ವಿಜಯನಗರ ಮುಂದುವರೆದ ಸಾರಿಗೆ ಮುಷ್ಕರ: ನಿಲ್ಲದ ಪ್ರಯಾಣಿಕರ ಪರದಾಟ

ಹೊಸಪೇಟೆ ಏ8: ರಾಜ್ಯಾದ್ಯಾಂತ ಸಾರಿಗೆ ನೌಕರರ ಮುಷ್ಕರ ಹಿನ್ನಲೆಯಲ್ಲಿ ಹೊಸಪೇಟೆ ಸೇರಿದಂತೆ ವಿಭಾಗದ ಯಾವುದೆ ನಿಲ್ದಾಣಗಳಲ್ಲಿ ಬಸ್‍ಗಳು ಸಂಚಾರಕ್ಕೆ ಮುಕ್ತವಾಗದ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟ ಎರಡನೇಯ ದಿನವಾದ ಇಂದು ಮುಂದುವರೆದಿತು.
ಎಲ್ಲಾ ಪ್ರಯತ್ನಗಳ ನಡುವೆ ಇಂದು ಸಹ ಒಂದೆರಡು ಬಸ್‍ಗಳು ಸಂಚಾರ ಮುಂದುವರೆದಿದ್ದು ಬಿಟ್ಟರೆ ಖಾಸಗಿ ವಾಹನಗಳೆ ಗತಿ ಎಂಬಂತೆ ಇಂದು ಸಹ ಖಾಸಗಿ ವಾಹನಗಳಲ್ಲಿ ಮಾತ್ರ ಪ್ರಯಾಣಿಕರ ಪ್ರಯಾಣಿಸುವಂತಾಗಿತು. ಇಂದು ಸಹ ವಿಭಾಗೀಯ ವ್ಯವಸ್ಥಾಪಕ ಕಚೇರಿಯ ಸಿಬ್ಬಂದಿಗಳು ದೈನಂದಿನ ಕೆಲಸಕ್ಕೆ ಹಾಜರಾಗುವ ಮೂಲಕ ತಮ್ಮ ಪ್ರಯಾಣಿಕರ ಪರ ನಿಲುವನ್ನು ಪ್ರದರ್ಶಿಸಿದ್ದು ಬಿಟ್ಟರೆ ಬೇರಾವುದೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲಿಲ್ಲ, ನಿನ್ನೆ ಕೆಲಸ ನಿರ್ವಹಿಸಿದ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಪ್ರೋತ್ಸಾಹಿಸಲು ಇಲಾಖಾಧಿಕಾರಿಗಳು ಶ್ರಮಿಸಿದರೂ ಅದು ಬೆರೆಳೆಣಿಕೆಯ ಸಿಬ್ಬಂದಿಗೆ ಸೀಮಿತವಾಗಿತು. ಇಂದು ಹೊಸಪೇಟೆ ಬಳ್ಳಾರಿ ಸಂಚರಿಸುವ ಸಾರಿಗೆ ಬಸ್‍ಗಳು ಸಹ ರಸ್ತೆಗಿಳಿಯದಿರುವುದು ಮತ್ತಷ್ಟು ಪ್ರಯಾಣಿಕರು ಪರದಾಡುವಂತಾಯಿತು. ಇಂದು ಈ ಮಾರ್ಗದಲ್ಲಿಯೂ ಸಹ ಖಾಸಗಿ ವಾಹನಗಳೆ ಸಂಚಾರ ಮಾಡಲಾರಂಭಿಸಿದ್ದು ಪ್ರಯಾಣಿಕರು ಮಾತ್ರ ಬಂದು ವಾಹನಗಳಿಗೆ ಕಾಯ್ದು ತಮ್ಮ ಅಳಲನ್ನು ತೋಡಿಕೊಳ್ಳುವುದು ತಪ್ಪದ ಸ್ಥಿತಿ ನಿರ್ಮಾಣವಾಗಿತು.