ವಿಜಯನಗರದಲ್ಲಿ ಶರಣರ ಜೀವನ ದರ್ಶನ ಪ್ರವಚನ

ಕಲಬುರಗಿ:ಸೆ.4:ವಿಜಯನಗರ ಕಾಲನಿಯ ಶ್ರೀ ಗಣೇಶ ದೇವಸ್ಥಾನದ ಆವರಣದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಶರಣರ ಜೀವನ ದರ್ಶನ ಪ್ರವಚನದ ಅತಿ ವಿಜೃಂಬಣೆಯಿಂದ ನಡೆಯುತ್ತಿದೆ ಇದೆ ಸಂದರ್ಭದಲ್ಲಿ ಕಲಬುರಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಒಂಭತ್ತನೇ ಪೀಠಾಧಿಪತಿಯಾದ ಚಿರಂಜೀವಿ ಪೂಜ್ಯ ಶ್ರೀದೊಡ್ಡಪ್ಪ ಅಪ್ಪ ಅವರಿಗೆ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು ಪ್ರವಚನಕಾರರಾದ ಪೂಜ್ಯ ಶ್ರೀ ಬಂಡಯ್ಯ ಸ್ವಾಮಿಜೀ ಸಂಸ್ಥಾನ ಹಿರೇಮಠ ಸುಂಟನೂರ ಇವರು ಪ್ರವಚನದಲ್ಲಿ ಇವತ್ತಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯನ ಮಾನಸಿಕ ಒತ್ತಡವನ್ನು ಕಳೆದುಕೊಳ್ಳಲು ಶರಣ ಜೀವನ ಮತ್ತು ಅವರ ವಚನಗಳು ಬಹಳ ಮುಖ್ಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು ಕಾರ್ಯಕ್ರಮದಲ್ಲಿ ಜ್ಯೊತಿಷ್ಯ ರತ್ನ ಶ್ರೀ ಸಿದ್ದೇಶ್ವರ ಗುರುಜೀ ಸುಂಟನೂರ , ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಕಲ್ಪತರು ಸೇವಾ ಸಂಘದ ಸರ್ವ ಪದಾಧಿಕಾರಿಗಳು ಕಲಾವಿದರಾದ ಶ್ರೀ ಕಾಳಪ್ಪ ಗವಾಯಿಗಳು ಭಂಟನಳ್ಳಿ ಶ್ರೀ ಸಿದ್ದಣ್ಣ ದೇಸಾಯಿ ಕಲ್ಲೂರ್, ಮತ್ತು ವಿಜಯನಗರ ಎಲ್ಲ ಸದ್ಭಕ್ತರು ಭಾಗವಹಿಸಿದ್ದರು ಇದೆ ಸಂದರ್ಭದಲ್ಲಿ ಮಕ್ಕಳಿಂದ ರಂಗೋಲಿ ಸ್ಪರ್ಧೆ ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು