ವಿಜಯನಗರ ಸಾಮ್ರಾಜ್ಯದಂತೆ ಕಿನ್ನಾಳ ಕಲೆಯೂ ಹಬ್ಬಿತ್ತು: ವಿ.ಟಿ.ಕಾಳೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.12: ಕಿನ್ನಾಳ ಕಲೆ ವಿಜಯನಗರ ಅರಸರ ಕಾಲದಿಂದ ಬೆಳೆದು ಬಂದಿದೆ.‌ಇದು ಕರ ಕುಶಲ ಕಲೆ. ಮೂರ್ತಿ, ಮಂಟಪ, ಚಿತ್ರಕಲೆ, ಶಿಲ್ಪಕಲೆಯಲ್ಲೂ ಇದು ಅಡಕವಾಗಿದೆ ಎಂದು ಹಿರಿಯ ಚಿತ್ರಕಲಾವಿದರು, ಲಲಿತಾ ಕಲಾ ಅಕಾಡಮಿಯ ಮಾಜಿ ಅಧ್ಯಕ್ಷ  ವಿ.ಟಿ.ಕಾಳೆ ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ  ರಂಗತೋರಣ ಸಹಕಾರದಿಂದ ಕರ್ನಾಟಕ ಲಲಿತ ಕಲಾ ಅಕಾಡೆಮಿಯು. ವಿಶೇಷ ಘಟಕ ಯೋಜನೆಯಡಿ ಇಂದಿನಿಂದ ಈ ತಿಂಗಳ 17 ವರೆಗೆ ನಡೆಯುವ ಕಿನ್ನಾಳ ಕಲೆಯ ಕಮ್ಮಟ ಮತ್ತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿಜಯನಗರ ಅರಸರ ಸಾಮ್ರಾಜ್ಯ ವಿಸ್ತರಿಸಿದಂತೆ ಕಿನ್ನಾಳ ಶೈಲಿಯ ಕಲೆಯೂ ವಿಸ್ತಾರಗೊಂಡಿತು. ವಿಜಯನಗರ ಸಾಮಾಜ್ಯದ  ಪತನದ ನಂತರ ಚಿತ್ರಗಾರರು ಚದುರಿದರು. ನಂತರ ಮೈಸೂರು ಮತ್ತು ತಂಜಾವೂರು ರಾಜರು ಆಶ್ರಯ ನೀಡಿದರು. ಹಾಗಾಗಿ ಮೈಸೂರು ಮತ್ತು ತಂಜಾವೂರು ಶೈಲಿಯಲ್ಲಿ ಕಿನ್ನಾಳ ಶೈಲಿಯ ಪ್ರಭಾವ ಕಂಡು ಬರುತ್ತಿದೆ. ಇಂತಹ ಶೈಲಿ ನಶಿಸುವ ಹಂತ ತಲುಪಿದೆ.
ಇಂತಹ ಶಿಬಿರದ ಮೂಲಕ ಕಲಿತು. ಅದನ್ನು ಮತ್ತಷ್ಟು ಜನರಿಗೂ ಕಲಿಸುವ ಕಾರ್ಯ ಆಗಬೇಕು ಎಂದರು.
ನಗರದ ಭವಾನಿ ಸ್ಕೂಲ್ ಆಫ್ ಆರ್ಟ್ ನ ಸಂಸ್ಥಾಪಕ ಎಸ್.ಎಸ್.ಜಾದವ್ ಅವರು ಮಾತನಾಡಿ. ನುಗ್ಗಿ ಗಿಡದ ಕಾಂಡದಿಂದ ಗೊಂಬೆಗಳನ್ನು ತಯಾರು ಮಾಡುತ್ತಾರೆಂಬ ಮಾಹಿತಿ ಇದೆ. ಆಕರ್ಷಿತವಾದ ಈ ಕಲೆ ಕುರಿತು ತಮ್ಮ ಕಾಲೇಜಿನ ಬೆಳ್ಳಿ ಹಬ್ಬದ ಎರೆಡು ದಿನಗಳ ಕಾಲ ಕಿನ್ನಾಳೆ ಕಲೆಯ ತರಬೇತಿ ಮತ್ತು ಪ್ರದರ್ಶನ ಮಾಡಿದ್ದನ್ನು ಸ್ಮರಿಸಿದರು.
ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಅವರು ಮಾತನಾಡಿ, ಅಕಾಡೆಮಿಗೆ ನೇಮಕ ಮಾಡಿದಾಗ ಸರ್ಕಾರ ನೀಡಿದ 1.4 ಕೋಟಿ ರೂಗಳ ವಿಶೇಷ ಘಟಕದ ಹಣ ಬಳಕೆ ಆಗದೇ ಉಳಿದಿತ್ತು. ಅದನ್ನು ಸವಾಲಾಗಿ ತೆಗೆದುಕೊಂಡು ಎಲ್ಲಾ ಹಣವನ್ನು ಬಳಸಿಕೊಂಡು ಪರಿಶಿಷ್ಟರಿಗೆ ಅನುಕೂಲ‌ಮಾಡಿದೆಂದರು. ಜೊತೆಗೆ ಸರ್ಕಾರ ಇನ್ನು ಐದು ಲಕ್ಷ ರೂಗಳನ್ನು ಹೆಚ್ಚುವರಿಯಾಗಿ ನೀಡಿದೆಂದರು.
ಕಿನ್ನಾಳದಲ್ಲಿ ಈ ಕಲೆಯನ್ನು ಮಾಡಬಲ್ಲ 60 ಕುಟುಂಗಳು ಮಾತ್ರ ಇವೆ. ಹೆಚ್ಚಿನ ಜನರು ಇದನ್ನು ಕಲಿಯಬೇಕೆಂದು ಈ ಕಾರ್ಯಾಗಾರ ಹಮ್ಮಿಕೊಂಡಿದೆಂದರು.
ಈ ಸಂದರ್ಭದಲ್ಲಿ ಭಾರತದ ಪರಂಪರೆಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ಕಲಾವಿದ ವಿ.ಟಿ.ಶ್ರೀನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಕಾಡೆಮಿಯ ರಿಜಿಸ್ಟ್ರಾರ್ ಆರ್.ಚಂದ್ರಶೇಖರ್ ಸ್ವಾಗತಿಸಿದರು. ಸದಸ್ಯ ಸಂಚಾಲಕ ಅಶೋಕ್ ಕಾರ್ಯಕ್ರಮ‌ ನಿರೂಪಿಸಿದರು.
ಕಾರ್ಯಾಗಾರದ ನಿರ್ದೇಶಕರಾಗಿ ಕಿನ್ನಾಳದ ಕಿಶೋರ್ ಚಿತ್ರಗಾರ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸುಚಿತ್ರ ಲಿಂಗದಳ್ಳಿ, ಮತ್ತು ಮುತ್ತಮ್ಮ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ವಿವಿಧಡೆಯಿಂದ 20 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

Attachments area