ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ28: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಪಂ ಸಿಇಒ ಸದಾಶಿವಪ್ರಭು, ಆರೋಗ್ಯ ಅಭಿಯಾನದ ಜಾಗೃತಿ ಪೆÇೀಸ್ಟರ್ ಬಿಡುಗಡೆ ಗೊಳಿಸಿದರು.
ಬಳಿಕ ಮಾತನಾಡಿದ ಅವರು, ಮಹಾತ್ಮ ಉದ್ಯೋಗ ಖಾತರಿ ರಾಷ್ಟ್ರೀಯ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾ ಪಂಚಾಯ್ತಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ‘ಗ್ರಾಮ ಆರೋಗ್ಯ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ನರೇಗಾ ಕೂಲಿಕಾರರ ಆರೋಗ್ಯ ಸುರಕ್ಷತೆಗೆ ಹೆಚ್ಚು ಕಾಳಜಿ ವಹಿಸಿರುವ ಜಿಪಂ, ಈಗಾಗಲೇ ಮೇ 22 ರಿಂದ ಆರೋಗ್ಯ ಅಮೃತ ಅಭಿಯಾನಗೆ ಚಾಲನೆ ನೀಡಿದೆ. ಮುಂದಿನ ಜೂನ್ 22ರವರೆಗೆ ಅಭಿಯಾನ ನಡೆಯಲಿದೆ. ರಾಷ್ಟ್ರೀಯ ಆರೋಗ್ಯ ಮಿಷನ್, ಕೆಎಚ್‍ಪಿಟಿ (ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್) ಸಹಯೋಗದಲ್ಲಿ ಈ ಆರೋಗ್ಯ ತಪಾಸಣೆ ನಡೆಯಲಿದೆ ಎಂದರು.
ಜಿಲ್ಲೆಯ 137 ಗ್ರಾಮ ಪಂಚಾಯಿತಿಗಳಲ್ಲಿ 58,910 ಕೂಲಿ ಕಾರ್ಮಿಕರು ಇದರ ಪ್ರಯೋಜನ ಪಡೆಯಲಿದ್ದಾರೆ. ಜಿಲ್ಲೆಯ 101 ಸ್ಥಳಗಳಲ್ಲಿ ಈಗಾಗಲೇ ಕೂಲಿ ಕಾರ್ಮಿಕರ ತಪಾಸಣೆ ಕಾರ್ಯ ನಡೆದಿದೆ ಎಂದರು ಈ ವೇಳೆ ಬಾಲ್ಯವಿವಾಹದ ಬಗ್ಗೆ ಜಾಗೃತಿ, ಬಾಲ್ಯ ವಿವಾಹದಿಂದಾಗುವ ಸಮಸ್ಯೆಗಳು, ಬಯಲು ಶೌಚಾಲಯದಿಂದ ಹರಡುವ ರೋಗರುಜಿನಗಳ ಕುರಿತಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಸ್ಥಳದಲ್ಲಿಯೇ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸುವುದು, ಆರೋಗ್ಯ ತಪಾಸಣೆಗೆ ಅಗತ್ಯ ಪರಿಕರಗಳನ್ನು ಆಯಾ ಗ್ರಾಮ ಪಂಚಾಯ್ತಿ ವಿವಿಧ ಅನುದಾನದಲ್ಲಿ ಖರೀದಿಸಲು ಅವಕಾಶವಿದೆ. ಹೀಗಾಗಿ ಮೊದಲ ಆದ್ಯತೆಯಲ್ಲಿ ಅವುಗಳನ್ನು ಖರಿದೀಸಬೇಕು. ಅರೋಗ್ಯ ಶಿಬಿರದ ಬಳಿ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೂಲಿ ಕಾರ್ಮಿಕರು, ಮೃತಪಟ್ಟರೆ, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ (2 ಲಕ್ಷ) ಪರಿಹಾರ ನೀಡುವುದು ಸೇರಿದಂತೆ ಆಕಸ್ಮಿಕ ಅಪಘಾತ, ಅನಾರೋಗ್ಯಕ್ಕೀಡಾದರೆ ಚಿಕಿತ್ಸೆಯ ವೆಚ್ಚವನ್ನು ಕೂಡ ಸರ್ಕಾರ ಭರಿಸಲಾಗುವುದು ಎಂದು ಮಾಹಿತಿ ನೀಡಿದರು. ಕೂಲಿ ಕಾರ್ಮಿಕರಿಗೆ ಅಯಷ್ಮಾನ್ ಭಾರತ ಕಾರ್ಡ್ ವಿತರಿಸಲಾಗಿದೆ, ಅದರಲ್ಲಿ 35,00,000 ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿದೆ. ಇ-ಶ್ರಮ್ ಕಾರ್ಡ್‍ನಲ್ಲಿ 3 2 ಲಕ್ಷದವರೆಗೆ ವಿಮಾ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.
ಉಪಕಾರ್ಯದರ್ಶಿ ತಿಮ್ಮಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಲೀಮ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು