ವಿಜಯನಗರ ಜಿಲ್ಲೆಯಲ್ಲಿ 68ನೇ ಸಹಕಾರಿ ಸಪ್ತಾಹ

ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ನ 14: ವಿಜಯನಗರ ಜಿಲ್ಲೆಯ ವಿವಿಧಡೆ ಸಹಕಾರಿ ಸಪ್ತಾಹವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್, ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್, ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಅನೇಕ ಕಡೆ ಆಚರಿಸಲಾಯಿತು.
ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ನಿರ್ದೇಶಕಿ ಉಷಾ ಕೆ. ಧ್ವಜಾರೋಹಣ ಮಾಡಿದರು.
ಸಪ್ತಾಹ ಕುರಿತು ವಿಕಾಸ ಬ್ಯಾಂಕ್ ಸಲಹೆಗಾರರಾದ ಬಿ.ಜೆ.ಕುಲಕರ್ಣಿ, ಮಾಜಿ ನಿರ್ದೇಶಕ ಅನಂತ ಜೋಶಿ ಮಾತನಾಡಿದರು.ಅಧ್ಯಕ್ಷ ಸಹಕಾರಿ ರತ್ನ ವಿಶ್ವನಾಥ ಹಿರೇಮಠ, ಸಹಕಾರ ಸಂಸ್ಥೆಗಳು ಹಾಗೂ ವಾಣಿಜ್ಯ, ವ್ಯಾಪಾರ ಸಂಸ್ಥೆಗಳು ಮಧ್ಯ ಸಾಕಷ್ಟು ವ್ಯತ್ಯಾಸವಿದೆ. ಸಹಕಾರಿಗಳಾದ ನಾವು ಸಾಮಾಜಿಕ ಬದ್ದತೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದ್ದು ಸಪ್ತಾಹದ ಈ ಅವಧಿಯಲ್ಲಿ ಕ್ಷೇತ್ರದ ಬೆಳೆವಣಿಗೆ, ನಮ್ಮ ಕರ್ತವ್ಯ ದ ಬಗ್ಗೆ ಅರಿತು ಕಾರ್ಯನಿರ್ವಹಿಸಬೇಕು ಅಲ್ಲದೆ ಕ್ಷೇತ್ರದ ಬಗ್ಗೆ ತಿಳಿದು ಘನತೆ ಹೆಚ್ಚಿಸುವಂತೆ ಮಾಡಬೇಕು ಎಂದರು. ಬ್ಯಾಂಕ್ ಮುಖ್ಯ ಕಾರ್ಯ‌ನಿರ್ವಹಣಾಧಿಕಾರಿ ಪ್ರಸನ್ನ ಹಿರೇಮಠ ಸಹಕಾರಿ ಚಳುವಳಿಯ ಬೆಳೆವಣಿಗೆ ಕುರಿತು ಮಾತನಾಡಿದರು.
ಬಳ್ಳಾರಿ ಜಿಲ್ಲಾ ಯೂನಿಯನ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಧ್ವಜಾರೋಹಣ ಮಾಡಿದರು. ಜನನಿ ವಿವಿದ್ದೋದೇಶ ಸಹಕಾರ ಸಂಘ, ಕೃತಿಕಾ ಸೌಹಾರ್ದ ಸಹಕಾರಿ ಸೇರಿದಂತೆ ಅನೇಕ ಸಹಕಾರಿಗಳಲ್ಲಿಯೂ ಸಪ್ತಾಹವನ್ನು ಆಚರಣೆ ಮಾಡಲಾಯಿತು. ವಿಧಾನ ಪರಿಷತ್ ಚುನಾವಣೆ ಯ ಹಿನ್ನೆಲೆಯಲ್ಲಿ ಎಲ್ಲಾ ನಿಗದಿತ ಸಹಕಾರ ಸಪ್ತಾಹ ದ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಜಿಲ್ಲಾ ಯೂನಿಯನ್ ತಿಳಿಸಿದೆ.