ಅರಕೇರಾ.ಅ.೨೫- ಅರಕೇರಾ ಗ್ರಾಮದಲ್ಲಿನ ಮಹಿಳೆಯರು ನವರಾತ್ರಿಹಬ್ಬದ ನಿಮಿತ್ಯ ಬೆಳಗಿನ ಜಾವ ೩ ಗಂಟೆಯಿಂದ ಬನ್ನಿ ಮರಕ್ಕೆ,ಸುಮಂಗಳೆಯರೆಲ್ಲಾ ನವರಾತ್ರಿಯ ಆರಂಭದ ದಿನದಿಂದ ಒಂಭತ್ತು ದಿನಗಳ ಕಾಲ ಮಹಿಳೆಯರು ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿರುವುದು ವಿಶೇಷವಾಗಿತ್ತು. ಪ್ರತಿ ದಿನ ಸೂರ್ಯೋದಯಕ್ಕೂ ಮುನ್ನ ನೂರಾರು ಜನ ಮಹಿಳೆಯರು ಪೂಜೆ ಸಲ್ಲಿಸಿದರು.
ಅರಕೇರಾ ಪಟ್ಟಣದಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿರುವ ಬನ್ನಿ ಮರಕ್ಕೆ ನವರಾತ್ರಿ ಅಂಗವಾಗಿ ಕಳೆದ ೯ದಿನಗಳಿಂದ ಆಚರಿಸಿದ ಬನ್ನಿ ಮಹಾಕಾಳಿ ಶಮಿವೃಕ್ಷ ಪೂಜಾ ವ್ರತವನ್ನು ಸುಮಂಗಲೆಯರು ಬುಧವಾರ ವಿಜಯದಶಮಿಯಂದು ವಿಶೇಷಪೂಜೆ ಸಲ್ಲಿಸಿ, ಶ್ರದ್ದಾ-ಭಕ್ತಿಯಿಂದ ವ್ರತ ಆಚರಿಸಿದರು. ತಮ್ಮ ಹರಕೆಯನ್ನು ತೀರಿಸಿ ಶ್ರದ್ದೆಯಿಂದ ಪೂಜೆ ಸಲ್ಲಿಸಿದರು.
ಸತತವಾಗಿ ೯ ದಿನಗಳ ಕಾಲ ಮಹಿಳೆಯರು ನವರಾತ್ರಿಹಬ್ಬದ ನಿಮಿತ್ಯ ಬೆಳಗಿನ ಜಾವ ಬನ್ನಿ ಮರಕ್ಕೆಪೂಜೆ ಸಲ್ಲಿಸಿ, ಇಂದು ವಿಜಯದಶಮಿ ಹಬ್ಬದ ಅಂಗವಾಗಿ ಬನ್ನಿಮರಕ್ಕೆ ಕೆಂಪು ಸೀರೆ ಉಡಿಸಿ ಹಸಿರುತೊರಣ, ನಿಂಬೆಹಣ್ಣಿನ ಹಾರ, ಚೆಂಡು ಹೂವಿನಹಾರ, ಅಕ್ಕಿ, ಬೇಳೆ, ಬೆಲ್ಲ, ಕೊಬ್ಬರಿ, ಅಡಿಕೆ, ಉತ್ತೂತ್ತಿ, ಕಲ್ಲುಸಕ್ಕರೆ, ಬಾಳೆಹಣ್ಣು ಸೇರಿದಂತೆ ಉಡಿತುಂಬಿ ವಿಶೇಷಪೂಜೆ ಮಾಡಿ ಕಾಯಿ, ಕಾರ್ಪೂರ ಅರ್ಪಿಸಿ ಸುಮಂಗಲಿಯರು ಶ್ರದ್ದಾ ಭಕ್ತಿಯಿಂದ ಪೂಜಾ ಆಚರಿಸುವ ಮೂಲಕ ಆರತಿಯ ದೀಪ ಬೇಳಗಿದರು. ನೈವಿಧ್ಯೆ ನೀಡಿ ಎಲ್ಲ ಮಹಿಳೆಯರು ಉಡಿ ತುಂಬಿ ಬನ್ನಿಮರಕ್ಕೆ ಹಸಿರು, ಕೆಂಪು ಕುಬ್ಬಸದಲ್ಲಿ ಬನ್ನಿಮರದ ಬುಡಕ್ಕೆ ಕಟ್ಟುತ್ತಾರೆ. ಎಲ್ಲಾರೂ ಭಕ್ತಿಪೂರ್ವಕವಾಗಿ ಬನ್ನಿಮರದ ಸುತ್ತಲ್ಲೂ ಪ್ರದಕ್ಷಣೆ ಮಾಡುವ ಮೂಲಕ ತಮ್ಮಗೆ ಮಂಗಳವನ್ನುಂಟು ಮಾಡುವಂತೆ ಪ್ರಾರ್ಥಿಸುವ ಮೂಲಕ ಹರಕೆಯನ್ನು ತೀರಿಸಿದರು ಮುತೈದೆಯರಿಗೆ ಒಬ್ಬರಿಗೂ ಒಬ್ಬರು ಕುಂಕುಮ್ಮ ನೀಡಿದರು.