ವಿಜಯದಾಸರ ಚಿತ್ರೀಕರಣ ಆರಂಭ

ರಾಯಚೂರು.ನ.೧೫- ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ದಾಸವರೆಣ್ಯ ಶ್ರೀ ವಿಜಯದಾಸರ ಚಿತ್ರ ನಿನ್ನೆ ಆರಂಭಿಸಲಾಯಿತು.
ಶಾಸಕ ಕೆ.ಶಿವನಗೌಡ ನಾಯಕ ಹಾಗೂ ಪಂ.ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಅವರಿಂದ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಲಾಯಿತು. ಮಹಾಮಹಿಮೆಯರಾದ ಶ್ರೀ ವಿಜಯದಾಸರ ಕುರಿತು ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಆರಂಭಿಸಲಾಯಿತು. ಮೊದಲ ಸನ್ನಿವೇಶಕ್ಕೆ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಪಂ. ಪೂಜ್ಯ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಆರಂಭ ಫಲಕ ತೋರಿದರು. ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಕ್ಯಾಮೆರಾ ಚಾಲನೆ ಮಾಡಿದರು. ವಿಜಯ ದಾಸರ ಪೂರ್ವಾರಾಧನೆ ದಿನದಂದು ಈ ಚಿತ್ರೀಕರಣ ಆರಂಭವಾಗಿದ್ದು, ವಿಶೇಷವಾಗಿದೆ. ವಿಜಯದಾಸರ ಪಾತ್ರದಲ್ಲಿ ತ್ರಿವಿಕ್ರಮ ಜೋಷಿ ಅವರು ಅಭಿನಯಿಸುತ್ತಿರುವುದು ವಿಶೇಷವಾಗಿದೆ.
ಶರತ್ ಜೋಷಿ, ಪ್ರಭಂಜನ ದೇಶಪಾಂಡೆ, ವಿಷ್ಣು ತೀರ್ಥ ಜೋಷಿ, ಪದ್ಮಕಲಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.