
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮೇ11: ವಿಜಯನಗರ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ.77.71ರಷ್ಟು ಮತದಾನ ದಾಖಲಾಗಿದೆ.
ಹಡಗಲಿಯಲ್ಲಿ ಶೇ.77.31ರಷ್ಟು ಮತದಾನ ದಾಖಲಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ ಶೇ.81.21, ವಿಜಯನಗರ ಶೇ.71.65, ಹರಪನಹಳ್ಳಿ ಶೇ.79.66, ಕೂಡ್ಲಿಗಿಯಲ್ಲಿ ಶೇ.79.48ರಷ್ಟು ಮತದಾನ ದಾಖಲಾಗಿದೆ.
2018ರಲ್ಲಿ ವಿಧಾನಸಭೆ ಚುನಾವಣೆ ಶೇಕಡಾವಾರು :
2018ರಲ್ಲಿ ಜಿಲ್ಲೆಯಲ್ಲಿ ಶೇ.76.99ರಷ್ಟು ಮತದಾನ ದಾಖಲಾಗಿತ್ತು. ಹಗಡಲಿಯಲ್ಲಿ ಶೇ.75.79, ಹಗರಿಬೊಮ್ಮನಹಳ್ಳಿಯಲ್ಲಿ ಶೇ.78.79, ವಿಜಯನಗರ ಶೇ.72.04, ಕೂಡ್ಲಿಗಿ ಶೇ.76.29 ಮತ್ತು ಹರಪನಹಳ್ಳಿಯಲ್ಲಿ ಶೇ.82.33ರಷ್ಟು ಮತದಾನ ದಾಖಲಾಗಿತ್ತು.
ಮಳೆ, ಗಾಳಿಯ ಹಿನ್ನೆಲೆಯಲ್ಲಿ ಕೆಲ ಮತಗಟ್ಟೆಯಲ್ಲಿ ವಿದ್ಯುತ್, ಬೆಳಕು ಸೇರಿದಂತೆ ಸಣ್ಣಪುಟ್ಟ ತೊಂದರೆಗಳಾರುವುದು ಹೊರತು ಪಡಿಸಿ ಯಾವುದೆ ತೊಂದರೆಯಾಗದೆ ಮತದಾನ ಅಂತ್ಯಗೊಂಡಿದೆ.
ಜಿಲ್ಲೆಯಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಒಂದರಷ್ಟು ಮತದಾನ ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಊರಿಬಿಸಿಲು ಜಾಸ್ತಿಯಾಗಿದ್ದರಿಂದ ಈ ಸಲವೂ ಹೆಚ್ಚಿಗೆ ಮತದಾನ ದಾಖಲಾಗಿಲ್ಲ. ಜಿಲ್ಲಾಡಳಿತದಿಂದ ಮತದಾನ ಜಾಗೃತಿ ಮೂಡಿಸಿದರೂ ನಿರೀಕ್ಷಿತಮಟ್ಟದಲ್ಲಿ ಮತದಾನ ನಡೆದಿಲ್ಲ. ಜಿಲ್ಲೆಯಿಂದ ಕಾಫಿಸೀಮೆ, ಮೈಸೂರು, ಮಂಡ್ಯಭಾಗಕ್ಕೆ ಕಾರ್ಮಿಕರು ದುಡಿಯಲು ಹೋಗಿದ್ದು, ಅವರು ಮತದಾನ ಮಾಡಲು ಜಿಲ್ಲೆಯತ್ತ ಆಗಮಿಸಿಲ್ಲ ಎನ್ನಲಾಗುತ್ತಿದೆ.
ಹಿರಿಯ ಹಾಗೂ ಯುವ ಮತದಾರರ ಉತ್ಸಾಹ:
ಮತದಾರರ ಸಂಖ್ಯೆ ಕಳೆದ ವಿಧಾನಸಭಾ ಚುನಾವಣೆಗೆ ಹೊಲಿಕೆ ಮಾಡಲಾಗಿ ಯುವ ಮತದಾರರ ಸಂಖ್ಯೆ ವೃದ್ಧಿಯಾಗಿದ್ದು ಹಿರಿಯ ನಾಗರಿಕರು ಹಾಗೂ ಯುವ ಮತದಾರರ ಮೊದಲ ಬಾರಿ ಮತದಾನ ಮಾಡಲು ಉತ್ಸಕರಾಗಿದ್ದು ಬಹುತೇಕರು ಬೆಳಿಗ್ಗೆ ಮೊದಲ ಅವಧಿಯಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಆಸಕ್ತಿ ತೊರಿದ್ದರು ನಗರದ ಬಹುತೇಕ ಮತಗಟ್ಟೆಯಲ್ಲಿ ಯುವ ಹಾಗೂ ಮೊದಲ ಬಾರಿ ಮತದಾನ ಮಾಡುವವರು ಸರದಿಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಹಕ್ಕು ಚಲಾಯಿಸಲು ಅವಕಾಶ ನೀಡಿದ್ದರೂ ಅನೇಕ ಹಿರಿಯರು ಮತಗಟ್ಟೆಗಳಲ್ಲಿಯೇ ತಮ್ಮ ಹಕ್ಕು ಚಲಾಯಿಸುವ ಮೂಲಕ ಸಂಭ್ರಮಿಸಿದರು.
76 ವೆಂಕಟಾಪುರದಲ್ಲಿ 6 ಜನ ಸ್ನೇಹಿತರಾದ ಎಸ್.ಮಹಾಂತೇಶ್, ಕಟ್ಟೆ ಮಹಾಂತೇಶ್, ಎಸ್ ಮೂರ್ತಿಗೌಡ, ಎನ್.ಆಕಾಶ್, ಎನ್ ನರಸಪ್ಪ ಹಾಗೂ ಕಟ್ಟೆ ಸಂತೋಷ ತಮ್ಮ ಮೊದಲ ಮತವನ್ನು ಚಲಾಯಿಸಿ ಸಾಮೂಹಿಕವಾಗಿ ಸಂಭ್ರಮಿಸಿದರು. ಉಳಿದಂತೆ ಹೊಸಪೇಟೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಲ್ಲಿಯೂ ಯುವ ಮತದಾರರಲ್ಲಿ ಸಂಭ್ರಮ ಮನೆ ಮಾಡಿತು.
One attachment • Scanned by Gmail