ವಿಜಯನಗರ “ಕರ್ನಾಟಕ ಸಾಂಸ್ಕೃತಿಕ ಸಮ್ಮೇಳನ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು27: ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್‌ ಇದೆ 30 ಮತ್ತು 31ರಂದು 2ದಿನಗಳ ಶ್ರಾವಣ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಪತ್ರಕರ್ತ ರುದ್ರಪ್ಪ ಭಂಡಾರಿ ಹೇಳಿದರು.
ಅವರು ಮಂಗಳವಾರ ಹೊಸಪೇಟೆಯ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೆ ಜುಲೈ 30 ಮತ್ತು 31 ರಂದು ಹೊಸಪೇಟೆ ಗೌತಮ ನ ಬುದ್ಧ  ಹಾಲ್ ನಲ್ಲಿ ನಾಡಿನಾದ್ಯಂತ ವೈವಿದ್ಯಮಯ ಕಾರ್ಯ ಕಾರ್ಯಕ್ರಮಗಳ ಮಾಡುವ ಮನೆಮಾತಾಗಿರುವ ಸಂಘ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಪ್ರವಾಸೋದ್ಯಮ, ನೀರಾವರಿ, ಸಾರ್ವಜನಿಕ ಗ್ರಂಥಾಲಯ ಸೇವೆ ಕುರಿತು ವಿಚಾರಗೋಷ್ಠಿ, ಪುಸ್ತಕ ಲೋಕಾರ್ಪಣೆ,  ಅಪ್ಪಳಿಸು ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ, ಸಮಾಜದ‌ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರ ಸನ್ಮಾನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ನಡೆಸಲಾಗುವುದು.
ಕನ್ನಡ ಮತ್ತು ಸಂಸ್ಕೃತ ಇಲಾಖೆ ಸೇರಿದಂತೆ ವಿವಿದ ಕಲಾಪೋಷಕರು ಸಹಕಾರ ನೀಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಘಂಟೆ ಸೋಮಶೇಖರ, ನಿವೃತ್ತ ಪ್ರಾಚಾರ್ಯರ ಕಿನ್ನಿರಯ್ಯ, ಬಂದಿ ಭರಮಪ್ಪ ಹಾಜರಿದ್ದರು.