ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಎ,18-ಇಂದು ಪೂಜ್ಯ ಶ್ರೀ ಶರಣಯ್ಯ ಓಡೆಯರ್ ರವರ ಸಾನಿಧ್ಯದಲ್ಲಿ ಸಮಾಜದ ಹಿರಿಯಾರದ ಕಟ್ಟೆಮನೆ ಶಿವರಾಮಪ್ಪ ನವರು ಹಕ್ಕಬುಕ್ಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನ ದಿನಾಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಾಲುಮತ ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷರಾದ ಬಿ.ಪೋಲಪ್ಪ ರವರು ಮಾತನಾಡಿ,ಹಾಲುಮತ ಸಹೋದರರಾದ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ ಇಂದಿಗೆ 687 ವರ್ಷವಾಗಿದೆ, ಸಂಗಮ ವಂಶದ ಕುಲಸಂಜಾತರಾದ ಹಕ್ಕಬುಕ್ಕರು ಕಾಳಮುಖ ಪಂಥದ ಕ್ರಿಯಾಶಕ್ತಿ ಯತಿಗಳನ್ನು ಗುರುಗಳಾಗಿ ಸ್ವೀಕರಿಸಿ, ಹಂಪಿ ವಿರೂಪಾಕ್ಷ ನನ್ನು ಆರಾಧ್ಯ ದೇವರನ್ನಾಗಿ ಪೂಜಿಸಿ, ಮಹಮ್ಮದೀಯರ ದಬ್ಬಾಳಿಕೆಯಿಂದ ನಗಲುಗಿದ್ದ ರಾಜ್ಯವನ್ನು ರಕ್ಷಿಸಿ, ಹಿಂದೂ ಸಾಮ್ರಾಜ್ಯವನ್ನು ಕಟ್ಟಿ ದಿನ ಇದಾಗಿದೆ, ಕರ್ನಾಟಕ,ಆಂದ್ರ, ತಮಿಳು ನಾಡು, ಕೇರಳ ರಾಜ್ಯಗಳನ್ನೊಳಗೊಂಡ ಅಖಂಡ ದಕ್ಷಿಣ ಭಾರತದ ದ್ರಾವಿಡ ಶೈವ ಸಂಸ್ಕೃತಿಯನ್ನು ರಕ್ಷಿಸಿದ ಧೀರ ಸಹೋದರರು ಹಕ್ಕಬುಕ್ಕರು ಶೃಂಗೇರಿ ಮಠಕ್ಕೆ ದಾನ-ದತ್ತಿ ನೀಡಿ 1336 ಎಪ್ರಿಲ್ 18 ರಂದು ಸ್ವತಂತ್ರ ರಾಜ್ಯವೆಂದು ಪೋಷಿಸಿಕೊಂಡರು, ಮುಂದೆ ಶ್ರೀ ಕೃಷ್ಣದೇವರಾಯ ಹಲವಾರು ರಾಜರುಗಳು ವಿಶ್ವವಿಖ್ಯಾತ ಸಾಮ್ರಾಜ್ಯವನ್ನಾಗಿ ಮಾಡಿದರು. ಇಂದು ವಿಜಯನಗರ ಸಾಮ್ರಾಜ್ಯ ಹಂಪಿ ದೇಶದಲ್ಲೆ ಪುರಾತನ ಮತ್ತು ಸಂಪತ್ತು ಹೇರಳವಾಗಿ ರೂಪಗೊಂಡ ಸಾಮ್ರಾಜ್ಯವಾಗಿ ಹೊರಹೊಮ್ಮಿತ್ತು, ಇಂದಿಗೂ ಅದರ ಅನೇಕ ಕುರುಹುಗಳನ್ನು ಕಾಣಬಹುದು ಎಂದರು.
ಈ ಸಂದರ್ಭದಲ್ಲಿ ಈಶ್ವರಯ್ಯ ಓಡೆಯರ್,  ಶ್ರೀಕಾಂತ್ ಒಡೆಯರ್, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗೊನಾಳು, ಖಜಾಂಚಿ ಡಿ.ಗಂಗಾಧರ ಕೊಳಗಲ್ಲು, ವಕೀಲರಾದ ಟಿ.ಕೆ.ಕಾಮೇಶ ಹಿರಿಯರಾದ ವೈ.ನಾಗರಜ, ಯು.ಗೋಪಾಲ, ಶಿವಣ್ಣ ಗೊನಾಳು, ಕಳವಳ್ಳಿ ಎರ್ರಿಸ್ವಾಮಿ, ಲಕ್ಷ್ಮಿರೆಡ್ಡಿ, ರಮೇಶ್, ಶಂಕ್ರಪ್ಪ ಇತರರು ಇದ್ದರು.

One attachment • Scanned by Gmail