ಚಿಕ್ಕಬಳ್ಳಾಪುರ,ಜು೧೧:ತಾಲೂಕಿನ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಎಂದೆ ಹೆಸರು ಪಡೆದಿರುವ ಪಾಪಾಗ್ನಿ ಮಠದಲ್ಲಿ ಶ್ರೀ ಶರಭ ಯೋಗೇಂದ್ರ ಸ್ವಾಮಿಗಳ ೩೫೦ನೇ ಜಯಂತೋತ್ಸವ ಹಾಗೂ ಶ್ರೀವೀರ ಬ್ರಹ್ಮೇಂದ್ರ ಸ್ವಾಮಿ ಬ್ರಹ್ಮರಥೋತ್ಸವ ಅತ್ಯಂತ ವಿಜ್ರಂಭಣೆಯಿಂದ ಹಾಗೂ ಶ್ರದ್ಧಾಭಕ್ತಿ ಪೂರ್ವಕವಾಗಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ವಿಶೇಷವಾಗಿ ಹೋಮ ಒಳಗೊಂಡಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಯಿತು
ಕ್ರಮಗಳಲ್ಲಿ ತಾಲೂಕಿನ ವಿಶ್ವಕರ್ಮ ಜನಾಂಗದ ಮುಖಂಡರು ಒಳಗೊಂಡಂತೆ ಪಾಪಗ್ನಿ ಮಠದ ಭಕ್ತರು ಪಾಲ್ಗೊಂಡಿದ್ದರು
ತಾಲೂಕಿಗೆ ಸುಮಾರು ೩ ಕಿ.ಮೀ ಸಮೀಪದಲ್ಲಿ ಮೈಲಪ್ಪನಹಳ್ಳಿ ಮಾರ್ಗವಾಗಿ ತೆರಳಿದರೆ ಕಾಣುವುದೇ ಪಾಪಗ್ನಿ ಮಠ ಈ ಮಠದಲ್ಲಿ ಮಹಿಮಾ ಪೂರ್ಣವೆನಿಸುವ ನವಗ್ರಹಗಳು ಶ್ರೀ ಕಾಶಿ ವಿಶ್ವನಾಥೇಶ್ವರ ದೇವರು ಶ್ರೀ ಅನ್ನಪೂರ್ಣೇಶ್ವರಿ ದೇವಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳ ಸಾಕು ತಂದೆ ತಾಯಿಗಳಾದ ಶ್ರೀ ಶರಭ ಯೋಗೇಂದ್ರ ಸ್ವಾಮಿಗಳ ಶ್ರೀ ಪಾಪಮಾಂಬ ವೀರ ಭೋಜಯಾಚಾರ್ಯರ ದಿವ್ಯ ಸಮಾಧಿ ಜಲ ಲಿಂಗೇಶ್ವರ ಸ್ವಾಮಿ ಕಲ್ಯಾಣಿ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಇವುಗಳನ್ನು ಒಳಗೊಂಡ ಪಾಪಾಗ್ನಿ ಕ್ಷೇತ್ರ ಕರ್ನಾಟಕ ಮತ್ತು ಆಂಧ್ರಪ್ರದೇಶದ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವುದು ವಿಶೇಷ ಎನಿಸಿದೆ ಪ್ರತಿವರ್ಷ ಈ ದೇವಾಲಯದಲ್ಲಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ರಥೋತ್ಸವ ಆರಾಧನೋತ್ಸವ ಶ್ರೀ ಶರಭ ಯೋಗೇಂದ್ರ ಸ್ವಾಮಿಗಳ ಆರಾಧನೆ ಮುಂತಾದವುಗಳು ನಡೆಯುತ್ತದೆ. ಕಾರ್ತಿಕ ಮಾಸದಲ್ಲಿ ವಿಶೇಷ ದೀಪೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿದ್ದು ನಿರಂತರವಾಗಿ ಆಂಧ್ರ ಮತ್ತು ಕರ್ನಾಟಕ ಭಕ್ತಾದಿಗಳು ಇಲ್ಲಿಗೆ ಆಗಮಿಸುವುದು ವಿಶೇಷ.