ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆಗೆ ಸಚಿವರಿಗೆ ಕೂಡ್ಲಿಗಿ ಜನರ ಮನವಿ

ಹೊಸಪೇಟೆ, ಜ.10: ವಿಜಯನಗರ ಜಿಲ್ಲೆ ಅಧೀಕೃತ ಘೋಷಣೆಗೆ ಒತ್ತಾಯಿಸಿ ಕೂಡ್ಲಿಗಿ ತಾಲೂಕಿನ ಸಾರ್ಯವಜನಿಕರು ಹಾಗೂ ಸಂಘಸಂಸ್ಥೆಗಳಿಂದ ಒಕ್ಕಣೆಗಳನ್ನು ಸಂಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಇಂದು ಅವರ ನಿವಾಸದಲ್ಲಿ ನೀಡಲಾಯಿತು.
ವಿಜಯನಗರ ಜಿಲ್ಲೆಯ ವಿಭಜನೆ ಕುರಿತಂತೆ ರಾಜ್ಯಪತ್ರದಲ್ಲಿ ಘೋಷಣೆ ನೀಡಿದ್ದು, ಅಕ್ಷೇಪಣೆಗೆ ಒಂದು ತಿಂಗಳ ಅವಕಾಶವನ್ನು ನೀಡಿದೆ. ಆಕ್ಷೇಪಣೆಗಳಿಗೆ ಪರಿಹಾರ ಸೂಚಿಸಿ ಆದಷ್ಟು ಬೇಗ ಅಧಿಕೃತ ಘೋಷಣೆ ಮಾಡಬೇಕೆಂದು ಕೋರಿದರು