ವಿಚ್ಛೇದನದ ನಂತರ ಕಪಿಲ್ ಶರ್ಮಾ ಕಾರ್ಯಕ್ರಮಕ್ಕೆ ಆಗಮಿಸಿದ ಸಾನಿಯಾ ಮಿರ್ಜಾ!

ವಿಚ್ಛೇದನದ ಕೆಲವು ತಿಂಗಳ ನಂತರ, ಕಪಿಲ್ ಶರ್ಮಾ ಅವರ ಹೊಸ ಶೋನಲ್ಲಿ ಸಾನಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ಈ ಮಾಹಿತಿಯು ಸಾನಿಯಾ ಅವರ ಇನ್ಸ್ಟ್ರಾದಿಂದ ಬಂದಿದೆ.


ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಶೀಘ್ರದಲ್ಲೇ ಕಪಿಲ್ ಶರ್ಮಾ ಅವರ ಹೊಸ ಹಾಸ್ಯ ಕಾರ್ಯಕ್ರಮ ’ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಟಗಾರ್ತಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ, ಅದರಲ್ಲಿ ಅವರು ’ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಶೋಗಾಗಿ ಸಾನಿಯಾ ಕೆಂಪು ಬಣ್ಣದ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ. ಸಾನಿಯಾ ೨೦೦೧ ರಲ್ಲಿ ತಮ್ಮ ಟೆನಿಸ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು, ಆದರೆ ಅವರು ೨೦೨೩ ರಲ್ಲಿ ಟೆನಿಸ್‌ನಿಂದ ನಿವೃತ್ತರಾದರು.


ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಅವರು ತಮ್ಮ ಸಹೋದರಿ ಅನಮ್ ಮಿರ್ಜಾ ಮತ್ತು ಸ್ನೇಹಿತೆ ಫರಾ ಖಾನ್ ಅವರೊಂದಿಗೆ ಕಪಿಲ್ ಅವರ ಶೋನಲ್ಲಿ ಅನೇಕ ಬಾರಿ ಭಾಗವಹಿಸಿದ್ದಾರೆ. ಈ ಬಾರಿ ಅವರು ತಮ್ಮ ಮಾಜಿ ಪತಿ ಮತ್ತು ಮಾಜಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್‌ನಿಂದ ವಿಚ್ಛೇದನ ಪಡೆದ ನಂತರ ’ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾನಿಯಾ ಶೋಯೆಬ್ ವಿಚ್ಛೇದನ:
ವಿಚ್ಛೇದನದ ಬಗ್ಗೆ ಮಾತನಾಡುವಾಗ, ಸಾನಿಯಾ ಮಿರ್ಜಾ ತಮ್ಮ ವೈಯಕ್ತಿಕ ಜೀವನವನ್ನು ಸಾರ್ವಜನಿಕರಿಂದ ದೂರವಿರಿಸಲು ಇಷ್ಟಪಡುತ್ತಾರೆ ಎಂದು ಸಾನಿಯಾ ಕುಟುಂಬ ಹೇಳಿತ್ತು. ಆದರೆ, ಕೆಲವು ತಿಂಗಳ ಹಿಂದೆ ಸಾನಿಯಾ ಮತ್ತು ಶೋಯೆಬ್ ವಿಚ್ಛೇದನ ಪಡೆದಿದ್ದಾರೆ. ಕೇವಲ ೫ ತಿಂಗಳ ಡೇಟಿಂಗ್ ನಂತರ ಸಾನಿಯಾ ಪಾಕಿಸ್ತಾನಿ ಕ್ರಿಕೆಟಿಗನನ್ನು ವಿವಾಹವಾದರು. ೨೦೧೮ ರಲ್ಲಿ, ಸಾನಿಯಾ ಕೂಡ ಒಬ್ಬ ಮಗನಿಗೆ ಜನ್ಮ ನೀಡಿದರು, ಅವರಿಗೆ ’ಇಜಾನ್ ಮಿರ್ಜಾ ಮಲಿಕ್’ ಎಂದು ಹೆಸರಿಸಲಾಯಿತು.
ನಟಿ ಸನಾ ಜಾವೇದ್ ಜೊತೆ ಶೋಯೆಬ್ ಎರಡನೇ ಮದುವೆ: ಶೋಯೆಬ್ ಈ ವರ್ಷದ ಜನವರಿಯಲ್ಲಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಈ ದಂಪತಿ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಸಾನಿಯಾ ಮಿರ್ಜಾ ೨೦೧೦ ರಲ್ಲಿ ಶೋಯೆಬ್ ಮಲಿಕ್ ರನ್ನು ವಿವಾಹವಾಗಿದ್ದರು. ನಟಿಯೊಂದಿಗೆ ಇದು ಅವರ ಮೂರನೇ ವಿವಾಹವಾಗಿದೆ.

ಲಾರೆನ್ಸ್ ಬಿಷ್ಣೋಯ್ ಬೆದರಿಕೆಯ ಹೊರತಾಗಿಯೂ ಸಲ್ಮಾನ್ ಖಾನ್ ರನ್ನು ಭೇಟಿಯಾಗಲು ಬಂದ ಶಿಲ್ಪಾ ಶೆಟ್ಟಿ

ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದ ೪ ನೇ ದಿನಕ್ಕೆ ನಟಿ ಶಿಲ್ಪಾ ಶೆಟ್ಟಿ ಅವರ ಯೋಗಕ್ಷೇಮವನ್ನು ವಿಚಾರಿಸಲು ನಟ ಸಲ್ಮಾನ್ ರ ಮನೆಗೆ ಬಂದರು. ಶಿಲ್ಪಾ ತನ್ನ ಕುಟುಂಬದೊಂದಿಗೆ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ನಡುವೆ ಜಾರಿ ನಿರ್ದೇಶನಾಲಯ ಅವರ ಕೆಲವು ಆಸ್ತಿಸಂಪತ್ತು ಜಪ್ತಿಮಾಡಿದೆ.
ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಶಿಲ್ಪಾ ಶೆಟ್ಟಿ ಅವರ ಮನೆಗೆ ಬಂದಿದ್ದ ವೀಡಿಯೋ ವೈರಲ್ ಆಗಿದ್ದು ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಪ್ರಕರಣದ ಚರ್ಚೆಗಳು ಇನ್ನೂ ಮುಂದುವರಿದಿದೆ.


ಕಳೆದ ಭಾನುವಾರ ಮುಂಜಾನೆ ಇಬ್ಬರು ಬೈಕ್ ಸವಾರರು ಭಾಯಿಜಾನ್ ಅವರ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ೫ ಸುತ್ತು ಗುಂಡು ಹಾರಿಸಿದ್ದರು. ಈ ಪ್ರಕರಣ ಭೇದಿಸುವಲ್ಲಿ ಪೊಲೀಸರು ಭರ್ಜರಿ ಯಶಸ್ಸು ಸಾಧಿಸಿದ್ದಾರೆ . ಇಬ್ವರು ಶೂಟರ್ ಗಳನ್ನೂ ಬಂಧಿಸಲಾಗಿದೆ. ಈ ನಡುವೆ ಗುಂಡಿನ ದಾಳಿಯ ೪ ದಿನಗಳ ನಂತರ, ಶಿಲ್ಪಾ ಶೆಟ್ಟಿ ತನ್ನ ಸ್ನೇಹದ ಕರ್ತವ್ಯವನ್ನು ಪೂರೈಸಲು ಸಲ್ಮಾನ್ ಖಾನ್ ಅವರ ಮನೆಯನ್ನು ತಲುಪಿದರು. ಆವಾಗ ಪತಿ ರಾಜ್ ಕುಂದ್ರಾ ಮತ್ತು ತಾಯಿ ಸುನಂದಾ ಶೆಟ್ಟಿ ಅವರೊಂದಿಗೆ ಭಾಯಿಜಾನ್‌ನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಸಲ್ಮಾನ್-ಶಿಲ್ಪಾ ಸ್ನೇಹ:
ಸಲ್ಮಾನ್ ಖಾನ್ ಮತ್ತು ಶಿಲ್ಪಾ ಶೆಟ್ಟಿ ತುಂಬಾ ಹಳೆಯ ಸ್ನೇಹಿತರು ಮತ್ತು ಇಬ್ಬರೂ ಅನೇಕ ಬಾರಿ ಶೋಗಳಲ್ಲಿ ಒಟ್ಟಿಗೆ ಮೋಜು ಮಾಡಿರುವುದನ್ನು ನೋಡಲಾಗಿದೆ. ಸಲ್ಮಾನ್ ಖಾನ್ ಅವರು ಶಿಲ್ಪಾ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಗುಂಡು ಹಾರಿಸಿದ ನಂತರ, ಶಿಲ್ಪಾ ಮತ್ತು ಅವರ ಇಡೀ ಕುಟುಂಬ ಭಾಯಿಜಾನ್ ಅವರನ್ನು ಭೇಟಿ ಮಾಡಲು ಮನೆಗೆ ಬಂದಿದ್ದಾರೆ.


ಸಲ್ಮಾನ್ ಖಾನ್ ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಯಾವಾಗಲೂ ತನ್ನ ಸ್ನೇಹಿತರೊಂದಿಗೆ ಇರುತ್ತಾರೆ. ಸಲ್ಮಾನ್ ಸಹ ಶಿಲ್ಪಾ ಅವರೊಂದಿಗೆ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರ ಅಭಿಮಾನಿಗಳು ಸಹ ಅವರ ಸಂಬಂಧವನ್ನು ಇಷ್ಟಪಡುತ್ತಾರೆ. ರಿಯಾಲಿಟಿ ಶೋಗಳಲ್ಲಿಯೂ ಸಹ, ಶಿಲ್ಪಾ ಮತ್ತು ಸಲ್ಮಾನ್ ಆಗಾಗ್ಗೆ ಮೋಜು ಮಾಡುವುದನ್ನು ಜನ ನೋಡುತ್ತಾರೆ ಮತ್ತು ಅವರ ಸ್ನೇಹದ ಕಥೆಗಳನ್ನು ಸಹ ಹೇಳುತ್ತಾರೆ.
ಅಭಿಮಾನಿಗಳು ಹೊಗಳುತ್ತಿದ್ದಾರೆ:
ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಕಾರಲ್ಲಿ ಇಳಿಯುತ್ತಿರುವ ಶಿಲ್ಪಾ ಶೆಟ್ಟಿ ಅವರ ವೀಡಿಯೊವನ್ನು ಫೋಟೋಗ್ರಾಫರ್ ಗಳು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಇದನ್ನು ನೋಡಿದ ನಂತರ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಇದುವರೆಗೆ ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡಲು ಅವರ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬಾಬಾ ಸಿದ್ದಿಕಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮಾತ್ರ ಬಂದಿದ್ದರು. ಭಾಯಿಜಾನ್ ಅವರನ್ನು ಭೇಟಿ ಮಾಡಲು ಇಂಡಸ್ಟ್ರಿಯಿಂದ ಬಂದ ಮೊದಲ ವ್ಯಕ್ತಿಯೆಂದರೆ ಶಿಲ್ಪಾ ಶೆಟ್ಟಿ ಕುಟುಂಬ.. ವೀಡಿಯೋ ಕುರಿತು ಪ್ರತಿಕ್ರಿಯಿಸಿದ ನೆಟ್ಟಿಗರು, ’ಅವರ ಸ್ನೇಹ ಎಷ್ಟು ಮಧುರವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ’ ಎಂದು ಬರೆದಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಜೊತೆಗಿನ ಸಂಪರ್ಕದ ತನಿಖೆ:
ಭಾಯಿಜಾನ್ ಮನೆಗೆ ಗುಂಡು ಹಾರಿಸಿದವರನ್ನು ಬಂಧಿಸಲಾಗಿದ್ದರೂ, ಮುಂಬೈ ಪೊಲೀಸರು ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆ ಆರೋಪಿಗಳ ಸಂಪರ್ಕದ ಬಗ್ಗೆ ಮುಂಬೈ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಲಾರೆನ್ಸ್ ಬಿಷ್ಣೋಯ್ ಈಗಾಗಲೇ ಹಲವಾರು ಬಾರಿ ಭಾಯಿಜಾನ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ, ಆತನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಪೋಸ್ಟ್ ವೈರಲ್ ಆಗಿತ್ತು, ಅದರಲ್ಲಿ ಆತ ಫೈರಿಂಗ್ ಪ್ರಕರಣದ ಜವಾಬ್ದಾರಿಯನ್ನು ತಾನು ತೆಗೆದುಕೊಳ್ಳುತ್ತಿದ್ದುದಾಗಿ ಹೇಳಿದ್ದಾನೆ.
ಈ ನಡುವೆ ಶಿಲ್ಪಾ ಶೆಟ್ಟಿ ಬಗ್ಗೆ ಮಾತನಾಡಿದರೆ ಅವರ ಪತಿ ರಾಜ್ ಕುಂದ್ರಾ ಕೂಡಾ ಸುದ್ದಿಯಲ್ಲಿದ್ದಾರೆ. ಜಾರಿ ನಿರ್ದೇಶನಾಲಯ ಇವರ ವಿರುದ್ದ (ಇಡಿ) ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಮತ್ತು ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರ ೯೮ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ .