ವಿಜಯನಗರದಲ್ಲಿ “ನಾರಿಶಕ್ತಿ ರನ್ ಫಾರ್ ಫೀಟ್ನೇಸ್” :ಮೊದಲಿಗಳಾದ ಶ್ರೀದೇವಿ.


ಸಂಜೆವಾಣಿ ವಾರ್ತೆ
ಹೊಸಪೇಟೆ:ಮಾ,22- ವಿಜಯನಗರದಲ್ಲಿ ನಡೆಸ ನಾರಿಶಕ್ತಿ ರನ್ ಫಾರ್ ಪೀಟ್ನೇಸ್ ಓಟದ ಸ್ಪರ್ಧೆಯಲ್ಲಿ ನಾಗೇನಹಳ್ಳಿಯ ಶ್ರೀದೇವಿ ಮೊದಲಿಗಳಾಗಿ ಹೊರಹೊಮ್ಮಿದಳು.
ಹೊಸಪೇಟೆಯಲ್ಲಿ ನೆಹರೂ ಯುವ ಕೇಂದ್ರ ಬಳ್ಳಾರಿ, ವಿಜಯನಗರ ಜನನಿ  ವಿವಿದ್ದೋದೇಶ ಸಹಕಾರಿ ಸಂಘದ ಸಹಯೋದಲ್ಲಿ ಶುಕ್ರವಾರ ಬೆಳಿಗ್ಗೆ ಭಟ್ರಳ್ಳಿ ಆಂಜನೆಯ ದೇವಸ್ಥಾನ ದಿಂದ ಸ್ಟೇಷನ್ ರಸ್ತೆಯ ಫ್ರೀಡಂ ಪಾರ್ಕ್ ವರೆಗೂ ನಡೆದ ನಾರಿಶಕ್ತಿ ರನ್ ಫಾರ್ ಫೀಟ್ನೇಸ್   ಕಾರ್ಯಕ್ರಮದಲ್ಲಿ ನಾಗೇನಹಳ್ಳಿಯ ಶ್ರೀದೇವಿ ಸ್ಥಳೀಯ ಜ್ಯೋತಿ ಹಾಗೂ ವೀಣಾ‌. ಜಿ. ಕ್ರಮವಾಗಿ ಮೊದಲ,  ದ್ವೀತಿಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಖ್ಯಾತ ವೃದ್ಯೆ ಸುಮಂಗಲಮ್ಮ
ಚಾಲನೆ ನೀಡಿ ಮಾತನಾಡಿ ಮಹಿಳೆಯರು ಮಾನಸಿಕ, ದೈಹಿಕ ಸದೃಡತೆ ಅಗತ್ಯವಾಗಿದೆ ಸಮತೋಲನದೊಂದಿಗೆ ಕಾರ್ಯನಿರ್ವಹಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು ಮಹಿಳೆಯರ ಆತ್ಮವಿಶ್ವಾಸ ವೃದ್ಧಿಸಲು ಹೆಚ್ಚು ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಳಬೇಕು ಎಂದರು.
ಜನನಿ ಸಹಕಾರಿ ಸಂಘದ ಅನಂತ ಜೋಶಿ, ಪತಂಜಲಿ ಯೋಗ ಸಮಿತಿಯ ಶ್ರೀರಾಮ,  ಶೈಲಜಾ, ಸುಜಾತಾ, ಚಂದ್ರಿಕಾ ಅಶ್ವಿನಿ ಸೇರಿದಂತೆ 25ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.
ಪಾಲ್ಗೊಂಡ ಮಹಿಳೆಯರಿಗೆ ಪ್ರಮಾಣಪತ್ರ ಹಾಗೂ ಪ್ರಥಮ, ದ್ವೀತಿಯ ಹಾಗೂ ತೃತೀಯ ಬಹುಮಾನ ಪಡೆದವರಿಗೆ ಬಹುಮಾನ ನೀಡಲಾಯಿತು.