ವಿಜಯನಗರ ಜಿಲ್ಲೆಯ ಪೊಲೀಸ ಬಿ,ರಾಘವೇಂದ್ರಗೆ ಮುಖ್ಯಮಂತ್ರಿ ಪದಕ


ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.31: ವಿಜಯನಗರ ಜಿಲ್ಲೆಯ ಪಟ್ಟಣ ಪೊಲೀಸಠಾಣೆಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಬೇವಿನಮರದ ರಾಘವೇಂದ್ರ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.
ಪೇದೆಯಾಗಿ, ಮುಖ್ಯಪೇದೆಯಾಗಿ ಈ ವರೆಗೂ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 2022ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಮಾಡಲಾಗಿದ್ದು ಇಡಿ ಇಲಾಖೆಯೇ ಹೆಮ್ಮೆಪಡುವಂತಾಗಿದೆ. ಮುಖ್ಯಮಂತ್ರಿಗಳ ಪದಕ ಘೋಷನೆಯಾಗುತ್ತಿದ್ದಂತೆಯೇ ಜಿಲ್ಲೆಯ ಪೊಲೀಸರು ಹರ್ಷವ್ಯಕ್ತಪಡಿಸಿದ್ದಾರೆ.