ವಿಜಯನಗರದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷ ಪೂರ್ವ ಸಿದ್ದತೆಗೆ ಕಾರ್ಯಾಗಾರ

ಹೊಸಪೇಟೆ ಮಾ26: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವಿದ್ದರೆ ಏನುಬೇಕಾದರೂ ಸಾಧನೆ ಮಾಡಲು ಸಾಧ್ಯ, ಈ ಸಾಧನೆಗೆ ಮೊದಲು ಕೀಳರಿಮೆಯಿಂದ ಹೊರಬರಬೇಕು ಎಂದು ಹೊಸಪೇಟೆ ಉಪವಿಭಾಗಾಧಿಕಾರಿ ಸಿದ್ಧರಾಮೇಶ್ವರ ಹೇಳಿದರು.
ಸ್ಥಳೀಯ ಸಿದ್ಧಪ್ರೀಯಾ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಸನ್ಮಾರ್ಗ ಗೆಳೆಯರ ಬಳಗ ಹಮ್ಮಿಕೊಂಡಿದ್ದ 20-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿಧ್ಯಾರ್ಥಿಗಳ ಪರೀಕ್ಷಾ ಪೂರ್ವಸಿದ್ಧತೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಶಿಕ್ಷಕರ ಭೋದನೆಯ ಜೊತೆ ನಾವುಗಳು ಪಾಠಗಳನ್ನು ಪುನರ್‍ನಮನ ಮಾಡಬೇಕು, ಅಲ್ಲದೆ ಅಭ್ಯಾಸಕ್ಕೆ ಪೂರ್ವ ಸಿದ್ಧತೆಗಳು ಸಹ ಅಷ್ಟೇ ಮುಖ್ಯವಾಗಲಿದ್ದು ಕಲಿತ ಪಾಠವನ್ನು ವಿಭಿನ್ನ ಶೈಲಿಯ ಅಭ್ಯಾಸಮಾಡುವ ಕ್ರಮ ಜ್ಞಾನಪನಾ ಸಾಮಥ್ರ್ಯ ವೃದ್ಧಿಯಾಗಲು ಸಹಕಾರಿಯಾಗಲಿದೆ ಒಂದು ಗುರಿಯೊಂದಿಗೆ ಮುನ್ನಡೆದಲ್ಲಿ ಅಂಕಗಳ ಜೊತೆ ಮೌಲ್ಯಗಳೊಂದಿಗೆ ಸಾಧನೆಗೆ ಕಾರಣವಾಗಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಕುಲಬುರ್ಗಿ ವಿಭಾಗದ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್ ಮಾತನಾಡಿ ಧ್ಯಾನದಿಂದ ಏಕಾಗ್ರತೆ, ಏಕಾಗ್ರತೆಯಿಂದ ಪ್ರತಿಯೊಬ್ಬರ ಯೋಚನೆ ಹಾಗೂ ಸಾಮಥ್ರ್ಯವೃದ್ಧಿಯಾಗಿ ಈ ಅಂಶ ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಮಾಡಲು ಸಹಕಾರಿಯಾಗಲಿದೆ, ಈ ನಿಟ್ಟಿನಲ್ಲಿ ಧ್ಯಾನ ಮಹತ್ವದ ಪಾತ್ರವಹಿಸುತ್ತದೆ, ವಿದ್ಯಾರ್ಥಿಗಳ ಮೊದಲ ಶತ್ರು ಭಯವಾಗಿದ್ದು ಇದು ಕರೋನಾ ಹಾಗೂ ಪರೀಕ್ಷಾ ಭಯಗಳಿಗಿಂತ ಭಯಾನಕವಾಗಿದೆ ಮೊದಲು ಇದರಿಂದ ಹೊರಬರಬೇಕು ಎಂದರು.
ಹೊಸಪೇಟೆ ಪೊಲೀಸ ಉಪವಿಭಾಗಾಧಿಕಾರಿ ರಘುಕುಮಾರ, ಬಿಜೆಪಿ ಯುವ ಮುಖಂಡ ಧರಮೇಂದ್ರಸಿಂಗ್, ಇಲಾಖೆಯ ಉಪನಿರ್ದೇಶಕ ಸಿ.ರಾಮಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಪಿ.ಸುನಂದಾ ಮಾತನಾಡಿ
ವೇದಿಕೆಯಲ್ಲಿ ಪೊಲೀಸ್ ಇನ್ಸ್‍ಪೇಕ್ಟರ್ ಶ್ರೀನಿವಾಸ, ಗುರು ಪಿಯು ಕಾಲೇಜು ಪ್ರಾಚಾರ್ಯ ವಿಜಯಕುಮಾರ, ಸನ್ಮಾರ್ಗ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಹಾಜರಿದ್ದರು, ಹರಿಪ್ರಸಾದ್ ಕನ್ನಡ, ನವೀನ್‍ಕುಮಾರ ವಿಜ್ಞಾನ, ಪುರುಷೋತ್ತಮ್ ಇಂಗ್ಲೀಷ್, ಗಣಿತ ವಿಷಯವಾಗಿ ಗೂಳೆಪ್ಪ ಉಪನ್ಯಾಸವನ್ನು ನೀಡಿದರು. ಹೊಸಪೇಟೆ ನಗರದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಸನ್ಮಾರ್ಗ ಗೆಳೆಯರ ಬಳಗದ ಯರ್ರಿಸ್ವಾಮಿ, ಶ್ರೀನಿವಾಸ, ಸಿದ್ದು ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.