲಕ್ಷ ರೂ. ಹೂಡಿಕೆಗಳು 100 ಕೋಟಿ 84 ಲಕ್ಷ ರೂ.ಸಾಲ ಮುಂಗಡಗಳು 741 ಕೋಟಿ 12 ಲಕ್ಷ ರೂ. ಸಹಕಾರಿಯ ಠೇವುಗಳು ಮತ್ತು ಇತರೆ ಆಸ್ತಿಗಳು 13 ಕೋಟಿ 52 ಲಕ್ಷ ರೂ, ನಿಶ್ಚಿತ ಆಸ್ತಿಗಳು 20 ಕೋಟಿ 87 ಲಕ್ಷ ರೂ. ರಾಜ್ಯಾದ್ಯಂತ ಈ ನೂತನ ಶಾಖೆಯನ್ನು ಸೇರಿ 134 ಒಟ್ಟು ಶಾಖೆಗಳನ್ನು ಹೊಂದಿದೆ. ವಿಜಯಪುರದ ಮುಖ್ಯ ಶಾಖೆಯಲ್ಲಿ ದಿನದ 24 ಗಂಟೆ, 365 ದಿನ ನಿರಂತರ ಸೇವೆ ನೀಡುತ್ತಿರುವ ಸಿದ್ಧಸಿರಿ ಕರ್ನಾಟಕ ರಾಜ್ಯದಲ್ಲಿಯೇ ಏಕೈಕ ಸಹಕಾರಿಯಾಗಿದ್ದು ಜನ ಸಾಮಾನ್ಯರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ವಿಜಯಪುರ ನಗರದಲ್ಲಿ ಸಿದ್ಧಸಿರಿ ಶೀತಲ ಘಟಕ ಪ್ರಾರಂಭಿಸಲಾಗಿದ್ದು, ಇತ್ತೀಚಿನ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತಹ ಯಂತ್ರವನ್ನು ಟರ್ಕಿ, ಇಂಗ್ಲೆಂಡ ದೇಶದಿಂದ ಕರೀದಿಸಿ ಆಮದು ಮಾಡಿಕೊಳ್ಳಲಾಗಿದ್ದು, ಆಧುನಿಕ ಯಂತ್ರದ ಸಹಾಯದಿಂದ ಒಣ ದ್ರಾಕ್ಷಿಗಳನ್ನು ಸಂಸ್ಕರಣೆ, ಗ್ರೇಡಿಂಗ್, ನೆಟಿಂಗ್ ಮಾಡಲಾಗುತ್ತದೆ. ಶೀತಲ ಘಟಕದಲ್ಲಿ ದಾಸ್ತಾನು ಇಡಲಾದ ಒಣ ದ್ರಾಕ್ಷಿಯ ಮೇಲೆ ಮಾರುಕಟ್ಟೆ ದರಕ್ಕೆ ಅನುಸಾರವಾಗಿ ಅಡವು ಮಾಡಿಕೊಂಡು ಶೇ 15% ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ.
ರೈತರಿಗೆ ಅನಕೂಲವಾಗು ಹಿತದೃಷ್ಟಿಯಿಂದ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿಗೆ ಸಂಬಂಧಿಸಿದ ಪರಿಕರಗಳನ್ನು ಮಾರಾಟ ಮಾಡುವ ಸಲುವಾಗಿ ಸಿಂದಗಿ ಮತ್ತು ವಿಯಪುರದ ಸಮೃದ್ಧಿ ನಗರದಲ್ಲಿ ಕೃಷಿ ಕೇಂದ್ರ ಪ್ರಾರಂಭಿಸಲಾಗಿದೆ.
ಸಾಲಗಾರರ ಸುರಕ್ಷಾ ಕ್ಷೇಮ ನಿದಿ: ಸಹಕಾರಿಯಿಂದ ಸಾಲ ಪಡೆದುಕೊಂಡ ಸಾಲಗಾರಿ ಸದಸ್ಯ ಆಕಸ್ಮೀಕವಾಗಿ ಮರಣ ಹೊಂಡಿದಲ್ಲಿ ಅವರ ಸಾಲವನ್ನು ಸದರಿ ನಿಧಿಯಿಂದ ಭರಣಾ ಮಾಡಿಕೊಂಡು ಸಾಲದಿಂದ ಋಣಮುಕ್ತವನ್ನಾಗಿ ಮಾಡಲಾಗುತ್ತಿದೆ ಅದರಂತೆ ಅವರ ಕುಟುಂಭಕ್ಕೆ ವಿಷಾದನೆಯ ಪತ್ರ ನೀಡಲಾಗುತ್ತದೆ, ಕೇಂದ್ರ ಕಚೇರಿ ವಿಜಯಪುರ, ಹಿರೆಬೇವನೂರ, ಬಳಾಳಾರಿಯಲ್ಲಿ ಸೇಪ್ ಡಿಪಾಜಿಟ್ ಲಾಕರ್ ಸೌಲಭ್ಯ ಒದಗಿಸಲಾಗುತ್ತಿದೆ.
ಕೇಸರಿ ಸಾಲ ಯೋಜನೆ ಎಂಬ ಹೆಸರಿನಲ್ಲಿ ಬಡ ಬೀದಿ ವ್ಯಾಪಾರಸ್ತರಿಗೆ ಸೊನ್ನೆ (0%) ಬಡ್ಡಿದರದಲ್ಲಿ ಸಾಲ ರೂ 5000 ಗಳನ್ನು ನೀಡಲಾಗುತ್ತಿದೆ, ಅದರ ಮರು ಪಾವತಿಗೆ ಒಂದು ವರ್ಷ ಕಾಲಾವಕಾಶವಿರುತ್ತದೆ. ಹೀಗೆ ಸಿದ್ಧಸಿರಿಯಿಂದ ಇಂದನ ಕೇಂದ್ರ, ಕೃಷಿ ಕೇಂದ್ರ, ಶೀತಲ ಘಟಕ, ಗೋ ರಕ್ಷಾ ಕೇಂದ್ರ, ಡಯಾಲಿಸಿಸ್ ಸೆಂಟರ್ ಹೀಗೆ ಹತ್ತು ಹಲವು ಸಾಮಾಜಿಕ ಸೇವ ಸಲ್ಲಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಬೆಂಗಳೂರು ನಿರ್ದೇಶಕರಾದ ಶ್ರೀ ಸಿದ್ರಾಮಣ್ಣ ಉಪ್ಪಿನ್ ರವರು ಪೂಜ್ಯ ಶ್ರೀ ಶಂಭುಲಿಂಗ ಮಹಾಸ್ವಾಮಿಗಳು ಶಿವಬಸವ ಆಶ್ರಮ ರಾಧಾಕೃಷ್ಣ ನಗರ ವಿಜಯಪುರ ಇವರ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಶ್ರೀಹರಿ ಗೊಳಸಂಗಿ, ಪಾಲಿಕೆ ಮಾಜಿ ಸದಸ್ಯರಾದ ಶ್ರೀ ಪ್ರೇಮಾನಂದ ಬಿರಾದಾರ, ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕರಾದ ಶ್ರೀ ವಾಸುದೇವ ಹೆರಕಲ್ಲ, ಸಿದ್ಧಸಿರಿ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾದ ಶ್ರೀ ಬಸಯ್ಯ ಹಿರೇಮಠ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಜ್ಯೋತಿಬಾ ಖಂಡಾಗಳೆ, ಜಂಟಿ ವ್ಯವಸ್ಥಾಒಕ ನಿರ್ದೇಶಕರಾದ ಶ್ರೀ ರಾಘವ್ ಅಣ್ಣಿಗೇರಿ, ನಿರ್ದೇಶಕರಾದ ಶ್ರೀ ಶಿವಾನಂದ ಅಣ್ಣೆಪ್ಪನವರ, ಶ್ರೀ ಸಾಯಿಬಾಬಾ ಸಿಂಧಗೇರಿ, ಶ್ರೀ ಪ್ರಭುಗೌಡ ದೇಸಾಯಿ, ಶ್ರೀ ಅಶೋಕ ತೊರವಿ, ಶ್ರೀ ರಾಮನಗೌಡ ಪಾಟೀಲ ಯತ್ನಾಳ, ಶ್ರೀ ಸೋಮಶೇಖರ ಬಂಡಿ, ಡಾ.ಬಸನಗೌಡ ಪಾಟೀಲ (ನಾಗರಾಳ ಹುಲಿ) ಶ್ರೀ ಗಣಪತಿ ಜಾಧವ್, ಮುಖಂಡರಾದ ಶ್ರೀ ಶಿವಾನಂದ ಬಿರಾದಾರ, ಶ್ರೀ ಎಸ್.ಆರ್. ಸಾವಳಸಂಗ್, ಶ್ರೀ ಎಸ್.ಜಿ.ಪಾಟೀಲ, ಶ್ರೀ ಡಿ.ಎ.ಪಾಟೀಲ, ಶ್ರೀ ರೇವಣಸಿದ್ದಪ್ಪ ಜುಮನಾಳ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದು.