ವಿಜಯನಗರದ ಪ್ರಥಮ ಸಿಇಓ ಆಗಿ ಮಹಿಳಾ ಅಧಿಕಾರಿ ಕೆ.ಎಂ. ಗಾಯತ್ರಿ ನೇಮಕ

ಸಂಜೆವಾಣಿ ವಾರ್ತೆ
ಹೊಸಪೇಟೆ ಅ, 2- : ನೂತನ ವಿಜಯನಗರ ಜಿಲ್ಲೆಗೆ ಪ್ರಥಮ ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾಗಿ ಕೆ.ಎಂ.ಗಾಯತ್ರಿ ನೇಮಕ ಮಾಡಲಾಗಿದೆ. 
ಪ್ರಥಮ ಸಿಇಓ ಜೊತೆ ಪ್ರಥಮ ಮಹಿಳಾ ಅಧಿಕಾರಿಯೂ ಆಗಿರುವುದು ವಿಶೇಷವಾಗಿದ್ದು ಪಂಚಾಯಿತ್‍ರಾಜ್ ಇಲಾಖೆಯ ಮೈಸೂರು ನಜೀರ್‍ಸಾಬ್ ತರಬೇತಿ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳಾಗಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ನೂತನವಾಗಿ ಸೃಜನೆಯಾದ ವಿಜಯನಗರದ ಪ್ರಥಮ ಜಿಲ್ಲಾ ಪಂಚಾಯಿತ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ನೇಮಕಮಾಡಿ ಆದೇಶ ನೀಡಿದ್ದಾರೆ.
ಜಿಲ್ಲಾಧಿಕಾರಿ, ಜಿಲ್ಲಾ ಎಸ್‍ಪಿ ನಂತರ ನೇಮಕವಾದ ಮೂರನೇ ಅಧಿಕಾರಿಗಳಾಗಿದ್ದಾರೆ.