ವಿಜಯನಗರ ಜಿಲ್ಲಾ ರಚನೆಯ ಪ್ರಕ್ರಿಯೆ ವಿಶೇಷಾಧಿಕಾರಿಯೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್

ಹೊಸಪೇಟೆ ಜೂ7: ಕರೋನಾ ಮಹಾಮಾರಿಯ ಪರಿಣಾಮ ಸ್ವಲ್ಪ ಮಟ್ಟಿನ ಹಿನ್ನಡೆ ಕಂಡಿದ್ದ ನೂತನ ವಿಜಯನಗರ ಜಿಲ್ಲಾ ರಚನೆಯ ಕಾರ್ಯ ಇದೀಗ ಮತ್ತೆ ಆರಂಭವಾದಂತಾಗಿದೆ.
ಒಂದು ಹಂತರ ಕೆಲಸಗಳನ್ನು ಪೂರ್ಣಗೊಳಿಸಿದ ನೂತನ ವಿಜಯನಗರ ಜಿಲ್ಲಾ ವಿಶೇಷಾಧಿಕಾರಿ ಅನಿರುದ್ದ ಶ್ರವಣರವರು ಸರ್ಕಾರಕ್ಕೆ ಜಿಲ್ಲಾ ವಿಭಜನೆಯ ಹಾಗೂ ನೂತನ ಹುದ್ದೆ ಸೃಜನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತೂವಾರಿ ಸಚಿವರೂ ಆಗಿರುವ ಆನಂದಸಿಂಗ್‍ರವರು ವಿಶೇಷಾಧಿಕಾರಿ ಅನಿರುದ್ದ ಶ್ರವಣ ಸೇರಿದಂತೆ ಪ್ರಮುಖ ಇಲಾಖಾಧಿಕಾರಿಗಳೊಂದಿಗೂ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಕರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಕೆಲ ತಿಂಗಳುಗಳಿಂದ ತಟಸ್ಥವಾಗಿದ್ದ ಜಿಲ್ಲಾ ರಚನೆಯ ಪ್ರಕ್ರೀಯೆ ಸದ್ಯ ಮತ್ತೆ ಮುನ್ನಡೆ ಕಾಣಲಾರಂಭಿಸಿದ್ದು ಕಳೆದೆರಡು ದಿನಗಳಿಂದ ವಿಜಯನಗರ ಜಿಲ್ಲಾ ವಿಶೇಷಾಧಿಕಾರಿ ಅನುರುದ್ದ ಶ್ರವಣರವರು ಹೊಸಪೇಟೆಗೆ ಬಂದು ತಮ್ಮ ದೈನಂದಿನ ಕಾರ್ಯಗಳನ್ನು ಆರಂಭಿಸಿದ್ದಾರೆ. ಈಗಾಗಲೆ ಸರ್ಕಾರಕ್ಕೆ ಜಿಲ್ಲಾ ರಚನೆಯಲ್ಲಿ ವಿವಿಧ 53 ಇಲಾಖೆಗಳ ಸೃಜನೆ, ಕೆಲವೂಂದು ಇಲಾಖೆಗಳ ವಿಭಜನೆ, ನಿಯೂಕ್ತಿ ಸೇರಿದಂತೆ ಒಂದು ಹಂತದ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಈ ಹಂತದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳೊಂದಿಗೂ ಸಭೆ ನಡೆಸಿದ್ದು ಅವರಿಂದಲೂ ಬಂದ ಕೆಲ ಸಲಹೆಗಳನ್ನು ಪರಿಗಣಿಸಿ ವರದಿ ಮಾಡಿರುವುದಾಗಿ ವಿಶೇಷಾಧಿಕಾರಿ ತಿಳಿಸಿದ್ದು ಈ ಬಗ್ಗೆ ಬಳ್ಳಾರಿ ಜಿಲ್ಲಾ ಉಸ್ತೂವಾರಿಗಳು ಆದ ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಆನಂದಸಿಂಗ್‍ರವರು ವಿಶೇಷಾಧಿಕಾರಿ ಹಾಗೂ ಸ್ಥಳೀಯ ಜಿಲ್ಲಾ ಹಂತರ ಅಧಿಕಾರಿಗಳ ಸಭೆಯನ್ನು ವಿಶೇಷಾಧಿಕಾರಿಗಳ ಕಚೇರಿಯಲ್ಲಿ ನಡೆಸಿ ಮಾಹಿತಿಗಳನ್ನು ಪಡೆದರು.
ಜಿಲ್ಲಾ ರಚನೆಗೆ ಬೇಕಾಗುವ ಆರ್ಥಿಕ ಸಂಪನ್ಮೂಲ, ಹಣಕಾಸು ವೆಚ್ಚಗಳು ಸೇರಿದಂತೆ ಅನುದಾನದ ಬಗ್ಗೆ ಸಮಗ್ರವರದಿಯನ್ನು ಈ ವಾರದ ಅಂತ್ಯದೊಳಗಾಗಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ, ನಗರಸಭೆಯ ಪೌರಾಯಕ್ತ ಮನ್ಸೂರ ಅಲಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.