ವಿಜಯನಗರ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಹುಬ್ಬಳ್ಳಿ,ಏ13 : ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು 2024 ಮಾರ್ಚ್ ತಿಂಗಳಲ್ಲಿ ಜರುಗಿದ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕು.ಚೈತ್ರಾ ನರೇಂದ್ರ ಕುಲಕರ್ಣಿ 94% ಕು.ಕೃಷ್ಣ ಕೊಟ್ರುಶೆಟ್ಟರ್
93% .ಕು.ಸೌಜನ್ಯ ಪೂಜಾರ್ 91% ಕು. ಚೈತ್ರಾ ಬದರಿನಾಥ ಕುಲಕರ್ಣಿ 92.5% ಕು. ಅಮೋಘ ಹೋರಕೆ 92 % ಅಂಕ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಕು. ಸೌಜನ್ಯ ಮಾನೆ 97% ಕು. ಸೃಷ್ಟಿ ಪೂಣೇಕರ್ 97% ಕು. ಸೃಷ್ಟಿ ಯರನಾಳ್ 89 % ಕು. ಕಾರ್ತಿಕ ಸಂಗೊಳ್ಳಿ 88 % ಕು. ಕೇಶವ ಯಕ್ಕುಂಡಿ 87% ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕು.ಲಾವಣ್ಯ ಕೊಂಡಿಕರ 92% ಕು. ಲತಾ ಕೊಂಡಿಕರ 91% ಕು.ರಂಜಿತಾ ಕರಮಡಿ 89% ಕು. ದೇವಿಕಾ ಕೊನಪುರ 88% ಕು.ಕಿರಣ ಬಡಿಗೇರ 87% ಅಂಕ ಪಡೆದಿದ್ದಾರೆ
ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿ ಪ್ರಾಚಾರ್ಯರು ಹಾಗೂ ಉಪನ್ಯಾಸ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.