ವಿಜಯನಗರದಲ್ಲಿ  ಲೋಕಾಯುಕ್ತರಿಂದ  ದಾಳಿ ಜೆಸ್ಕಾಂ ಅರಣ್ಯ ಅಧಿಕಾರಿಗಳ ಮನೆ ಮೇಲೆ ದಾಳಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ31: ಹೊಸಪೇಟೆ, ಕೊಪ್ಪಳದ ಗಿಣಗೇರಾದಲ್ಲಿರೋ ಚೆಸ್ಕಾಂ ಅಧಿಕಾರಿ ಭಾಸ್ಕರ್ ನಿವಾಸದ ಮೇಲೆ ಹಾಗೂ ಅರಣ್ಯಾಧಿಕಾರಿ ರೇಣುಕಮ್ಮ ಮನೆಯ ಮೇಲು ಲೋಕಾಯುಕ್ತ ಅಧಿಕಾರಿಗಳು  ದಾಳಿ ಮಾಡಿದ್ದಾರೆ.
ಹೊಸಪೇಟೆ ಲೋಕಾಯುಕ್ತ ಇನ್ಸ್ಪೆಕ್ಟರ್ ರಾಜೇಶ್ ಲಮಾಣಿ, ಸುರೇಶ್ ನೇತೃತ್ವದಲ್ಲಿ ದಾಳಿನಡೆಸಲಾಗಿದ್ದು
ಹಗರಿಬೊಮ್ಮನ ಹಳ್ಳಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ  ಕೆಲಸ ನಿರ್ವಹಣೆ ಮಾಡುತ್ತಿದ್ದ ಭಾಸ್ಕರ್ ಹೊಸಪೇಟೆಯ ಜಂಬುನಾಥ ರಸ್ತೆಯಲ್ಲಿರೋ ಜಂಬುಕೇಶ್ವರ ಬಡಾವಣೆಗ ಒಂದು ಮನೆ, ಆಕಾಶವಾಣಿ ಪ್ರದೇಶದಲ್ಲಿರೋ  ಎರಡು ಮನೆ ಮತ್ತು ಕೊಪ್ಪಳದ ಗಿಣಗೇರಾದಲ್ಲಿರೋ ಒಂದು ಮನೆಯ ಮೇಲೆ ದಾಳಿ ಮಾಡಿರೋ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿಮಾಡಿದ್ದಾರೆ.
ಹೂವಿನ ಹಡಗಲಿಯ ಆರ್.ಎಪ್.ಓ ರೇಣುಕಮ್ಮ ಮನೆ ಮೇಲೂ ದಾಳಿ ಮಾಡಿ ಜಿಲ್ಲೆಯ ಹೂವಿನ ಹಡಗಲಿಯ ಆರ್ ಎಫ್ ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೂವಿನ ಹಡಲಿಯ ತಿಪ್ಪಾಪುರ ಗ್ರಾಮದಲ್ಲಿರೋ ಬಾಡಿಗೆ ಮನೆಯ ಮೇಲೆ ದಾಳಿ
ಬೆಳಗ್ಗೆಯಿಂದಲೇ ಶೋಧ ನಡೆಸುತ್ತಿರೋ ಲೋಕಾಯುಕ್ತ ಅಧಿಕಾರಿಗಳು  ಎರಡು ವಾಹನಹಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಳಿಂದ ಪರಿಶೀಲನೆ ನಡೆದಿದೆ ಸಂಪೂರ್ಣ ಕಾರ್ಯದ ನಂತರವೇ ನಿಖರ ಮಾಹಿತಿ ಲಭ್ಯ ವಾಗಬೇಕಿಗಿದೆ.