ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನ ಆಚರಣೆ

ರಾಯಚೂರು,ಏ.೧೮- ವಾಲ್ಮೀಕಿ ನಾಯಕ ಸಮಾಜದಿಂದ ಇಂದು ೬೮೮ ನೇ ವಿಜಯನಗರ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ನಗರದಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ವಿಶೇಷ ಪೂಜೆ ಹಾಗೂ ಗಂಡುಗಲಿ ಕುಮಾರರಾಮ, ಹರಿಹರ ಬುಕ್ಕರಾಯರು, ಶ್ರೀಕೃಷ್ಣದೇವರಾಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿದರು.
ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ ವಕೀಲರು, ಬಿಜೆಪಿ ವಕ್ತಾರ ಕೊಟ್ರೇಶಪ್ಪ ಕೋರಿ, ಪರಿಶಿಷ್ಟ ಪಂಗಡ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗಿರಿಯಪ್ಪ ನಾಯಕ ದಿನ್ನಿ, ನಿವೃತ್ತ ಬಿಸಿಎಂ ಅಧಿಕಾರಿ ಎಂ.ಎಸ್.ಗೋನಾಳ, ಭೀಮರಾಯ ಹದ್ದಿನಾಳ, ರಾಮು ನಾಯಕ ಗಜಾನನ, ಜನಾರ್ದನ ನಾಯಕ, ವಡವಟ್ಟಿ ತಿಮ್ಮಪ್ಪ ನಾಯಕ, ಮಹದೇವ ನಾಯಕ, ನರೇಂದ್ರ ನಾಯಕ, ಸಿದ್ದು ನಾಯಕ ಅಸ್ಕಿಹಾಳ, ನರಸಪ್ಪ ನಾಯಕ, ಭೀಮ ನಾಯಕ ಉಪ್ಪರಾಳ, ಶಿವು ಕಕ್ಕಲದೊಡ್ಡಿ, ನಗರಸಭೆ ಸದಸ್ಯರು ಬಲ್ಲಟಗಿ ಶರಣಪ್ಪ,ವಡವಟ್ಟಿ ಗೋವಿಂದ, ನರಸಿಂಹಲು, ಸೇರಿದಂತೆ ಅನೇಕರು ಇದ್ದರು.