ವಿಜಯನಗರ ಮಹಾವಿದ್ಯಾಲಯದಲ್ಲಿ 65ನೇ ಕನ್ನಡ ರಾಜ್ಯೋತ್ಸವ

ಹೊಸಪೇಟೆ ನ 01 : ನಗರದ ವಿಜಯನಗರ ಮಹಾವಿದ್ಯಾಲಯದಲ್ಲಿ 65ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ಅಧ್ಯಕ್ಷರಾದ ಸಾಲಿಸಿದ್ಧಯ್ಯ ಅವರು ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಕನ್ನಡ ನಾಡು ನುಡಿಗೆ ಮಹತ್ವವನ್ನು ನೀಡುವ ನಿಟ್ಟಿನಲ್ಲಿ ಯುವಜನರು ತಮ್ಮ ಕೊಡುಗೆಗಳನ್ನು ನೀಡಬೇಕು ಎಂದರು. ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪಿ.ಪ್ರಭಯ್ಯ, ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರಾದ ಸುಜಾತ ಬೆಳ್ಳಿಗುಂಡಿ ಸೇರಿದಂತೆ ಎನ್.ಎಸ್.ಎಸ್ಮುಖ್ಯಸ್ಥರಾದ ಮಧುಕರನ್, ಮಲ್ಲಿಕಾರ್ಜುನ ಅಧ್ಯಾಪಕ ವೃಂದ ಹಾಗೂ ಆಡಳಿತ ಮಂಡಳಿಯ ಸದಸ್ಯರು ಇದ್ದರು.