ವಿಜಡಂ ಕಾಲೇಜು ವಿದ್ಯಾರ್ಥಿಗೆ 275ನೇ ರ್ಯಾಂಕ್

ಬೀದರ:ಸೆ.25: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯ ಪಶು ವೈದ್ಯಕೀಯ ವಿಜ್ಞಾನ(ಬಿ.ವಿ.ಎಸ್ಸಿ) ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ (ಬಿ.ಎನ್.ವೈ.ಎಸ್) ವಿಭಾಗಗಳಲ್ಲಿ ಇಲ್ಲಿಯ ವಿಜಡಂ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸೈಯದ್ ರಿಯಾನ್ ಹುಸೈನಿ ಸೈಯದ್ ಫಾರೂಕ್ ಹುಸೈನಿ 275ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.
ಪಶು ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಹುಮೇರಾ ಕಶಫ್ ಮೊಹಮ್ಮದ್ ನಸೀರ್ 1,094, ಫುಜೈಲ್ ಅಸ್ಲಂ ಅನೀಬ್ ಅಸ್ಲಂ 3,444, ಇಫ್ಫತ್ ಬೇಗಂ ಅಬ್ದುಲ್ ಹಮೀದ್ 5,654, ಮಹೆಕ್ ಫಾತಿಮಾ ಮೊಹಮ್ಮದ್ ಫಸಿಹುದ್ದಿನ್ 6,855, ಮೊಹಮ್ಮದ್ ಆಸಿಫ್ ಖುರೇಶಿ 7,484, ಖಾಜಾ ಮೊಯಿನೊದ್ದಿನ್ ಖುರೇಶಿ ಅಬ್ದುಲ್ ಖಯೂಮ್ ಖುರೇಶಿ 9,019ನೇ ರ್ಯಾಂಕ್ ಗಳಿಸಿದ್ದಾರೆ ಎಂದು ವಿಜಡಂ ಕಾಲೇಜು ಕಾರ್ಯದರ್ಶಿ ಮೊಹಮ್ಮದ್ ಆಸಿಫೊದ್ದಿನ್ ತಿಳಿಸಿದ್ದಾರೆ.
ಪಶು ವೈದ್ಯಕೀಯ ವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಕಾಲೇಜಿನ 30, ಎಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್‍ಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಸೀಟು ಪಡೆಯಲಿದ್ದಾರೆ ಎಂದು ಹೇಳಿದ್ದಾರೆ.
ನೀಟ್ ರಿಪೀಟರ್‍ಗಳಿಗೆ ಒಂದು ಕೋಟಿ ರೂ. ವಿದ್ಯಾರ್ಥಿ ವೇತನ ಘೋಷಿಸಲಾಗಿದೆ. ನೀಟ್‍ನಲ್ಲಿ 400 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಉಚಿತ ನೀಟ್ ತರಬೇತಿ ಕೊಡಲಾಗುವುದು ಎಂದು ಹೇಳಿದ್ದಾರೆ.
ಸನ್ಮಾನ: ಕೆಸಿಇಟಿಯಲ್ಲಿ ಸಾಧನೆಗೈದ ಸೈಯದ್ ರಿಯಾನ್ ಹುಸೈನಿ ಸೈಯದ್ ಫಾರೂಕ್ ಹುಸೈನಿ ಅವರನ್ನು ಕಾಲೇಜಿನಲ್ಲಿ ವಿಜಡಂ ಸಂಸ್ಥೆಯ ಜಂಟಿ ಕಾರ್ಯದರ್ಶಿ ಮೊಹಮ್ಮದ್ ಸಲಾವುದ್ದಿನ್ ಫರ್ಹಾನ್ ಸನ್ಮಾನಿಸಿದರು.