ವಿಜಯನಗರದ ನೂತನ ಜಿಲ್ಲಾಧಿಕಾರಿಯಾಗಿ ಎಂ.ಎಸ್.ದಿವಾಕರ


ಸಂಜೆವಾಣೆ ವಾರ್ತೆ
ಹೊಸಪೇಟೆ : ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಎಂ ಎಸ್.ದಿವಾಕರ ನೇಮಕೊಂಡಿದ್ದಾರೆ.
ಸೋಮವಾರ ಸಂಜೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಚಿತ್ರದುರ್ಗಾ ಜಿಲ್ಲಾ ಪಂಚಾಯಿತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ 2013ನೇ ಬ್ಯಾಸ್ ಐಎಎಸ್ ಅಧಿಕಾರಿಗಳಾದ ಎಂ.ಎಸ್.ದಿವಾಕರ ರವರನ್ನು ನೂತನ ವಿಜಯನಗರ ಜಿಲ್ಲಾಧಿಕಾರಿಗಳಾಗಿ ನೇಮಕ ಮಾಡಿದೆ. ಸದ್ಯ ಜಿಲ್ಲಾಧಿಕಾರಿಳಾಗಿದ್ದ ಟಿ.ವೆಂಕಟೇಶರವರನ್ನು ಬಳ್ಳಾರಿಯ ನೂತನ ಜಿಲ್ಲಾಧಿಕಾರಿಗಳಾಗಿ ನೇಮಕ ಮಾಡಿದ್ದು ಈ ಹಿಂದೆಯೂ ಅಪರ ಜಿಲ್ಲಾಧಿಕಾರಿಗಳಾಗಿಯೂ ಟಿ.ವೆಂಕಟೇಶ್ ಕಾರ್ಯನಿರ್ವಹಿಸಿದ್ದರು.

One attachment • Scanned by Gmail