
ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.27: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನವಾಗಿ 23,098 ಜನ ಮತದಾರರ ಪಟ್ಟಿಯಲ್ಲಿ ನೋಂದಾವಣೆಗೊಂಡಿದ್ದು ಪರಿಷ್ಕೃತ ಮತದಾರರ ಪಟ್ಟಿಯಂತೆ 10,92,011 ಜನ ಮತದಾರರು ನೋಂದಾಯಿಸಿಕೊಂಡಂತಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಅವರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದ್ದು, ಜ.5 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ನಂತರ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅವಕಾಶವನ್ನು ಸಹ ಚುನಾವಣಾ ಆಯೋಗ ಕಲ್ಪಿಸಲಾಗಿತ್ತು. ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 2.13ರಷ್ಟು ನೋಂದಣಿ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಪುರುಷ ಮತದಾರರೇ ಮೇಲುಗೈ
ವಿಜಯನಗರ ಜಿಲ್ಲೆಯ ಒಟ್ಟು ಮತದಾರರಲ್ಲಿ ಪುರುಷ ಮತದಾರರೇ ಪಾರಮ್ಯ ಮೆರೆದಿದ್ದು, ಒಟ್ಟು 10,92,011 ಜನ ಮತದಾರರಲ್ಲಿ 5,46,255 ಜನ ಪುರುಷರು, 5,45,610 ಜನ ಮಹಿಳೆಯರು ಹಾಗೂ 146 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಕ್ಷೇತ್ರವಾರು ಮತದಾರರ ವಿವರ
ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರವಾರು ಒಟ್ಟು ಮತದಾರರ ಅಂಕಿಅಂಶ ಇಂತಿದೆ.
88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,91,270 ಜನ ಮತದಾರರಿದ್ದು, 96,692 ಜನ ಪುರುಷರು, 94624 ಜನ ಮಹಿಳೆಯರು ಹಾಗೂ 14 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,29,987 ಜನ ಮತದಾರರಿದ್ದು, 1,14,630 ಜನ ಪುರುಷರು, 1,15,335 ಜನ ಮಹಿಳೆಯರು ಹಾಗೂ 22 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
90-ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,49,956 ಜನ ಮತದಾರರಿದ್ದು, 1,21,626 ಜನ ಪುರುಷರು, 1,28,253 ಜನ ಮಹಿಳೆಯರು ಹಾಗೂ 77 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,03,753 ಜನ ಮತದಾರರಿದ್ದು, 1,03,387 ಜನ ಪುರುಷರು, 1,00,352 ಜನ ಮಹಿಳೆಯರು ಹಾಗೂ 14 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,17,045 ಜನ ಮತದಾರರಿದ್ದು, 1,09,980 ಜನ ಪುರುಷರು, 1,07,046 ಜನ ಮಹಿಳೆಯರು ಹಾಗೂ 19 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 16,188 ಜನ ಅಂಗವಿಕಲ ಮತದಾರರು:
ವಿಜಯನಗರ ಜಿಲ್ಲೆಯ ಒಟ್ಟು ಮತದಾರರಲ್ಲಿ 16,188 ಜನ ಅಂಗವಿಕಲ ಮತದಾರರಿದ್ದಾರೆ. ಇದರಲ್ಲಿ 8984 ಜನ ಪುರುಷರು, 7199 ಜನ ಮಹಿಳೆಯರು ಹಾಗೂ 5 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಕ್ಷೇತ್ರವಾರು ಅಂಗವಿಕಲ ಮತದಾರರು:
88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3598 ಜನ ಅಂಗವಿಕಲ ಮತದಾರರಿದ್ದು, 2075 ಜನ ಪುರುಷರು, 1523 ಜನ ಮಹಿಳಾ ಮತದಾರರಿದ್ದಾರೆ.
89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4218 ಜನ ಅಂಗವಿಕಲ ಮತದಾರರಿದ್ದು, 2327 ಜನ ಪುರುಷರು, 1891 ಜನ ಮಹಿಳಾ ಮತದಾರರಿದ್ದಾರೆ.
90-ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3066 ಜನ ಅಂಗವಿಕಲ ಮತದಾರರಿದ್ದು, 1539 ಜನ ಪುರುಷರು, 1523 ಜನ ಮಹಿಳೆಯರು ಹಾಗೂ 4 ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2970 ಜನ ಅಂಗವಿಕಲ ಮತದಾರರಿದ್ದು, 1727 ಜನ ಪುರುಷರು, 1243 ಜನ ಮಹಿಳಾ ಮತದಾರರಿದ್ದಾರೆ.
104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2336 ಜನ ಅಂಗವಿಕಲ ಮತದಾರರಿದ್ದು, 1316 ಜನ ಪುರುಷರು, 1019 ಜನ ಮಹಿಳೆಯರು ಹಾಗೂ ಒಬ್ಬ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
9,793 ಜನ ಯುವ ಮತದಾರರ ನೋಂದಣಿ
5 ವಿಧಾನಸಭಾ ಕ್ಷೇತ್ರಗಳಲ್ಲಿ ಯುವಮತದಾರರ ನೋಂದಣಿ ಸಹ ಹೆಚ್ಚಳವಾಗಿದೆ. ಜ.5 ರ ಅಂಕಿಅಂಶದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 21,280 ಜನ ಯುವ ಮತದಾರರಿದ್ದು, ಪರಿಷ್ಕೃತ ಮತದಾರರ ಪಟ್ಟಿಯಲ್ಲಿ 31,073 ಜನ ಯುವಮತದಾರರಿದ್ದಾರೆ. ನೂತನವಾಗಿ 9,793 ಜನ ಯುವಜನರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿದ್ದಾರೆ. ಇದರಲ್ಲಿ 17,055 ಜನ ಯುವಕರು, 14,016 ಜನ ಯುವತಿಯರು ಹಾಗೂ 2ಜನ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
ಕ್ಷೇತ್ರವಾರು ಯುವ ಮತದಾರರ ವಿವರ:
88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4876 ಜನ ಯುವ ಮತದಾರರಿದ್ದು, 2733 ಜನ ಯುವಕರು, 2143 ಜನ ಯುವತಿಯರಿದ್ದಾರೆ.
89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 7334 ಜನ ಯುವ ಮತದಾರರಿದ್ದು, 4126 ಜನ ಯುವಕರು, 3207 ಜನ ಯುವತಿಯರು ಹಾಗೂ ಒಬ್ಬ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
90-ವಿಜಯನಗರ ವಿವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6216 ಜನ ಯುವ ಮತದಾರರಿದ್ದು, 3372 ಜನ ಯುವಕರು, 2844 ಜನ ಯುವತಿಯರಿದ್ದಾರೆ.
96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6308 ಜನ ಯುವ ಮತದಾರರಿದ್ದು, 3402 ಜನ ಯುವಕರು, 2905 ಜನ ಯುವತಿಯರು ಹಾಗೂ ಒಬ್ಬ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ.
104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6339 ಜನ ಯುವ ಮತದಾರರಿದ್ದು, 3422 ಜನ ಯುವಕರು, 2917 ಜನ ಯುವತಿಯರಿದ್ದಾರೆ.
ಜಿಲ್ಲೆಯಲ್ಲಿ 17,701 ಜನ 80 ವರ್ಷ ಮೇಲ್ಪಟ್ಟ ಮತದಾರರು:
ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 17,701 ಜನ 80 ವರ್ಷ ಮೇಲ್ಪಟ್ಟ ಮತದಾರರಿದ್ದು, ಇದರಲ್ಲಿ 186 ಜನ 100 ಶತಾಯುಷಿ ಮತದಾರರಿದ್ದಾರೆ.
80-99 ವರ್ಷದ ಕ್ಷೇತ್ರವಾರು ಮತದಾರರು:
88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3158 ಜನ ಹಿರಿಯ ಮತದಾರರಿದ್ದಾರೆ. 89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2862 ಜನ ಹಿರಿಯ ಮತದಾರರಿದ್ದಾರೆ. 90-ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4744 ಜನ ಹಿರಿಯ ಮತದಾರರಿದ್ದಾರೆ. 96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3239 ಜನ ಹಿರಿಯ ಮತದಾರರಿದ್ದಾರೆ ಹಾಗೂ 104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3512 ಜನ ಹಿರಿಯ ಮತದಾರರಿದ್ದಾರೆ.
ಕ್ಷೇತ್ರವಾರು ಶತಾಯುಷಿ ಮತದಾರರ ವಿವರ
88-ಹಡಗಲಿ 20, 89-ಹಗರಿಬೊಮ್ಮನಹಳ್ಳಿ 30,,,90-ವಿಜಯನಗರ 77,,96-ಕೂಡ್ಲಿಗಿ 24, 104-ಹರಪನಹಳ್ಳಿ 35 ಜನ ಸೇರಿದಂತೆ ಜಿಲ್ಲೆಯಲ್ಲಿ ಒಟು 186 ಜನ ಶತಾಯುಷಿಗಳಾಗಿದ್ದಾರೆ.