ವಿಜಯಪುರದಲ್ಲಿ ಮಾರಾಟವಾಗಿದ್ದ ಗಂಡು ಮಗು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆ

ವಿಜಯಪುರ, ಸೆ.24- ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಗಂಡು ಮಗು ಮಾರಾಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಪತ್ತೆಯಾಗಿದೆ.

ಮಾರಾಟವಾಗಿದ್ದ ಮಗುವಿಗೆ ಅನಾರೋಗ್ಯವಾದ ಕಾರಣ ಚಿಕಿತ್ಸೆಗಾಗಿ, ಮಗು ಮಾರಾಟದಲ್ಲಿ, ಪಡೆದವರು ಕಿಮ್ಸ್ ನಲ್ಲಿ ಮಗುವನ್ನು ದಾಖಲು ಮಾಡಿದ್ದಾರೆ. ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಸಿಂದಗಿ ಮೂಲದ ವ್ಯಕ್ತಿಯೊಬ್ಬ ಮಾರಾಟಕ್ಕೆ ತೆಗೆದುಕೊಂಡಿದ್ದು, ಮಗುವಿನ ತಾಯಿ ಹಾಗೂ ಸಂಬಂಧಿಕರೇ ಮಗುವನ್ನು ಮಾರಾಟ ಮಾಡಿದ್ದರು. ಕಳೆದ ಆ. 26 ರಂದು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಗುವನ್ನು ತಾಯಿ ರೇಣುಕಾ ಮಗು ಮಾರಾಟ ಮಾಡಿದ್ದಳು.

ಈ ಪ್ರಕರಣ ಕುರಿತು ಸೆಪ್ಟೆಂಬರ್ 12 ರಂದು ನಗರದ ಮಹಿಳಾ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಗು ಮಾರಾಟದಲ್ಲಿ ಜಿಲ್ಲಾ ಆಸ್ಪತ್ರೆ ಸ್ಟಾಫ್ ನರ್ಸ್ ಕಸ್ತೂರಿ ಕೈವಾಡದ ಹಿನ್ನೆಲೆ, ಸ್ಟಾಫ್ ನರ್ಸ್ ಅನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ನಗರದಲ್ಲಿ ಮಗು ಮಾರಾಟ ಪ್ರಕರಣವನ್ನು ಜಿಲ್ಲಾ ಪೆÇಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಮಗು ಪತ್ತೆ ಹಚ್ಚಲಾಗಿದೆ. ಆದರೆ ಪ್ರಕರಣ ತನಿಖೆ ಹಂತದಲ್ಲಿರುವ ಕಾರಣಕ್ಕೆ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ. ಮುಂದಿನಗಳಲ್ಲಿ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಲಾಗುವುದು ಎಂದು ಎಸ್ಪಿ ಎಚ್.ಡಿ. ಆನಂದಕುಮಾರ ತಿಳಿಸಿದ್ದಾರೆ.