ವಿಜಯನಗರ ಜಿಲ್ಲಾ” ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ “ವೈಭವ ನೆನಪಿಸುವ ವೇದಿಕೆ”

ಅನಂತ ಜೋಶಿ
ಹೊಸಪೇಟೆ ಸೆ25: ಅಧಿಕೃತವಾಗಿ ಅಕ್ಟೋಬರ್ 2 ರಿಂದ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನೆಗೆ ಬೃಹತ್ ವೇದಿಕೆ ನಿರ್ಮಾಣ ಕಾರ್ಯಭರದಿಂದ ಆರಂಭವಾಗಿದೆ.
ಹಂಪಿಯ ಸ್ಮಾರಕಗಳ ಪ್ರತಿಬಿಂಬ ತೋರುವ, ಹಂಪಿಯೇ ಮರುನಿರ್ಮಾಣವಾಗಿದೆಯೋ ಎಂಬಂತೆ ನಿರ್ಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರೊಂದಿಗೆ ಚಾಲನೆ ನೀಡಲಿರುವ ವೇದಿಕೆ ವಿಜಯನಗರದ ವೈಭವವನ್ನು ನೆನಪಿಸೊ ಮಾದರಿಯ ವಾಸ್ತು ವಿನ್ಯಾಸ ಹೊಂದಿದ್ದು ಬೆಂಗಳೂರಿನ ನೂರಾರು ಕಾರ್ಮಿಕರು ವೇದಿಕೆಯ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ವಿಜಯನಗರಕ್ಕೆ ಹಸಿರು ನಿಶ್ಯಾನೆ ತೋರಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ಕೆ ಸಾಕ್ಷಿಯಾಗಲಿರುವ ವೇೀದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 100 ಅಡಿ ಅಗಲ ಹಾಗೂ 80 ಅಡಿ ಉದ್ದದ ವೇದಿಕೆಯನ್ನು ವಿನೂತನ ಹಾಗೂ ಮಾದರಿ ವೇದಿಕೆ ನಿರ್ಮಾಣಕಾರ್ಯ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಲ್ಲಿಯೇ ಭರದಿಂದ ಸಾಗಿದ್ದು ಅಂದಾಲು 70 ಅಡಿ ಉದ್ದವಾಗಿ ವಾಲ್ ನಿರ್ಮಾಣ ಪ್ರಾರಂಭವಾಗಿದೆ. ಈ ಹಿಂಬದಿಯ ವೇದಿಕೆಯಲ್ಲಿ ಹಂಪಿಯ ವೈಭವ ರಾರಾಜಿಸಲಿದ್ದು ನೂತನ ವಿಜಯನಗರ ಜಿಲ್ಲಾ ಕೇಂದ್ರಕ್ಕೆ ಸಾಕ್ಷಿಯಾಗಲಿದೆ. 
100 ಕಾರ್ಮಿಕರು ಬ್ಯಾಕ್‍ಡ್ರಾಫ್‍ವಾಲ್ ನಿರ್ಮಾಣ, ವೇದಿಕೆ ಸೂತ್ತಗೂಡೆ, ಗಣ್ಯರ ವಿಶ್ರಾಂತಿತಾಣಗಳು ಹಾಗೂ ವಿವಿಧ ಪ್ರವೇಶದ್ವಾರ ಅವುಗಳು ಸಹ ಗಣ್ಯರಿಗೆ, ಜನಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ ಪ್ರತೇಕವಾಗಿಯೇ ನಿರ್ಮಾಣವಾಗುತ್ತಿವೆ. 
ಮತ್ತೊಂದಡೆ ಇಡೀ ಮೈದಾನವನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ನಗರಸಭೆ ಪೌರ ಕಾರ್ಮಿಕರು ಮುಂದಾಗಿದ್ದಾರೆ, ಇರುವ ಶೌಚಾಲಯ ಅಣಿಮಾಡುವುದು, ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ ಕಾರ್ಯದಲ್ಲಿ ನಗರಸಭೆ ನಿರತವಾಗಿದೆ. ನಗರದ ತಾಲೂಕು ಕ್ರೀಡಾಂಗಣದಲ್ಲಿ ಆರಂಭವಾಗಿದ್ದು ಕಳೆದೆರಡು ದಿನಗಳಿಂದ ವೇದಿಕೆಯ ನಿರ್ಮಾಣಕ್ಕೆ ಬೇಕಾಗುವ ಪರಿಕರಗಳು ಬಂದು ಬೀಳುತ್ತಿದ್ದು ನಿನ್ನೆಯಿಂದಲೇ ವೇದಿಕೆಯ ಕಾರ್ಯ ಆರಂಭವಾಗಿದೆ. ಇಂದಿನಿಂದ ಮತ್ತೊಷ್ಟು ವೇಗ ಪಡೆಯಲಿದೆ ಜಿಲ್ಲಾ ಉಸ್ತೂವಾರಿ ಹಾಗೂ ಪ್ರವಾಸೋದ್ಯಮ ಸಚಿವ ಆನಂದಸಿಂಗ್‍ರವರ ಅನುಪಸ್ಥಿತಿಯಲ್ಲಿ ಮುಂದಾಳತ್ವವಹಿಸಿ ಪ್ರತಿಕ್ಷಣದ ಪ್ರಗತಿ ನೋಡಿಕೊಳ್ಳುತ್ತಿರುವ ಯುವ ಮುಖಂಡ ಸಂದೀಪ್‍ಸಿಂಗ್ ಮಾಹಿತಿ ನೀಡಿದ್ದು ಸಚಿವರು ಇಂದಿನಿಂದ ಇಲ್ಲಯೇ ಬೀಡುಬಿಟ್ಟು ನಿರ್ಮಾಣ ಕಾರ್ಯಕ್ಕೆ ವೇಗನೀಡಲಿದ್ದಾರೆ ಎಂದರು. ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ ಬಹುತೇಕ ವೇದಿಕೆಯ ನೀಲನಕ್ಷೆಯಂತೆಯೇ ಕಾರ್ಯ ನಡೆಯಲಿದೆ ಇಂದಿನಿಂದ ಸಚಿವ ಆನಂದಸಿಂಗ್ ಟೀಕಾಣಿಹೂಡಿ ಐತಿಹಾಸಿಕ ಕ್ಷಣಕ್ಕೆ ಮುನ್ನಡೆ ಬರೆಯಲಿದ್ದಾರೆ.
ಈ ಹಿಂದೆ ಬೇರೆ ಬೇರೆ ಹೊಸ ಜಿಲ್ಲೆಗಳ ನಿರ್ಮಾಣ ಹಾಗೂ ಆರಂಭದಲ್ಲಿ ಆದ ಅನುಭವನ್ನು ಗಮನದಲ್ಲಿಟ್ಟು ಪ್ರತಿಹಂತದಲ್ಲಿಯೂ ಮುಂಜಾಗೃತೆವಹಿಸಿ ಉದ್ಘಾಟನೆ ಅಣಿಯಾಗಲಾಗುವುದು. ಹೊಸ ಮಾದರಿಯ ಇತಿಹಾಸಕ್ಕೆ ವೇದಿಕೆ ಸಾಕ್ಷಿಯಾಗಲಿದೆ                         
ಆನಂದಸಿಂಗ್
ಪ್ರವಾಸೋದ್ಯಮ. ಪರಿಸರ ಮತ್ತು ಜೀವಶಾಸ್ತ್ರ ಸಚಿವರು