
ಸಂಜೆವಾಣಿ ವಾರ್ತೆ
ಹೊಸಪೇಟೆ ಜು20: ಬಿಸಿಲ ನಾಡು ಎಂದೆ ಖ್ಯಾತವಾದ ವಿಜಯನಗರದಲ್ಲಿ ಕಳೆ ಒಂದು ವಾರದಿಂದ ಸೂರ್ಯದೇವನ ದರ್ಶನವೇ ಇಲ್ಲವಾಗಿದೆ. ಕಳೆದೆರಡು ದಿನಗಳಿಂದಲಂತೂ ನಾವು ಮಲೆನಾಡಲ್ಲಿದ್ದೇವೆನೋ ಎಂಬಂತೆ ಬಾಸವಾಗಿದೆ.
ಮೊನ್ನೆ ರಾತ್ರಿ ಸುರಿಯಲಾರಂಭಿಸಿದ ಮಳೆ ನಿರಂತರವಾಗಿ ನಿನ್ನೆ ಬುಧುವಾರ ರಾತ್ರಿಯ ವರೆಗೂ ನಿರಂತರವಾಗಿ ಸುರಿದಿದ್ದು ಪ್ರವಾಣ ಹಾನಿಯಾಗಿರದಿರಬಹುದು ಆದರೆ ದೈನಂದಿನ ಜನ ಜೀವನವನ್ನಂತು ವ್ಯತೆಯವಾಗಿಸಿತು.
ಬೀದಿಬದಿ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಯಾವುದೆ ಗ್ರಾಹಕರಿಲ್ಲದೆ ಪರದಾಡುವಂತೆ ಮಾಡಿತ್ತು. ಒಟ್ಟಾರೆ ಬಿಸಿಲೂರಿನಲ್ಲಿ ಮಲೆನಾಡ ಅನುಭವವನ್ನು ನೀಡಿದೆ, ವರುಣದೇವ ಜನ ಜಾನುವಾರು ಹಾಗೂ ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದು ತುಂಗಭದ್ರಾ ನದಿಗೂ ನೂರು ಹರಿದು ಬರುಂತಾಗಿದೆ ಜಿಲ್ಲೆಯಾದ್ಯಂತ ವರುಣದ ಸಿಂಚನ ಮುಂದುವರೆದಿದೆ.
ಈ ಮಧ್ಯ ರೈತರು ಹೊಲಗದ್ದೆಗಳಲ್ಲಿ ನೀರು ಹರಿಯುವುದನ್ನು ಕಂಡು ಸಂಭ್ರಮಿಸಲು ಆಳು ಕಾಳುಗಳಲ್ಲಿದಿದ್ದರೂ ತಾವುಗಳೆ ಬಂಡಿಯಲ್ಲಿ ಬಂದು ನೋಡುತ್ತಿರುವುದು ಸಾಮಾನ್ಯವಾಗಿತು.