ವಿಜಯಕ್ಕೆ ‘ರಾಘು’ ಕಾತುರ

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ” ರಾಘು” ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಈ ತಿಂಗಳಾಂತ್ಯದಲ್ಲಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಇಡೀ ಚಿತ್ರದಲ್ಲಿ ಒಂದೇ ಪಾತ್ರವನ್ನು ಇಟ್ಟುಕೊಂಡು   ಪ್ರಯೋಗಾತ್ಮಕ ಚಿತ್ರಕ್ಕೆ ಆನಂದ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ರಣ್ವಿತ್ ಶಿವಕುಮಾರ್ ಮತ್ತು ಅಭಿಷೇಕ್ ಕೋಟಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ರಾಘು ಮೂಲಕ ವಿಜಯ ರಾಘವೇಂದ್ರ ವಿಜಯದ ಮಾಲೆ ಹಾಕಿಕೊಳ್ಳುವ ಕಾತುರದಲ್ಲಿದ್ದಾರೆ. ಟ್ರೈಲರ್ ಬಿಡುಗಡೆ ಬಳಿಕ ಮಾತಿಗಿಳಿದ ನಟ ವಿಜಯ್ ರಾಘವೇಂದ್ರ, ಕನ್ನಡದಲ್ಲಿ ಸೊಲೋ ಪಾತ್ರ ಅಂದರೆ ಸೋಲುವ ಪಾತ್ರ ಎಂದು ಥಟ್ಟನೆ ನೆನಪಾಗುತ್ತದೆ.  ಸೋತರೆ ಎನ್ನುವ ಭಯ .ಇಂಗ್ಲೀಷ್ ನ ಸೋಲೋ ಪದದ ಒಂಟಿ ಪಾತ್ರ. ಗೆಲ್ಲಿಸಿ‌ಕೊಡಿ ಎಂದು ಕೇಳಿಕೊಂಡರು.

ಚಿತ್ರ ಬಿಡುಗಡೆಯಾದ ಮೇಲೆ ಜನ ನೋಡಿದ ನಂತರ ಮಾತನಾಡುತ್ತೇನೆ. ಹಿತವಾದ ಗೊಂದಲದಲ್ಲಿದ್ದೇನೆ. ಅದುವೇ ರಾಘು ಚಿತ್ರದ ಕುತೂಹಲ. ಕ್ರೈಮ್ ಥ್ರಿಲ್ಲರ್, ಪೋಲೀಸ್ ಠಾಣೆ, ವಿಲನ್ , ಎಲ್ಲಾ ಇದ್ದಾರೆ ಆದರೆ  ಇಡೀ ಸಿನಿಮಾ ಒಬ್ಬನೇ ಕಲಾವಿದ. ಸ್ಮಶಾನದಲ್ಲಿ ಒಬ್ಬನೇ. ಬೈತಾರೆ, ಹೊಡಿತಾರೆ ಎಲ್ಲವೂ ಒಂದೆ ಎಂದಾಗ ಅಚ್ಚರಿ ಆಯ್ತು. ರಾಘು ಸಿನಿಮಾ ತುಂಬಾ ಮುಖ್ಯ.ಕನ್ನಡದ ಸಿನಿಮಾ ಅಲ್ಲ.ಬೇರೆ ರೀತಿಯ ಸಿನಿಮಾ ಎನ್ನುವುದು ತಿಳಿಯಲಿದೆ‌ ಎಂದರು.

ನಿರ್ದೇಶಕ ಆನಂದ್ ರಾಜ್,ರಾಗಿ ಮುದ್ದೆ ಬಿರಿಯಾನಿ ಮಿಶ್ರಣ ಮಾಡಿ ಹದಗೊಳಿಸಿರುವ ಥ್ರಿಲ್ಲರ್ ಸಿನಿಮಾ. ,ಕ್ಲೈಮಾಕ್ಸ್ ನಲ್ಲಿ ಟ್ಬಿಸ್ಟ್, ಅಚ್ಚರಿ ಇದೆ ಎಂದರು.

ನಿರ್ಮಾಪಕ ರಣ್ವಿತ್ ಶಿವಕುಮಾರ್,  ರಾಘು ಎಮೋಷನ್.  ಚಿತ್ರಕ್ಕೆ ಹೆಸರು ಕೊಟ್ಟಿದ್ದೇ ವಿಜಯ್ ರಾಘವೇಂದ್ರ, ಶಿವಣ್ಣ ಅವರು ಚಿತ್ರಕ್ಕೆ ವಾಯ್ಸ್ ಡಬ್ ಮಾಡಿದ್ದಾರೆ ಎಂದರು

ಮತ್ತೊಬ್ಬ ನಿರ್ಮಾಪಕ ಅಭಿಷೇಕ್ ಕೋಟಾ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಅಥರ್ವ ಆರ್ಯ ಸಂಭಾಷಣೆ ಬರೆದಿದ್ದು ಒಳ್ಳೆಯ ಪ್ರಯತ್ನ ಎಲ್ಲರ ಸಹಕಾರವಿರಲಿ ಎಂದರು. ಸೂರಜ್ ಜೋಯಿಸ್ ಸಂಗೀತ ಚಿತ್ರಕ್ಕಿದೆ.