ವಿಜಯನಗರ ಜಿಲ್ಲೆಗೆ ಕೂಡ್ಲಿಗಿ ತಾಲೂಕನ್ನು ಸೇರಿಸಿ – ಮಾಜಿ ಶಾಸಕ

ಕೂಡ್ಲಿಗಿ.ನ.21:-ನೂತನ ವಿಜಯನಗರ ಜಿಲ್ಲೆಗೆ ಬುಧವಾರದಂದು ಸಚಿವ ಸಂಪುಟದ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಕೂಡ್ಲಿಗಿ ತಾಲೂಕನ್ನು ಬಳ್ಳಾರಿ ಗೆ ಉಳಿಸಲಾಗಿದೆ ಎಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವಂದ್ವ ಹೇಳಿಕೆ ಸಂದೇಶ ಹರಿದಾಡುತ್ತಿದ್ದು. ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ರವೀಂದ್ರನಾಥ ಬಾಬು ಅವರು ಚಿಕ್ಕಜೋಗಿಹಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಕೂಡ್ಲಿಗಿ ತಾಲೂಕಿನ ಗಡಿ ಭಾಗದ ಕೆಲ ಹಳ್ಳಿಗಳಿಂದ ಬಳ್ಳಾರಿ ಜಿಲ್ಲಾ ಕೇಂದ್ರ 120 ಕಿಲೋಮೀಟರ್ ಇದ್ದು ಓಡಾಡುವುದು ತುಂಬಾ ಕಷ್ಟಕರವಾಗುತ್ತದೆ ಮತ್ತು ಈ ಹಿಂದೆ ಕಳೆದ ಎರಡು ವರ್ಷಗಳ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ನಾನು ಇದರ ಬಗ್ಗೆ ಚರ್ಚೆ ಮಾಡಿದ್ದೆ ಹೊಸಪೇಟೆ ಜಿಲ್ಲಾ ಕೇಂದ್ರವಾದರೆ ಕೂಡ್ಲಿಗಿ ತಾಲೂಕನ್ನು ಹೊಸಪೇಟೆಗೆ ಸೇರಸಲು ಭರವಸೆ ಕೊಟ್ಟಿದ್ದರು ಆದರೆ ಅವರ ಸರಕಾರ ಈಗಿಲ್ಲ ಅದಕ್ಕಾಗಿ ಈಗಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಪತ್ರದ ಮೂಲಕ ಕೂಡ್ಲಿಗಿ ತಾಲೂಕನ್ನು ಹೊಸಪೇಟೆಗೆ ಸೇರಿಸಬೇಕು ಇಲ್ಲವಾದರೆ ಬಳ್ಳಾರಿಯಲ್ಲಿ ಉಳಿಸಿದರೆ ಕೂಡ್ಲಿಗಿಗೆ ಸಹಾಯ ಆಯುಕ್ತರ ಕಚೇರಿ ಕೊಡಬೇಕು ಹಾಗೂ ಸಂಬಂಧಿಸಿದ ಎಲ್ಲಾ ಕಚೇರಿ ಕೂಡ್ಲಿಗಿಗೆ ಕೊಡಬೇಕು ಎಂದು ಕೇಳಿಕೊಂಡಿದ್ದೇನೆ ಎಂದರು.