ವಿಚಿತ್ರ ಡ್ರೆಸ್ ಧರಿಸಿ ತರಾಟೆಗೆ ಒಳಗಾದ ಉರ್ಫಿ ಜಾವೇದ್

ಮುಂಬೈ, ಜೂ.೨೫- ತನ್ನ ವಿಚಿತ್ರವಾದ ಬಟ್ಟೆಗಳಿಂದ ಸದಾ ಸುದ್ದಿಯಲ್ಲಿರುವ ಏಕೈಕ ನಟಿ ಉರ್ಫಿ ಜಾವೇದ್ ಎಂದು ಹೇಳಬಹುದು. ನಟಿ, ಮಾಡೆಲ್, ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಅವರು ವಿಚಿತ್ರವಾದ ಬಟ್ಟೆಗಳನ್ನು ಧರಿಸುವುದರಿಂದ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ -ವಿವಾದ ಸೃಷ್ಟಿ ಮಾಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಹ, ಕೆಲವರು ಆವರು ಧರಿಸಿರುವ ಬಟ್ಟೆಯ ವಿನ್ಯಾಸಕನನ್ನು ಹುಡುಕುತ್ತಿದ್ದಾರಂತೆ .
ಉರ್ಫಿ ಜಾವೇದ್ ಮುಜುಗರಕ್ಕೊಳಗಾಗುವಂತ ಡ್ರೆಸ್ ಕಂಡ ಹಿರಿಯ ವ್ಯಕ್ತಿಯೊಬ್ಬರು, ಆಕೆಯನ್ನು ಬಹಿರಂಗವಾಗಿ ಟೀಕಿಸಿರುವ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ಇದೀಗ ಉರ್ಫಿಯ ಡಿಫರೆಂಟ್ ಡ್ರೆಸ್ ಕಂಡ ಹಿರಿಯ ವ್ಯಕ್ತಿಯೊಬ್ಬರು, ಆಕೆಯನ್ನು ಬಹಿರಂಗವಾಗಿ ಟೀಕಿಸಿರುವ ಘಟನೆ ನಡೆದಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಜೊತೆ ಉರ್ಫಿ ಜಗಳವಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಉರ್ಫಿಯ ಪಾರದರ್ಶಕ ಉಡುಗೆಯಲ್ಲಿ ಕಂಡು ಮುಜುಗರಕ್ಕೊಳಗಾದ ವ್ಯಕ್ತಿ ಆಕೆಯನ್ನು ಟೀಕಿಸಿದ್ದಾರೆ. ತಕ್ಷಣವೇ ಉರ್ಫಿ ಹಿಂದಿರುಗಿ ಆ ವ್ಯಕ್ತಿಗೆ ಉತ್ತರ ನೀಡಿದ್ದು, ನಟಿ ಮತ್ತೊಮ್ಮೆ ಟ್ರೋಲ್ ಆಗಲು ಇದು ಕಾರಣವಾಗಿದೆ.
ಪಾಪರಾಜಿಗಳು ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಉರ್ಫಿ ಜಾವೇದ್ ಗ್ರೀನ್ ಬ್ಯಾಕ್‌ಲೆಸ್ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೂದಲನ್ನು ಪಿಂಕ್ ಬಣ್ಣಕ್ಕೆ ಬದಲಾಯಿಸಿದ್ದು, ಮೇಲಕ್ಕೆ ಎತ್ತಿ ಕಟ್ಟಿದ್ದಾರೆ. ಆದರೆ ಆಕೆಯ ಡ್ರೆಸ್ ಹಿರಿಯ ವ್ಯಕ್ತಿಯೊಬ್ಬರಿಗೆ ಇರಿಸುಮುರಿಸು ಉಂಟು ಮಾಡಿದೆ. ಇದಕ್ಕಾಗಿ ಉರ್ಫಿ ಜಾವೇದ್ ಅನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಇಂತಹ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ. ನೀವು ಭಾರತದ ಹೆಸರನ್ನು ಹಾಳು ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.


ಇದರಿಂದ ರೊಚ್ಚಿಗೆದ್ದ ಉರ್ಫಿ ವಾಪಸ್ ಅದೇ ವ್ಯಕ್ತಿಗೆ ತಿರುಗಿಸಿ ಮಾತನಾಡಿದ್ದಾರೆ. ನಿಮ್ಮ ಅಪ್ಪನದ್ದು ಇಲ್ಲೇನಾದ್ರೂ ಕಳೆದು ಹೋಗ್ತಾ ಇದ್ಯಾ?ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಈ ಸಂಭಾಷಣೆಯು ವೈರಲ್ ಆದ ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಿಸುತ್ತದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಉರ್ಫಿ ಜಾವೇದ್ ಸುದ್ದಿಯಾಗಿದ್ದಾರೆ.
ಕಸೌತಿ ಜಿಂದಗಿ ಕೇ ಮತ್ತು ಯೇ ರಿಕ್ತಾ ಕ್ಯಾ ಕೆಹ್ಲಾತಾ ಹೈ ಸೇರಿದಂತೆ ಹಲವಾರು ಟಿವಿ ಶೋಗಳಲ್ಲಿ ಉರ್ಫಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ರಿಯಾಲಿಟಿ ಟಿವಿ ಶೋ ಸ್ಪಿಟ್ಟಿಲ್ಲಾದ ೧೪ ನೇ ಆವೃತ್ತಿಯಲ್ಲಿ ಮಿಸ್ಟೀಫ್ ಮೇಕರ್ ಆಗಿ ಕಾಣಿಸಿಕೊಂಡಿದ್ದರು. ಉರ್ಫಿ ಜಾವೇದ್ ವಿಭಿನ್ನ ಶೈಲಿಯಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.
ಇಲ್ಲಿಯವರೆಗೆ, ಉರ್ಫಿ ಅನಗತ್ಯ ವಸ್ತುಗಳಿಂದ ಮಾಡಿದ ಉಡುಪುಗಳನ್ನು ಧರಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇದೇ ನನ್ನ ಫ್ಯಾಷನ್ ಎಂದಿದ್ದಾರೆ. ವರದಿಗಳ ಪ್ರಕಾರ ಉರ್ಫಿ, ಏಕ್ತಾ ಕಪೂರ್ ಅವರ ಲವ್ ಸೆಕ್ಸ್ ಔರ್ ಧೋಖಾ ೨ ನೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.