ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸಿರಾಜ್ ಶೇಕ್ ನೇಮಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.31: ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸಿರಾಜ್ ಶೇಕ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.  ಶಿವಕುಮಾರ್ ಅವರು ಇಂದು  ಆದೇಶ ಹೊರಡಿಸಿದ್ದಾರೆ.
ಕೂಡ್ಲಿಗಿ ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಸಿರಾಜ್ ಶೇಕ್.
ಈವರೆಗೆ ಬಳ್ಳಾರಿ ಗ್ರಾಮೀಣ ಮತ್ತು ನಗರ ಜಿಲ್ಲೆಗಳು ಇದ್ದವು. ಈಗ ವಿಜಯನಗರ ಜಿಲ್ಲೆಗೆ ಎಂದು ಪ್ರತ್ಯೇಕವಾಗಿ ಅಧ್ಯಕ್ಷರನ್ನು ಮಾಡಿರುವುದರಿಂದ ಈಗ ಬಳ್ಳಾರಿ ಜಿಲ್ಲೆಗೆ ಪ್ರತ್ಯೇಕ ಅಧ್ಯಕ್ಷರ ನೇಮಕ ಮಾಡಲಿದ್ದಾರೆಂದು ತಿಳಿದು ಬಂದಿದೆ.