ವಿಜಯಪುರದಲ್ಲಿ 133 ಬ್ಲ್ಯಾಕ್ ಫಂಗಸ್ ಸೋಂಕು ಪ್ರಕರಣ ಪತ್ತೆ: 27 ಜನ ಗುಣಮುಖ

ವಿಜಯಪುರ, ಜೂ.4-ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇದೀಗ ವಿಜಯಪುರ ಜಿಲ್ಲೆಯಲ್ಲಿಯೂ ಸಹ 133 ಕಪ್ಪು ಶಿಲೀಂಧ್ರ ರೋಗದ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ್ ಮಾಹಿತಿ ನೀಡಿದರು.
ಈವರೆಗೆ 27 ಜನ ಬ್ಲ್ಯಾಕ್ ಫಂಗಸ್‍ಗೆ ಚಿಕಿತ್ಸೆ ಪಡೆದು ಗುಣಮಖರಾಗಿದ್ದಾರೆ. 22 ಜನರನ್ನ ಬೇರೆ ಜಿಲ್ಲೆಯ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ. 84 ಜನರು ವಿಜಯಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 84 ಜನರಲ್ಲಿ 7 ಜನರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಬ್ಲ್ಯಾಕ್ ಫಂಗಸ್ ಮಾರಣಾಂತಿಕ ಎಂದು ಹೇಳಲಾಗುತ್ತಿದ್ದು, ಹೆಚ್ಚು ಸಮಯ ಕೊರೋನಾ ಚಿಕಿತ್ಸೆ ಪಡೆಯುವವರು ಮತ್ತು ಮಧುಮೇಹ ಮೊದಲಾದ ಸಮಸ್ಯೆ ಇರುವವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.