ವಿಜಯನಗರದಲ್ಲಿ ಮಳೆಯ ಸಿಂಚನ: ಹಂಪಿ ಸ್ಮಾರಕಗಳಲ್ಲಿ ಪ್ರತಿಬಿಂಬ

.
ಸಂಜೆವಾಣಿ ವಾರ್ತೆ
ಹೊಸಪೇಟೆ ಮೇ20: ಐತಿಹಾಸಿಹ ಹಂಪಿ ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ ಮಳೆಯ ಸಂಭ್ರಮ ಮುಂದುವರೆದಿದೆ.
ಮಳೆಯ ಹಿನ್ನೆಲೆಯಲ್ಲಿ ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ಸಾರ್ವಜನಿಕರಿಗೆ ಮಳೆಯ ಸಿಂಚನ ಒಂದಡೆ ತೆಪ್ಪಾಂಗಿಸಿದ್ದರೆ ಮತ್ತೊಂದಡೆ ಬೆಂದುಹೊಗಿದ್ದ ಭೂಮಿಯು ತಂಪಾಗುತ್ತಿದೆ. ಮತ್ತೊಂದಡೆ ಈ ವರುಣನ ಆರ್ಭಟ ನೈಸರ್ಗಿಕ ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗುತ್ತಿದ್ದು ಕಳೆ ಭಾನುವಾರ ರಾತ್ರಿ ಸುರಿದ ಮಳೆಗೆ ನೀರು ನಿಂತು ಹಂಪಿಯ ಐತಿಹಾಸಿಕ ಸ್ಮಾರಕಗಳು ರಮಣೀಯವಾಗಿ ನಿಂತನೀರಿನಲ್ಲಿಯೂ ಪ್ರತಿಬಿಂಬ ನೋಡುಗರು ಹಾಗೂ ಪ್ರವಾಸಿಗರಿಗೆ ನಯನ ಮನೋಹರವಾಗಿ ಕಂಗೊಳಿಸುತ್ತಿವೆ.