ವಿಜಯನಗರ ಜಿಲ್ಲೆ ಬೆಂಬಲಿಸಿ ರಾಜ್ಯ ಸರ್ಕಾರಕ್ಕೆ 2500 ಮನವಿಪತ್ರ

ಕೊಟ್ಟೂರು ಜ 13: ವಿಜಯನಗರ ಜಿಲ್ಲೆಯನ್ನು ಅಧಿಕೃತವಾಗಿ ಘೋಷಣೆಮಾಡಲು ಕೊಟ್ಟೂರು ಕಾಟನ ಛೇಂಬರ್ ಆಫ್ ಕಾಮರ್ಸ್ ಹಾಗೂ ಗುರುದೇವ ವಿದ್ಯಾಪ್ರಸಾರ ಪರಿಷತ್ ಸಾರ್ವಜನಿಕ ರಿಂದ ಮನವಿ ಪತ್ರ ಸಂಗ್ರಹಿಸಿ ರಾಜ್ಯ ಸರ್ಕಾರಕ್ಕೆ ತಾಲೂಕು ಆಡಳಿತದ ಮೂಲಕ 2500 ಮನವಿ ಪತ್ರಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪತ್ತಿಕೊಂಡ ಶ್ರೀಧರ ಶಟ್ರು , ಎಸ್.ನಾಗೇಂದ್ರಪ್ಪ, ಪ್ರಕಾಶ ಕೋಡಿಹಳ್ಳಿ ,ಮಂಜುನಾಥ ಸಿ,ದಿನೇಶಕುಮಾರ ಎ.ಸೇರಿದಂತೆ ಇತರರು ಇದ್ದರು.