ವಿಜಯನಗರ ಜಿಲ್ಲೆಯಲ್ಲಿ ವರ್ಷಧಾರೆ.ಗುಡುಗು ಸಹಿತ ಮಳೆ, ಹಾನಿಯಾದ ಬೆಳೆ, ತಂಪಾದ ಧರೆ


ಸಂಜೆವಾಣಿ ವಾರ್ತೆ
ಹೊಸಪೇಟೆ, ಏ.29 : ವಿಜಯನಗರ ಜಿಲ್ಲೆಯ ಹೊಸಪೇಟೆ ಸೇರಿದಂತೆ ಜಿಲ್ಲೆಯ ವಿವಿದಡೆ ಶುಕ್ರವಾರ ಸಂಜೆ ಬಿರುಗಾಳಿ, ಗುಡುಗು ಸಹಿತ ಮಳೆಯ ಪರಿಣಾಮ ಆಸ್ತಿ ಸೇರಿದಂತೆ ಬೆಳೆಹಾನಿಯಾದ ಘಟನೆ ಜರುಗಿದೆ.
ಪ್ರಮುಖವಾಗಿ ಕಮಲಾಪುರ ಹೋಬಳಿಯಲ್ಲಿ ಬಿರುಗಾಳಿ, ಗುಡುಗು ಸಹಿತ ವರ್ಷಧಾರೆಯಿಂದ ಬೆಳೆಹಾನಿಯಾದರೆ, ನಗರದಲ್ಲಿ ಅನಿಯಮಿತ ವಿದ್ಯುತ್ ಸಂಚಾರದ ಪರಿಣಾಮ ಮನೆಯ ಯಂತ್ರೋಪಕರಣಗಳು ಹಾಗೂ ವಿದ್ಯುತ್ ಕಂಬ ಮತ್ತು ದೊಡ್ಡ ದೊಡ್ಡ ಮರುಗಳು ಸಹ ನೆಲಕ್ಕೂರುಳಿ ಹಾನಿಯಾದ ಘಟನೆಯು ಜರುಗಿದೆ.
ಹೊಸಪೇಟೆ ತಾಲೂಕಿನ ಕಮಲಾಪುರ ಹೋಬಳಿಯಲ್ಲಿ ಅಪಾರ ಪ್ರಮಾಣದ ಬಾಳೆ ಬೆಳೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದ್ದು ಬೆಳೆದು ನಿಂತ ಬಾಳೆ ನೆಲಕ್ಕೂರುಳಿದೆ. ಸಂಜೆ ಸುಮಾರು 5 ಗಂಟೆಗೆ ಆರಂಭವಾದ ಬಿರುಗಾಳಿ ಕೇವಲ ರೈತರ ಹೊಲಗದ್ದೆಗಳಿಗೆ ಮಾತ್ರ ಸೀಮಿತವಾಗದೇ ಕಮಲಾಪುರ ಪಟ್ಟಣದ ಮುಖ್ಯ ರಸ್ತೆಯ ಅನೇಕ ಗಿಡ ಮರಗಳು ನೆಲಕ್ಕೂರುಳುವಂತೆ ಮಾಡಿದೆ. ಅನೇಕ ವಿದ್ಯುತ್ ಕಂಬಗಳುಸಹ ಅಲುಗಾಡುವಂತಾಗಿ ವಿದ್ಯುತ್ ಅವಘಡಕ್ಕೂ ಕಾರಣವಾಗಿದೆ.
ಹೊಸಪೇಟೆ ನಗರದಲ್ಲಿ ವಿದ್ಯುತ್ ಅವಘಡ
ಹೊಸಪೇಟೆ ನಗರದ ಚಪ್ಪರದಹಳ್ಳಿ ಸೇರಿದಂತೆ ಡ್ಯಾಮ ರಸ್ತೆಯಲ್ಲಿ ಬಿರುಗಾಳಿಯ ಹಿನ್ನೆಲೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಅನೇಕ ಮನೆಗಳಲ್ಲಿ ವಿದ್ಯುತ್ ಷ್ಯಾಟ್ ಸಕ್ಯೂಟ್‍ನಿಂದ ಟಿವಿ, ರೆಫ್ರೀಜಿರೇಟರ್ಸ್, ಮೊಟರ್ಸ್‍ಗಳು ಸುಟ್ಟುಹೋಗಿರುವ ಘಟನೆಯೂ ಜರುಗಿದೆ.
ಡ್ಯಾಂ ರಸ್ತೆಯಲ್ಲಿ ದೊಡ್ಡ ಮರಗಳು, ವಿದ್ಯುತ್ ಕಂಬಗಳು ಸಹ ನೆಲಕ್ಕೂರಳಿದ್ದು ಯಾವುದೆ ಪ್ರಾಣಹಾನಿಯಾಗಿಲ್ಲಾ ಎಂದು ವರದಿಯಾಗಿದೆ.
ಹೊಸಪೇಟೆ ತಾಲೂಕಿನ ಹೊಸಪೇಟೆ ನಗರ, ಗಾದಿಗನೂರು, ಪಾಪಿನಾಯಕನಹಳ್ಳಿ ಸೇರಿದಂತೆ ಕಮಲಾಪುರದಲ್ಲಿ  ಮೊದಲ ವರ್ಷಧಾರೆಯಾಗಿದ್ದು ಬಿಸಿಲ ಬೇಗೆಯಿಂದ ಬೆಂದುಹೋಗಿದ್ದ ಜನತೆಗೆ ಹರ್ಷ ತಂದು ನೀಡಿದೆ. ಈಗಾಗಲೆ ಕಳೆದೆರಡು ದಿನಗಳ ಹಿಂದೆ ಮರಿಯಮ್ಮನಹಳ್ಳಿ, ಬೊಮ್ಮನಹಳ್ಳಿಯಲ್ಲಿ ಮಳೆಯಾಗಿತು, ಜಿಲ್ಲೆಯ ಹಡಗಲಿ, ಕೂಡ್ಲಗಿಯಲ್ಲಿಯೂ ಮಳೆಯ ಅನುಭವವಾಗಿದೆ ಆದರೆ ಯಾವುದೆ ಹಾನಿ ಸಂಬವಿಸಿಲ್ಲಾ.
ಹೊಸಪೇಟೆ ತಾಲೂಕಿನ ರಾಮಸಾಗರ, ಬುಕ್ಕಸಾಗರ, ಕಮಲಾಪುರ ಸೇರಿದಂತೆ ಅನೇಕ ಕಡೆ ರೈತರ ಬಾಳೆ ನೆಲಸಮವಾಗಿದೆ, ಅಪಾರ ಪ್ರಮಾಣದಲ್ಲಿ ಆಗಿರುವ ಹಾನಿಯನ್ನು ತುಂಬುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ಕಾರದ ಮೂಲಕ ಹೆಚ್ಚಿನ ನೆರವು ನೀಡುವಂತ ಒತ್ತಾಯಿಸುತ್ತೇವೆ.
ಜೆ.ಕಾರ್ತೀಕ್
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ರಾಜ್ಯ ರೈತ ಸಂಘ .

ನಿನ್ನೆ ಸುರಿದ ಬಿರುಗಾಳಿ ಸಹಿತ ಗುಡುಗು ಸಿಡಿಲಿನೊಂದಗೆ ಸುರಿದ ಮಳೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ, ಎಲ್ಲಾ ತಹಶೀಲ್ದಾರರಿಗೆ ಸೂಕ್ತ ಮಾಹಿತಯನ್ನು ಪಡೆದು ವರದಿ ನೀಡುವಂತೆ ತಿಳಿಸಲಾಗಿದ್ದು ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಟಿ.ವೆಂಕಟೇಶ್
ಜಿಲ್ಲಾಧಿಕಾರಿಗಳು ವಿಜಯನಗರ