ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ವಿಜಯ ನಮ್ಮದೇ: ಸಚಿವ ಆನಂದ್ ಸಿಂಗ್


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಏ.24:  ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಜಯಶಾಲಿಯಾಗಲು ಈಗಾಗಲೇ ನಮ್ಮ ವರಿಷ್ಟರು ಚಾಣಕ್ಯ ಮಂತ್ರವನ್ನು ರಚಿಸಿದ್ದು, ನೂತನ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ ಎಂದು ಸಚಿವ ಆನಂದ್‌ಸಿಂಗ್ ಭರವಸೆ ವ್ಯಕ್ತಪಡಿಸಿದರು.
ಅವರು ಮರಿಯಮ್ಮನಹಳ್ಳಿಯಲ್ಲಿ ಭಾನುವಾರ ಜೆಡಿಎಸ್ ಟಿಕೆಟ್ ವಂಚಿತ ಎಲ್ ಪರಮೇಶ್ವರ ಹಾಗೂ ಅವರ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ  ಮಾತನಾಡಿದರು.
ಬಿಜೆಪಿ ಪಕ್ಷ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಬಿ.ರಾಮಣ್ಣ ಅವರಿಗೆ ಟಿಕೆಟ್ ನೀಡಿದ್ದು ಅವರನ್ನು ಪ್ರಚಂಡ ಬಹುಮತದಿಂದ ಜಯಶಾಲಿಯನ್ನಾಗಿಸೋಣ. ನೂತನ ವಿಜಯನಗರ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನೂ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ವಿಜಯನಗರ ಜಿಲ್ಲೆ ರಚನೆಗೆ ಸಹಾಯ ಮಾಡಿದ ಯಡಿಯೂರಪ್ಪನವರ ಋಣ ತೀರಿಸಲು ಎಲ್ಲರೂ ಬಿಜೆಪಿಯನ್ನು  ಬೆಂಬಲಿಸಬೇಕು ಎಂದರು.
ಪಕ್ಷಕ್ಕೆ ಪಕ್ಷದ ಕಾರ್ಯಕರ್ತರೇ ಬೆನ್ನೆಲುಬಾಗಿದ್ದು, ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ಪಕ್ಷದ ನಾಯಕರುಗಳಿಗೆ ಸಲಹೆ ಮಾಡಿದರು. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಗೆ ಯಾವುದೇ ಅರ್ಥವಿಲ್ಲ. ಅವರು ಸಿಲಿಂಡರ್ ಬೆಲೆ ಆಗ 300 ಇತ್ತು ಈಗ 1100 ಆಗಿದೆ ಅಂತ ಹೇಳ್ತಿದ್ದಾರೇ ವಿನಹ 300 ರೂ ಮಾಡ್ತೀವಿ ಅನ್ಮೋ ಗ್ಯಾರಂಟಿ ಕೊಡ್ತಿಲ್ಲ. ಅಲ್ಲದೇ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ದದ ಅಭ್ಯರ್ಥಿಗೆ ವಾರಂಟಿಯೇ ಇಲ್ಲವೆಂದು ಲೇವಡಿ ಮಾಡಿದರು. ಪರಮೇಶ್ವರಪ್ಪ ಅವರಿಗೆ ಜೆಡಿಎಸ್ ಪಕ್ಷ ಅನ್ಯಾಯದ ಎಸಗಿದೆ. ಮೇ 10 ರಂದು  ಜೆಡಿಎಸ್ ಪಕ್ಷಕ್ಕೂ ನಾವು ತಕ್ಕ ಪಾಠ ಕಲಿಸಬೇಕಾಗಿದೆ. ಪರಮೇಶ್ವರಪ್ಪ ಅವರ ಸೇರ್ಪಡೆಯಿಂದ‌ ಬಿಜೆಪಿಗೆ ಆನೆಬಲ ಬಂದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ವಂಚಿತರಾದ ಎಲ್.ಪರಮೇಶ್ವರಪ್ಪ ಅವರು ತಮ್ಮ ಸಾವಿರಾರು ಕಾರ್ಯಕರ್ತರೊಂದಿಗೆ ಸಚಿವ ಆನಂದ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ಅಭ್ಯರ್ಥಿ ಬಿ.ರಾಮಣ್ಣ ಮಾತನಾಡಿ, ಬಿಜೆಪಿ ಪಕ್ಷ ನಮ್ಮ ಸಮುದಾಯಕ್ಕೆ ಈ ಬಾರಿ ಸಾಮಾಜಿಕ ನ್ಯಾಯ ನೀಡಿದೆ. ಸಮುದಾಯದ ಬಗ್ಗೆ ಯಾವುದೇ ಕೀಳರಿಮೆವಿಟ್ಟುಕೊಳ್ಳದೇ ಎಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸಿ ನನ್ನನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಸಂಸದ ಬಿ.ದೇವೇಂದ್ರಪ್ಪ, ಬಿಜೆಪಿ ಪಕ್ಷದ ಮುಂಡರಾದ ಕೆ.ಎಂ. ತಿಪ್ಪೆಸ್ವಾಮಿ  ಡಿ.ರಾಘವೇಂದ್ರಶೆಟ್ಟಿ, ಮುಟುಗನಹಳ್ಳಿ ಕೊಟ್ರೇಶ್,  ಕಿಚಿಡಿ ಕೊಟ್ರೇಶ್, ಉಪನ್ಯಾಸಕ ಎಸ್.ಬಿ.ಚಂದ್ರಶೇಖರ್  ಮಾತನಾಡಿದರು.
ವೇದಿಕೆಯಲ್ಲಿ ಸಂಸದ ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಪ್ರವೀಣ್ ಗೂಗೆ, ಮಂಡಲ ಅಧ್ಯಕ್ಷ ವೀರೇಶ್ವರ ಸ್ವಾಮಿ, ಮಲ್ಲಿಕಾರ್ಜುನ ನಾಯ್ಕ್, ಕೃಷ್ಣನಾಯ್ಕ್, ರಾಜೇಂದ್ರ ನಾಯ್ಕ್, ಬದ್ರನಾಡಿ ಚಂದ್ರಶೇಖರ್, ಕೆ.ಎಂ.ತಿಪ್ಪೇಸ್ವಾಮಿ, ಡಿ.ರಾಘವೇಂದ್ರ ಶೆಟ್ಟಿ, ಗಂಡಿ ಬಸವರಾಜ್, ನರೇಗಲ್ ಕೊಟ್ರೇಶ್, ಜೋಗಿ ಹನುಮಂತ, ವಸ್ತ್ರದ್ ವೀರಭದ್ರಯ್ಯ, ವೀರನಗೌಡ್ರು, ಬೆಣಕಲ್ ಪ್ರಶಾಂತ್, ದೊಡ್ಡರಾಮಣ್ಣ, ಗೋಪಿನಾಥ್ ಶೆಟ್ಟಿ, ಸಂದೀಪ್, ಲಲಿತಮ್ಮ, ಕನಕಪ್ಪ, ವೆಂಕಟೇಶ್, ರವಿಕಿರಣ್, ಅಂಬರೀಶ್, ರವಿ ಯಾದವ್, ಕಲಾಲ್ ರಾಘವೇಂದ್ರ, ಮಂಜುನಾಥ ಹಾಗೂ ಇತರರು ಉಪಸ್ಥಿತರಿದ್ದರು.