ವಿಜಯನಗರ ಕಾಲೋನಿಗೆ ಮೊದಲ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ8: ಹೊಸಪೇಟೆ ವಿಜಯನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಅನುಮೋದನೆಗೊಂಡ ಮೊದಲ ಕಾಲೋನಿಯಾದರು, ಈ ವರೆಗೂ ಒಂದೆ ಒಂದು ಅಭಿವೃದ್ಧಿ ಕೆಲಸ ಕಾಣದ ವಿಜಯನಗರ ಕಾಲೋನಿಗೆ ಮೊದಲ ಅಭಿವೃದ್ಧಿ ಕಾಂiÀರ್i ಆರಂಭವಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೊದಲ ರಸ್ತೆ ಅಭಿವೃದ್ಧಿಗೆ 20 ಲಕ್ಷ ಬಿಡುಗಡೆ ಮಾಡಿದ್ದು ಪ್ರಥಮ ರಸ್ತೆ ನಿರ್ಮಾಣ ಕಾರ್ಯವನ್ನು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಭೂಮಿ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ವಿಜಯನಗರ ಕಾಲೋನಿಯ ಮುಖ್ಯ ರಸ್ತೆಯ 210 ಮೀಟರ್ ರಸ್ತೆ ನಿರ್ಮಾಣಕ್ಕೆ ಬುಧುವಾರ ಬಹುತೇಕ ನಿವಾಸಿಗಳು ಜಾತಿಭೇದದ ತಾರತಮ್ಯವನ್ನು ಮರೆತು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಭೂಮಿ ಪೂಜೆ ನೆರವೇರಿಸಿ ಪ್ರಥಮ ಅಭಿವೃದ್ಧಿ ಕಾರ್ಯ ಆರಂಭಕ್ಕೆ ಸಂತಸ ವ್ಯಕ್ತಪಡಿಸಿದರು. ನಿರಂತರ ಹೋರಾಟ ಪತ್ರವ್ಯವಹಾರದ ನಡುವೆ ಇದೆ ಮೊದಲ ಬಾರಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ನಿವಾಸಿಗಳ ಸಂತಸಕ್ಕೆ ಕಾರಣವಾಗಿತು. ಪರಿಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ವಿಜಯನಗರ ಕಾಲೋನಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಜೀರ ಅಹಮ್ಮದ್ ಆರ್ ಶೇಕ್, ಉಪಾಧ್ಯಕ್ಷ ಎಂ.ಶಂಕ್ರಪ್ಪ, ಕಾರ್ಯದಶಿ ಸಿದ್ದಪ್ಪ, ್ ಖಚಾಂಚಿ ಬಿ. ಕಿಶೋರ್ ಸಹಕಾರ್ಯದರ್ಶಿ ಸಂಡೂರು ಸತ್ಯನಾರಾಯಣ, ಜಂಬುನಾಥ, ನವಾಜಿ ಸಾಬ್, ಅರವಿಂದ, ನೂರುಅಹಮ್ಮದ್, ಈರಣ್ಣ, ಮೈಲಾರಪ್ಪ, ವೀರಮ್ಮ, ಲಕ್ಷ್ಮೀ, ವರಲಕ್ಷ್ಮೀ, ಕವಿತಮ್ಮ, ಶೋಭಾ, ಅಮೃತಮ್ಮ ಮತ್ತು ವೀಣಾ, ಪದ್ಮಾವತಿ  ಸೇರಿದಂತೆ ಇತರರು  ಪಾಲ್ಗೊಂಡಿದ್ದರು.